ನಮ್ಮ ಕಿಚ್ಚ ತಮ್ಮನ್ನು ಮಾರಿಕೊಳ್ಳುವವರಲ್ಲ: ಸುದೀಪ್ ಬಿಜೆಪಿ ಸೇರ್ಪಡೆ ವದಂತಿ ನಡುವೆ ಪ್ರಕಾಶ್ ರಾಜ್ ಟ್ವೀಟ್

ಬೆಂಗಳೂರು, ಎ.5: ಕಿಚ್ಚ ಸುದೀಪ್ ಬಿಜೆಪಿಗೆ ಸೇರುತ್ತಾರೆಂಬ ವಿಚಾರಕ್ಕೆ ಸಂಬಂಧಿಸಿ ನಟ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ.
''ಬಿಜೆಪಿ ಸೋಲುವ ಭಯದಲ್ಲಿ ಈ ರೀತಿಯ ಸುದ್ದಿ ಹರಡುತ್ತಿದೆ. ಭ್ರಷ್ಟ BJP ಹರಡುತ್ತಿರುವ ಸುದ್ದಿ ಸುಳ್ಳು ಅಂತಾ ನಾನು ನಂಬುತ್ತೇನೆ. ನಮ್ಮ ಕಿಚ್ಚ ತಮ್ಮನ್ನು ತಾವು ಮಾರಿಕೊಳ್ಳುವವರಲ್ಲ. #justasking'' ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಸುದೀಪ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ರಾಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ನಟ ಸುದೀಪ್ ಗೆ ಬೆದರಿಕೆ ಪತ್ರ: ಪ್ರಕರಣ ದಾಖಲು
Next Story