ಹ್ಯಾಂಡ್ಸ್- ಆನ್ ಅಟೋಮೆಟಿವ್ ಕುರಿತು ಕಾರ್ಯಾಗಾರ

ಉಡುಪಿ, ಎ.6: ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕ್ ವಾಹನ ಘಟಕ, ಯಮಹಾ ಮೋಟಾರ್ಸ್ ಸಹಯೋಗದೊಂದಿಗೆ ಹ್ಯಾಂಡ್ಸ್- ಆನ್ ಅಟೋಮೆಟಿವ್ ಎಂಬ ವಿಷಯದ ಕುರಿತು ಕಾರ್ಯಾಗಾರ ವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಉಡುಪಿ ಯಮಹಾ ಮೋಟಾರ್ಸ್‌ನ ಏರಿಯಾ ಮ್ಯಾನೇಜರ್ ಟೈಟಸ್ ಸುವಾರೆಸ್, ಸೇಲ್ಸ್ ಮ್ಯಾನೇಜರ್ ಅಮರ್, ತಾಂತ್ರಿಕ ಮೇಲ್ವಿಚಾರಕ ರವೀಂದ್ರ, ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಬೇರ್ಪಡಿ ಸುವುದು ಮತ್ತು ಜೋಡಿಸುವ ಕುರಿತು ಮತ್ತು ಐಸಿ ಇಂಜಿನ್‌ಗಳ ಬಗ್ಗೆ ಮತ್ತು ಇಂಜಿನ್‌ಗಳು ಕಾರ್ಯನಿರ್ವಹಿಸಲು ಬೇಕಾಗುವ ಉಪಕರಣಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ದ್ವಿಚಕ್ರ ವಾಹನಗಳಲ್ಲಿ ಬಳಸುವ ಫಿಲ್ಟರ್‌ಗಳ ಸ್ಥಳ ಮತ್ತು ಅದನ್ನು ಅಳವಡಿ ಸುವ ಉದ್ದೇಶವನ್ನು ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದರು. ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಇಂದಿನ ದಿನಗಳಲ್ಲಿ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಏರಿಕೆಉಂಟಾಗಿದೆ ಎಂದು ತಿಳಿಸಿದರು.
ಡೀನ್ ಡಾ.ಸುದರ್ಶನ್ ರಾವ್ ಐಸಿ ಇಂಜಿನ್‌ನ ಮಹತ್ವದ ಬಗ್ಗೆ ವಿವರಿಸಿದರು. ಕಾರ್ಯಾಗಾರವನ್ನು ಕಾಲೇಜಿನ ಎಲೆಕ್ಟ್ರಿಕ್ ವಾಹನ ಕ್ಲಬ್‌ನ ಸಂಯೋಜಕ ಅನಂತ್ ಮಲ್ಯ ಮತ್ತು ಅಕ್ಷತಾ ರಾವ್ ಸಂಯೋಜಿಸಿದರು.







