ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಇರಿಸಲು ಆರ್‌ಬಿಐ ನಿರ್ಧಾರ

ಹೊಸದಿಲ್ಲಿ: ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಶೇ 6.5 ಕ್ಕೆ ಬದಲಾಯಿಸದೆ ಇರಿಸಲು ನಿರ್ಧರಿಸಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಪ್ರಕಟಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಮೊದಲ ಹಣಕಾಸು ನೀತಿಯ ಹೇಳಿಕೆಯನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, "ವಿತ್ತೀಯ ನೀತಿ ಸಮಿತಿಯು ರೆಪೋ ದರವನ್ನು ಶೇಕಡಾ 6.50 ಕ್ಕೆ ಬದಲಾಯಿಸದೆ ಇರಿಸಲು ಸರ್ವಾನುಮತದಿಂದ ನಿರ್ಧರಿಸಿದೆ" ಎಂದು ಹೇಳಿದರು.
ಕಳೆದ ವರ್ಷ ಮೇ ತಿಂಗಳಿನಿಂದ ಸೆಂಟ್ರಲ್ ಬ್ಯಾಂಕ್ ಈಗಾಗಲೇ 250 ಬೇಸಿಸ್ ಪಾಯಿಂಟ್‌ಗಳಷ್ಟು ದರಗಳನ್ನು ಹೆಚ್ಚಿಸಿದೆ.
Next Story





