Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಮಿತ್ ಶಾ - ಮುಸ್ಲಿಂ ಮುಖಂಡರ ಭೇಟಿ:...

ಅಮಿತ್ ಶಾ - ಮುಸ್ಲಿಂ ಮುಖಂಡರ ಭೇಟಿ: ಹೆಚ್ಚುತ್ತಿರುವ ಹಿಂಸಾಚಾರ ತಡೆಯಲು ಕ್ರಮಕ್ಕೆ ಆಗ್ರಹ

►ವಿಧಿ 370 ರದ್ದತಿಯಿಂದ ಮುಸ್ಲಿಮರು ತೊಂದರೆಗೀಡಾಗಿದ್ದರೆ ಪರಿಶೀಲಿಸಲು ಸಿದ್ಧ ಎಂದ ಕೇಂದ್ರ ಗೃಹ ಸಚಿವ

6 April 2023 6:04 PM IST
share
ಅಮಿತ್ ಶಾ - ಮುಸ್ಲಿಂ ಮುಖಂಡರ  ಭೇಟಿ: ಹೆಚ್ಚುತ್ತಿರುವ ಹಿಂಸಾಚಾರ ತಡೆಯಲು ಕ್ರಮಕ್ಕೆ ಆಗ್ರಹ
►ವಿಧಿ 370 ರದ್ದತಿಯಿಂದ ಮುಸ್ಲಿಮರು ತೊಂದರೆಗೀಡಾಗಿದ್ದರೆ ಪರಿಶೀಲಿಸಲು ಸಿದ್ಧ ಎಂದ ಕೇಂದ್ರ ಗೃಹ ಸಚಿವ

ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾದ ಮುಸ್ಲಿಮ್ ನಾಯಕರ ನಿಯೋಗವೊಂದು ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರದ ಘಟನೆಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿದೆ ಎಂದು thehindu.com ವರದಿ ಮಾಡಿದೆ.

ಮಂಗಳವಾರ ರಾತ್ರಿ ಶಾ ನಿವಾಸದಲ್ಲಿ ಅವರನ್ನು ಭೇಟಿಯಾದ ಜಮೀಯತ್ ಉಲಮಾ-ಇ-ಹಿಂದ್ ನ ಅಧ್ಯಕ್ಷ ಮಹಮೂದ್ ಮದನಿ ನೇತೃತ್ವದ ನಿಯೋಗವು, ಅಲ್ಪಸಂಖ್ಯಾತರ ವಿರುದ್ಧದ ಹೆಚ್ಚುತ್ತಿರುವ ಹಿಂಸಾಚಾರಗಳು, ವಿಶೇಷವಾಗಿ ರಾಮನವಮಿ ಆಚರಣೆಗಳಲ್ಲಿ ಗಲಭೆಗಳು, ಮೇಲಿಂದ ಮೇಲೆ ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣಗಳು ಮತ್ತು ಕರ್ನಾಟಕದಲ್ಲಿ ಮುಸ್ಲಿಮರಿಗೆ ಮೀಸಲಾತಿ ರದ್ದು ಕುರಿತು ಅವರ ಗಮನವನ್ನು ಸೆಳೆಯಿತು.

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮತ್ತು ಕೆಲವು ಬಿಜೆಪಿ ಮುಖಂಡರಿಂದ ಮದರಸಗಳ ಮೇಲಿನ ದಾಳಿಗಳ ಬಗ್ಗೆಯೂ ಮುಸ್ಲಿಮ್ ನಾಯಕರು ತಮ್ಮ ಆತಂಕಗಳನ್ನು ವ್ಯಕ್ತಪಡಿಸಿದರು. ಅವರ ಅಹವಾಲುಗಳನ್ನು ಆಲಿಸಿದ ಶಾ, ‘ನಿರ್ದಿಷ್ಟ ಕುಂದುಕೊರತೆಗಳನ್ನು’ ತನ್ನ ಗಮನಕ್ಕೆ ತಂದರೆ ತ್ವರಿತ ಕ್ರಮದ ಭರವಸೆಯನ್ನು ನೀಡಿದರು.

ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣಗಳ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ಈ ಪಿಡುಗನ್ನು ತಡೆಯಲು ಹೊಸ ಕಾನೂನು ತರುವಂತೆಯೂ ಮುಸ್ಲಿಂ ಮುಖಂಡರು ಆಗ್ರಹಿಸಿದರು. ಆದರೆ ಹೊಸ ಕಾನೂನಿನ ಅಗತ್ಯವನ್ನು ನಿರಾಕರಿಸಿದ ಶಾ, ಐಪಿಸಿಯ ಕಲಂ 302 ಮರಣ ದಂಡನೆಯನ್ನು ಸೂಚಿಸುತ್ತದೆ, ಅದಕ್ಕಿಂತ ಹೆಚ್ಚಿನದು ಅಗತ್ಯವಿಲ್ಲ ಎಂದು ಹೇಳಿದರು. ಹೆಚ್ಚಿನ ಸಂದರ್ಭಗಳಲ್ಲಿ ಆರೋಪಿಗಳ ವಿರುದ್ಧ ಕಲಂ 302ರಡಿ ಆರೋಪಗಳನ್ನು ಹೊರಿಸಲು ಪೊಲೀಸರು ಸಿದ್ಧರಿರುವುದಿಲ್ಲ ಎಂದು ನಿಯೋಗವು ತಿಳಿಸಿದಾಗ, ನಿರ್ದಿಷ್ಟ ಪ್ರಕರಣವನ್ನು ಗಮನಕ್ಕೆ ತಂದರೆ ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಶಾ ಭರವಸೆ ನೀಡಿದರು ಎಂದು ನಿಯೋಗದ ಸದಸ್ಯ ಹಾಗೂ ಜಮೀಯತ್ ನ ಹಿರಿಯ ನಾಯಕ ನಿಯಾಝ್ ಫಾರೂಕಿ ಸುದ್ದಿಸಂಸ್ಥೆಗೆ ತಿಳಿಸಿದರು.

ಕರ್ನಾಟಕದಲ್ಲಿ ಮುಸ್ಲಿಮರಿಗೆ ಮೀಸಲಾತಿ ರದ್ದುಗೊಳಿಸಿರುವ ವಿಷಯದಲ್ಲಿ ನೇರವಾಗಿ ಮಾತನಾಡಿದ ಶಾ, ‘ನಾವು ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ನೀಡುವುದಿಲ್ಲ. ಇದು ನಮ್ಮ ನೀತಿಯಾಗಿದೆ. ಬಿಜೆಪಿ ಆಡಳಿತದ 17 ರಾಜ್ಯಗಳಲ್ಲಿಯ ದಾಖಲೆಗಳನ್ನು ನೀವು ಪರಿಶೀಲಿಸಬಹುದು. ಧರ್ಮದ ಆಧಾರದಲ್ಲಿ ಯಾರೂ ಮೀಸಲಾತಿಯನ್ನು ಒದಗಿಸುವುದಿಲ್ಲ. ಹಿಂದಿನ ಕಾಂಗ್ರೆಸ್ ಸರಕಾರವು ಅದನ್ನು ಮಾಡಿತ್ತು. ಆದರೂ ಹಿಂದುಳಿದಿರುವಿಕೆಯ ಆಧಾರದಲ್ಲಿ ನಾವು ಮೀಸಲಾತಿಯನ್ನು ನೀಡುತ್ತೇವೆ. ಧರ್ಮದ ಕಾರಣದಿಂದಾಗಿ ಯಾವುದೇ ವ್ಯಕ್ತಿಗೆ ತೊಂದರೆಯಾಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಈ ಬಗ್ಗೆ ಬಹಿರಂಗ ಹೇಳಿಕೆಯನ್ನು ನೀಡಲು ನಾನು ಸಿದ್ಧನಿದ್ದೇನೆ’ ಎಂದು ತಿಳಿಸಿದ್ದಾರೆಂದು thehindu.com ವರದಿ ಮಾಡಿದೆ.

ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯ ರದ್ದತಿಯನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡದಂತೆ ಮುಸ್ಲಿಮ್ ನಾಯಕರನ್ನು ಆಗ್ರಹಿಸಿದ ಶಾ, ‘ವಿಧಿ 370 ಧಾರ್ಮಿಕ ವಿಷಯವಲ್ಲ. ಅದು ಕೇಂದ್ರ ಮತ್ತು ರಾಜ್ಯಗಳ ಸಂಬಂಧಗಳ ಕುರಿತಾಗಿದೆ. ಈ ವಿಧಿಯ ರದ್ದತಿಯಿಂದ ಮುಸ್ಲಿಮರು ತೊಂದರೆಗೀಡಾಗಿರುವ ಪ್ರಕರಣವಿದ್ದರೆ ಅದನ್ನು ಪರಿಶೀಲಿಸಲು ನಾವು ಸಿದ್ಧರಿದ್ದೇವೆ’ ಎಂದರು.

ದೇಶದ ವಿವಿಧ ಭಾಗಗಳಲ್ಲಿ ಮದರಸಗಳ ಮೇಲೆ ನಡೆಯುತ್ತಿರುವ ದಾಳಿಗಳಲ್ಲಿ ಸಚಿವರ ಹಸ್ತಕ್ಷೇಪವನ್ನೂ ನಿಯೋಗದ ಸದಸ್ಯರು ಕೋರಿದರು. ಇತ್ತೀಚಿಗೆ ಬಿಹಾರದಲ್ಲಿ ಸಾವಿರ ವರ್ಷಗಳಷ್ಟು ಹಳೆಯದಾದ ಮದರಸದ ಮೇಲೆ ದಾಳಿ ನಡೆಸಿದ ಗುಂಪು ಅಲ್ಲಿಯ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿ ಸುಮಾರು 4,500 ಪುಸ್ತಕಗಳನ್ನು ಸುಟ್ಟು ಹಾಕಿದೆ. ಪ್ರಕರಣದಲ್ಲಿ ಕ್ರಮವನ್ನು ಕೈಗೊಳ್ಳುವ ಭರವಸೆಯನ್ನು ನೀಡಿದ ಶಾ, ಮದರಸಗಳಲ್ಲಿ ಸಮಗ್ರ ಶಿಕ್ಷಣವನ್ನು ನೀಡುವಂತೆ ಮುಸ್ಲಿಮ್ ಸಮುದಾಯವನ್ನು ಆಗ್ರಹಿಸಿದರು. ಕುರ್ ಆನ್ ಮತ್ತು ಹದೀಸ್ ಗಳನ್ನು ಬೋಧಿಸಿ, ಆದರೆ ಆಧುನಿಕ ಶಿಕ್ಷಣವೂ ಅಗತ್ಯವಾಗಿದೆ ಎಂದು ಅವರು ಹೇಳಿದರು.

ನಿಯೋಗದಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರಾದ ಕಮಲ್ ಫಾರೂಖಿ ಮತ್ತು ಪ್ರೊ.ಅಖ್ತರುಲ್ ವಾಸೆ ಅವರೂ ಉಪಸ್ಥಿತರಿದ್ದರು.
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಯೋಗದ ಸದಸ್ಯರು,‘ರಾಜಕೀಯ ಭಾಷಣಗಳನ್ನು ನೀಡುವಾಗ ನಾವು ನೋಡಿದ್ದ ಅಮಿತ್ ಶಾಗಿಂತ ವಿಭಿನ್ನ ವ್ಯಕ್ತಿಯನ್ನು ನಾವಿಂದು ನೋಡಿದೆವು. ಇದೇ ಮೊದಲ ಬಾರಿಗೆ ಸರಕಾರದೊಂದಿಗೆ ಸಂಬಂಧವು ಸ್ಥಾಪನೆಗೊಂಡಿದೆ. ಮಾತುಕತೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಅದು ಎಷ್ಟು ಯಶಸ್ವಿಯಾಗುತ್ತದೆ     ಎನ್ನುವುದನ್ನು ಕಾದು ನೋಡಬೇಕಿದೆ,ಆದರೆ ಇದೊಂದು ಧನಾತ್ಮಕ ಮೊದಲ ಹೆಜ್ಜೆಯಾಗಿದೆ. ಸಚಿವರು ನಿರಾಕರಣೆಯ ಮನಃಸ್ಥಿತಿಯಲ್ಲಿ ಇರಲಿಲ್ಲ’ ಎಂದು ಹೇಳಿದರು.

share
Next Story
X