Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್...

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ

5 April 2023 12:56 AM IST
share
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ

ನ್ಯೂಯಾರ್ಕ್, ಎ. 5: ನೀಲಿಚಿತ್ರ ನಟಿಯೊಬ್ಬರ ಬಾಯಿ ಮುಚ್ಚಿಸಲು ಅವರಿಗೆ ಹಣ ನೀಡಿದ ವಿಷಯವನ್ನು 2016ರ ಚುನಾವಣೆಯ ಸಂದರ್ಭದಲ್ಲಿ ಬಚ್ಚಿಟ್ಟಿರುವ ಮತ್ತು ಅದಕ್ಕಾಗಿ ಕಂಪೆನಿಯ ಲೆಕ್ಕಗಳನ್ನು ತಿದ್ದಿರುವ ಆರೋಪದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಮಂಗಳವಾರ ಬಂಧಿಸಲಾಗಿದೆ. ಇದರೊಂದಿಗೆ ಕ್ರಿಮಿನಲ್ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾದ ಅಮೆರಿಕದ ಮೊದಲ ಅಧ್ಯಕ್ಷ (ಹಾಲಿ ಅಥವಾ ಮಾಜಿ)ರಾಗಿ ಟ್ರಂಪ್ ಇತಿಹಾಸ ಸೇರಿದ್ದಾರೆ.

2006ರಲ್ಲಿ ಟ್ರಂಪ್ ಜೊತೆ ನಡೆದ ಲೈಂಗಿಕ ಸಮಾಗಮದ ಬಗ್ಗೆ ಬಾಯಿ ಮುಚ್ಚಿಕೊಂಡಿರುವುದಕ್ಕಾಗಿ ಟ್ರಂಪ್ ಮಾಜಿ ವಕೀಲ ಮೈಕಲ್ ಕೋಹನ್ ನೀಲಿಚಿತ್ರ ನಟಿ ಸ್ಟಾರ್ಮಿ ಡೇನಿಯಲ್ಸ್ಗೆ 1,30,000 ಡಾಲರ್ (1.06 ಕೋಟಿ ರೂಪಾಯಿ) ಪಾವತಿಸಿದ್ದಾರೆ ಎನ್ನಲಾಗಿದೆ.

ಮ್ಯಾನ್ಹಟನ್ ಜಿಲ್ಲಾ ಅಟಾರ್ನಿ ಆಲ್ವಿನ್ ಬ್ರಾಗ್, ಟ್ರಂಪ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಮೊಕದ್ದಮೆಯ ಪ್ರಧಾನ ಭಾಗ, ಹಣ ಪಾವತಿಯನ್ನು ಮರೆಮಾಚುವುದಕ್ಕಾಗಿ ಟ್ರಂಪ್ಗೆ ಸೇರಿದ ಕಂಪೆನಿಯೊಂದರ ಲೆಕ್ಕಪತ್ರಗಳನ್ನು ತಿರುಚಿದ್ದಕ್ಕೆ ಮತ್ತು ತಪ್ಪು ಲೆಕ್ಕಗಳನ್ನು ನೀಡಿರುವುದಕ್ಕೆ ಸಂಬಂಧಿಸಿದೆ.

ಈ ವ್ಯವಹಾರದಲ್ಲಿ ಭಾಗಿಯಾಗಿರುವುದಕ್ಕಾಗಿ ಕೋಹನ್ ಫೆಡರಲ್ ಜೈಲಿನಲ್ಲಿ ಒಂದು ವರ್ಷದ ಶಿಕ್ಷೆ ಅನುಭವಿಸಿದ್ದಾರೆ ಹಾಗೂ ಎರಡು ವರ್ಷಗಳನ್ನು ಗೃಹಬಂಧನದಲ್ಲಿ ಕಳೆದಿದ್ದಾರೆ. ಈ ಪ್ರಕರಣದಲ್ಲಿ ಮುಂದುವರಿಯಲು ಅವರೇ ತನಿಖಾಧಿಕಾರಿಗಳಿಗೆ ದಾಖಲೆಗಳನ್ನು ಒದಗಿಸಿದ್ದಾರೆ ಹಾಗೂ ಸಾಕ್ಷ ನುಡಿದಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪ್ರಾಸಿಕ್ಯೂಟರ್ಗಳು ಅಂತಿಮವಾಗಿ, ನೀಲಿಚಿತ್ರ ನಟಿಗೆ ಬಾಯಿ ಮುಚ್ಚಿಕೊಂಡಿರಲು ಹಣ ನೀಡಿದ ಪ್ರಕರಣದಲ್ಲಿ ಟ್ರಂಪ್ ವಿರುದ್ಧ 34 ಆರೋಪಗಳನ್ನು ಹೊರಿಸಿದ್ದಾರೆ.

ಈಗಾಗಲೇ ಎರಡು ಬಾರಿ ವಾಗ್ದಂಡನೆಗೆ ಒಳಗಾಗಿರುವ ಮತ್ತು ಒಂದು ಬಾರಿ ದೋಷಾರೋಪಣೆಗೆ ಒಳಗಾಗಿರುವ ಟ್ರಂಪ್ ವಿರುದ್ಧ ನ್ಯೂಯಾರ್ಕ್ ಸುಪ್ರೀಮ್ ಕೋರ್ಟ್ ನ್ಯಾಯಾಧೀಶ ಜುವಾನ್ ಮರ್ಚನ್ರ ಸಮ್ಮುಖದಲ್ಲಿ, ಹೊಸ ಪ್ರಕರಣಕ್ಕೆ ಸಂಬಂಧಿಸಿ ದೋಷಾರೋಪ ಹೊರಿಸಲಾಯಿತು. ಬಂಧನಕ್ಕೂ ಮುನ್ನ ಟ್ರಂಪ್ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಹಾಜರಾದರು. ತನ್ನ ಕಂಪೆನಿಯ ವ್ಯವಹಾರಗಳ ಬಗ್ಗೆ ತಪ್ಪು ಲೆಕ್ಕಗಳನ್ನು ನೀಡಿರುವುದಕ್ಕೆ ಸಂಬಂಧಿಸಿ ಟ್ರಂಪ್ ವಿರುದ್ಧ 34 ಮೊಕದ್ದಮೆಗಳನ್ನು ಹೂಡಲಾಯಿತು. ಆದರೆ, ಯಾವುದೇ ಪ್ರಕರಣದಲ್ಲಿ ಟ್ರಂಪ್ ತಪ್ಪೊಪ್ಪಿಕೊಳ್ಳಲಿಲ್ಲ.

ಆಗ ಅವರನ್ನು ಬಂಧಿಸಲಾಯಿತು, ಅವರ ಬೆರಳಚ್ಚುಗಳನ್ನು ಪಡೆದುಕೊಳ್ಳಲಾಯಿತು. ಇನ್ನು ಡಿಸೆಂಬರ್ನಲ್ಲಿ ಟ್ರಂಪ್ ಮುಂದಿನ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದೆ. ಭದ್ರತೆಯ ಕಾರಣದಿಂದಾಗಿ ತನ್ನ ಕಕ್ಷಿಗಾರನಿಗೆ ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು ಎಂಬುದಾಗಿ ಟ್ರಂಪ್ರ ವಕೀಲರು ನ್ಯಾಯಾಲಯವನ್ನು ಕೋರಿದರು. ಅದಕ್ಕೆ ನ್ಯಾಯಾಧೀಶರು ಅನುಮೋದನೆ ನೀಡಿದರು.

ನ್ಯಾಯಾಲಯ ಆವರಣಕ್ಕೆ ಭಾರೀ ಭದ್ರತೆ

ವರದಿಗಾರರು ಮತ್ತು ಕುತೂಹಲಿಗರು ಸೇರಿದಂತೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಮುನ್ನಾ ದಿನ ರಾತ್ರಿಯಿಂದಲೇ ಸಾಲುಗಟ್ಟಿ ನಿಂತಿದ್ದರು. ನ್ಯಾಯಾಲಯದ ಒಳಗೆ ಆಸನವೊಂದನ್ನು ಪಡೆಯುವುದು ಅವರ ಉದ್ದೇಶವಾಗಿತ್ತು.

ನ್ಯಾಯಾಲಯ ಆವರಣಕ್ಕೆ ಪೊಲೀಸರು ಭಾರೀ ಭದ್ರತೆ ಒದಗಿಸಿದ್ದರು. ಅಲ್ಲಲ್ಲಿ ತಡೆಬೇಲಿಗಳನ್ನು ಇರಿಸಲಾಗಿತ್ತು ಹಾಗೂ ಜನರು ಒಂದಕ್ಕಿಂತ ಹೆಚ್ಚಿನ ಭದ್ರತಾ ವಲಯಗಳನ್ನು ದಾಟಿ ಮುಂದಕ್ಕೆ ಹೋಗಬೇಕಾಗಿತ್ತು.

ನಮ್ಮ ದೇಶಕ್ಕೆ ಮಾಡಿದ ಅವಮಾನ

ಬಂಧನದ ಬಳಿಕ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಟ್ರಂಪ್ ನನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯು ನಮ್ಮ ದೇಶಕ್ಕೆ ಮಾಡಿದ ಅವಮಾನವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ತನ್ನ ವಿರುದ್ಧದ ದೋಷಾರೋಪಣೆಯ ಗಂಟೆಗಳ ಬಳಿಕ, ಫ್ಲೋರಿಡದ ತನ್ನ ಮಾರ್-ಎ-ಲಾಗೊ ನಿವಾಸದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ‘‘ಅಮೆರಿಕದಲ್ಲಿ ಇಂಥಹದ್ದೊಂದು ಘಟನೆ ನಡೆಯಬಹುದು ಎಂದು ನಾನು ಯಾವತ್ತೂ ಭಾವಿಸಿರಲಿಲ್ಲ’’ ಎಂದು ಹೇಳಿದರು.

‘‘ನಾನು ಮಾಡಿದ ಒಂದೇ ಒಂದು ಅಪರಾಧ ಎಂದರೆ ನಾಶ ಮಾಡಲು ನೋಡುತ್ತಿರುವವರಿಂದ ನಮ್ಮ ದೇಶವನ್ನು ನಿರ್ಭಯವಾಗಿ ರಕ್ಷಣೆ ಮಾಡಿರುವುದು.. ಇದು ನಮ್ಮ ದೇಶಕ್ಕೆ ಅವಮಾನ’’ ಎಂದು ಹೇಳದಿರು. ‘‘ಕಟ್ಟಾ ಎಡಪಂಥೀಯ ಪ್ರಾಸಿಕ್ಯೂಟರ್ಗಳು ಯಾವುದೇ ಬೆಲೆ ತೆತ್ತಾದರೂ ನನ್ನನ್ನು ಜೈಲಿಗೆ ಹಾಕಬೇಕೆಂದು ನಿರ್ಧರಿಸಿದ್ದಾರೆ’’ ಎಂದು ಅವರು ಆರೋಪಿಸಿದರು.

ಇನ್ನೋರ್ವ ಮಹಿಳೆಗೂ ಬಾಯಿ ಮುಚ್ಚಿಕೊಂಡಿರಲು ಹಣ

ಟ್ರಂಪ್ರ ಮಾಜಿ ವಕೀಲ ಮೈಕಲ್ ಕೋಹನ್ ನೀಲಿಚಿತ್ರ ನಟಿ ಸ್ಟಾರ್ಮಿ ಡೇನಿಯಲ್ಸ್ಗೆ ಬಾಯಿ ಮುಚ್ಚಿಕೊಂಡಿರಲು 1,30,000 ಡಾಲರ್ ಹಣ ನೀಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ಅಷ್ಟೇ ಅಲ್ಲದೆ, ಇನ್ನೋರ್ವ ಮಹಿಳೆ ಮೆಕ್ಡೂಗಲ್ಗೆ ಬಾಯಿ ಮುಚ್ಚಿಕೊಂಡಿರುವುದಕ್ಕೆ 1,50,00 ಡಾಲರ್ (1.23 ಕೋಟಿ ರೂಪಾಯಿ) ಪಾವತಿಸಲಾಗಿದೆ ಎಂಬುದಾಗಿಯೂ ಆರೋಪಿಸಲಾಗಿದೆ. ಈ ಮಹಿಳೆಯೊಂದಿಗೂ ಟ್ರಂಪ್ ಲೈಂಗಿಕ ಸಂಬಂಧ ಹೊಂದಿದ್ದರು ಎಂಬುದಾಗಿ ಆರೋಪಿಸಲಾಗಿದೆ.

ಜೊತೆಗೆ, ಡೋರ್ಮನ್ (ಕಾವಲುಗಾರ)ಗೆ 30,000 ಡಾಲರ್ (24.61 ಲಕ್ಷ ರೂಪಾಯಿ) ನೀಡಲಾಗಿದೆ ಎನ್ನಲಾಗಿದೆ. ಮೆಕ್ಡೂಗಲ್ ಮತ್ತು ಡೋರ್ಮನ್ಗೆ ಎಎಮ್ಐ ಎಂಬ ಸಂಸ್ಥೆಯು ಹಣ ಪಾವತಿಸಿದೆ ಎಂದು ಆರೋಪಪಟ್ಟಿ ಹೇಳಿದೆ.

ಎಎಮ್ಐ ‘ನ್ಯಾಶನಲ್ ಎನ್ಕ್ವಯರರ್’ ಪತ್ರಿಕೆಯ ಪ್ರಕಾಶಕ ಸಂಸ್ಥೆಯಾಗಿದೆ

share
Next Story
X