ಸಮಸ್ತ ಮದರಸ ಪಬ್ಲಿಕ್ ಪರೀಕ್ಷೆ: ದಕ್ಷಿಣ ಕನ್ನಡ ಜಿಲ್ಲೆಗೆ 98.91% ಫಲಿತಾಂಶ
ಮಂಗಳೂರು,ಎ.6: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡ್ ಮಾರ್ಚ್ ಮೊದಲ ವಾರದಲ್ಲಿ ನಡೆಸಿದ ಮದರಸ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 9088 ವಿದ್ಯಾರ್ಥಿಗಳ ಪೈಕಿ 8989 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.98.91 ಸಾಧನೆ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ 12 ಮಂದಿ ಟಾಪ್ ಪ್ಲಸ್ ಸ್ಥಾನವನ್ನು ಪಡೆದಿದ್ದಾರೆ. ಬೆಳ್ತಂಗಡಿ ರೇಂಜ್ ಪುಂಜಾಲಕಟ್ಟೆ ರೌಳತುಲ್ ಉಲೂಮ್ ಮದರಸದ 5ನೇ ತರಗತಿಯ ಮುಹಮ್ಮದ್ ಅನೀಕ್, ಕಡಬ ರೇಂಜ್ ಸುರುಳಿ ಬುಸ್ತಾನುಲ್ ಉಲೂಮ್ ಮದರಸದ 5ನೇ ತರಗತಿಯ ಮಿಸ್ಬ ಫಾತಿಮಾ, ಸುಳ್ಯ ರೇಂಜ್ ಅಡ್ಕ ಮುರ್ಶಿದು ತುಲ್ಲಾಬ್ ಮದರಸದ 5ನೇ ತರಗತಿಯ ಆಯಿಷಾ ಫಹೀಮಾ, ಕಲ್ಲಡ್ಕ ನೂರುಲ್ ಇಸ್ಲಾಂ ಮದರಸದ 5ನೇ ತರಗತಿಯ ಆಯಿಷಾ ಆದಿಲಾ, ವಿಟ್ಲ ರೇಂಜ್ ನೀರಕಜೆ ನೂರುಲ್ ಇಸ್ಲಾಂ ಬ್ರಾಂಚ್ ಮದರಸದ 7ನೇ ತರಗತಿಯ ಫಾತಿಮಾತ್ ಜಿಶಾನ, ಕಲ್ಲಡ್ಕ ರೇಂಜ್ ಕಲ್ಲಡ್ಕ ಮುನೀರುಲ್ ಇಸ್ಲಾಂ ಮದರಸದ ಮುಹಮ್ಮದ್ ಸಾಲಿಹ್, ಮಾಣಿ ರೇಂಜ್ ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದರಸದ ಫಾತಿಮಾ ಅಮಾನ, ಫಾತಿಮಾ ಸನಾ, ಶಝ ಫಾತಿಮಾ, ಉಪ್ಪಿನಂಗಡಿ ರೇಂಜ್ ಮಠ ಇರ್ತಡ್ಕ ಅಲ್ ಅಮೀನ್ ಮದರಸದ ಮಹಮ್ಮದ್ ಮುಝಮ್ಮಿಲ್, ಕುಂಬ್ರ ರೇಂಜ್ ಮಾಡನ್ನೂರ್ ನೂರುಲ್ ಇಸ್ಲಾಂ ಮದರಸದ ಫಾತಿಮಾ ಝುಹರ, ಕಾವು ನೂರುಲ್ ಇಸ್ಲಾಂ ಮದರಸದ ಫಾತಿಮತ್ ಮಿದ್ಹ ಎಂಬವರು ಜಿಲ್ಲೆಯಲ್ಲಿ ಟಾಪ್ ಪ್ಲಸ್ ಪಡೆದಿದ್ದಾರೆ.
ಒಂದು ವಿಷಯದಲ್ಲಿ ಮಾತ್ರ ಅನುತ್ತೀರ್ಣರಾದವರಿಗೆ ಮೇ 7 ರಂದು ಬೆಳಿಗ್ಗೆ 10 ಗಂಟೆಗೆ ಆಯಾ ಡಿವಿಷನ್ ಕೇಂದ್ರಗಳಲ್ಲಿ ನಡೆಯುವ ಸಪ್ಲಿಮೆಂಟರಿ "ಸೇ" ಪರೀಕ್ಷೆಯಲ್ಲಿ ಭಾಗವಹಿಸಬಹುದು. www.samstha.info ವೆಬ್ ಸೈಟ್ ನಲ್ಲಿ ಲಾಗಿನ್ ಆಗಿ ಏಪ್ರಿಲ್ 8 ರಿಂದ 18ರ ತನಕವಾಗಿ 200 ರೂ. ಶುಲ್ಕ ಪಾವತಿಸಿ ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಅವಕಾಶವಿದ್ದು, ಪ್ರತಿ ವಿಷಯವೊಂದಕ್ಕೆ 100 ರೂ. ಶುಲ್ಕ ಪಾವತಿಸಿ ವೆಬ್ ಸೈಟ್ ನಲ್ಲಿ ಮದರಸಾ ಲಾಗಿನ್ ಮಾಡಿ ಮೇಲಿನ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕಾಗಿದೆ.
ಫಲಿತಾಂಶ ಮತ್ತು ಸಂಪೂರ್ಣ ಮಾಹಿತಿಗಳು www.samastha.info ಹಾಗೂ http://result.samastha.info ವೆಬ್ ಸೈಟಿನಲ್ಲಿ ಲಭ್ಯವಿದೆಯೆಂದು ಸಮಸ್ತದ ಪರವಾಗಿ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







