ಅಫ್ಘಾನ್: ಕೆಲಸಕ್ಕೆ ಹಾಜರಾಗದಂತೆ ಸಿಬ್ಬಂದಿಗಳಿಗೆ ವಿಶ್ವಸಂಸ್ಥೆ ಸೂಚನೆ

ಕಾಬೂಲ್, ಎ.5: ಭದ್ರತಾ ಕಾರಣಕ್ಕೆ ಎರಡು ದಿನ ಮನೆಯಲ್ಲೇ ಇರುವಂತೆ ವಿಶ್ವಸಂಸ್ಥೆಯು ಅಫ್ಘಾನ್ನಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಅಂತರಾಷ್ಟ್ರೀಯ ನೆರವು ಸಂಸ್ಥೆಯ ಸಿಬಂದಿಗಳಿಗೆ ಸೂಚಿಸಿದೆ ಎಂದು `ರಾಯ್ಟರ್ಸ್' ಮಂಗಳವಾರ ವರದಿ ಮಾಡಿದೆ.
ಮಹಿಳಾ ಸಿಬಂದಿಗಳು ಅಂತರಾಷ್ಟ್ರೀಯ ಸಂಘಟನೆಯಲ್ಲಿ ಕಾರ್ಯನಿರ್ವಹಿಸುವುದನ್ನು ಅಫ್ಘಾನ್ ಅಧಿಕಾರಿಗಳು ನಿಷೇಧಿಸಿರುವುದರಿಂದ ವಿಶ್ವಸಂಸ್ಥೆಯ ರಾಷ್ಟ್ರೀಯ ಸಿಬಂದಿಗಳು 2 ದಿನ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಂಗಳವಾರ ಮಾಧ್ಯಮಗಳು ವರದಿ ಮಾಡಿವೆ.
ಪೂರ್ವದ ನಂಗರ್ಹಾರ್ ಪ್ರಾಂತದಲ್ಲಿ ಮಹಿಳಾ ಸಿಬಂದಿಗಳು ಕೆಲಸಕ್ಕೆ ಹಾಜರಾಗುತ್ತಿಲ್ಲ ಎಂದು ಅಫ್ಘಾನಿಸ್ತಾನಕ್ಕೆ ವಿಶ್ವಸಂಸ್ಥೆಯ ನಿಯೋಗ(ಯುಎನ್ಎಎಂಎ) ಮಂಗಳವಾರ ಕಳವಳ ವ್ಯಕ್ತಪಡಿಸಿತ್ತು. ಮಹಿಳಾ ಸಿಬಂದಿಗಳ ನೆರವಿಲ್ಲದೆ ಜೀವವುಳಿಸುವ ಸಹಾಯವನ್ನು ಒದಗಿಸಲು ಸಾಧ್ಯವಾಗದು ಎಂದು ಯುಎನ್ಎಎಂಎ ಹೇಳಿತ್ತು.
Next Story