ಅಮೆರಿಕ: ಮೊಬೈಲ್ ಪಾವತಿ ವ್ಯವಸ್ಥೆ ರೂಪಿಸಿದ್ದ ಬಾಬ್ಲೀ ಹತ್ಯೆ
ವಾಷಿಂಗ್ಟನ್, ಎ.5: ಮೊಬೈಲ್ ಮೂಲಕ ನಗದು ಪಾವತಿಸುವ ವ್ಯವಸ್ಥೆ `ಮೊಬೈಲ್ ಕಾಯಿನ್'ನ ಸ್ಥಾಪಕ, ತಾಂತ್ರಿಕ ಅಧಿಕಾರಿ ಬಾಬ್ಲೀಯನ್ನು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಇರಿದು ಹತ್ಯೆ ಮಾಡಲಾಗಿದೆ ಎಂದು `ಫಾಕ್ಸ್ ನ್ಯೂಸ್' ವರದಿ ಮಾಡಿದೆ.
ಹತ್ಯೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಸ್ಯಾನ್ಫ್ರಾನ್ಸಿಸ್ಕೋದ ಮುಖ್ಯರಸ್ತೆಯ 300ನೇ ಬ್ಲಾಕ್ ಬಳಿ ವ್ಯಕ್ತಿಯೊಬ್ಬರು ತೀವ್ರ ಗಾಯಗೊಂಡು ಬಿದ್ದಿರುವುದಾಗಿ ದೊರಕಿದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದು ಮೃತವ್ಯಕ್ತಿಯನ್ನು ಬಾಬ್ಲೀ ಎಂದು ಅವರ ಸ್ನೇಹಿತರು ಗುರುತಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
Next Story