ಮೇ 12ರಂದು ಮಸ್ಕತ್‌ನಲ್ಲಿ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ
ಮಂಗಳೂರು: ಮಸ್ಕತ್‌ನ ಅಲ್‌ಫಲಾಝ್ ಗ್ರಾಂಡ್ ಹಾಲ್‌ನಲ್ಲಿ ಮೇ 12ರಂದು ಶಿವದೂತೆ ಗುಳಿಗೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತುಳು ಚಿತ್ರ ನಿರ್ದೇಶಕ ಕಿರಣ್ ಕುಮಾರ್ ಕೊಡಿಯಲ್‌ಬೈಲ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸ್ಕತ್‌ನ ಕರಾವಳಿ ಫ್ರೆಂಡ್ಸ್ ತುಳು ಸಂಘಟನೆ ಮೇ 12 ರಂದು ಚಾರಿತ್ರಿಕ ದಾಖಲೆಯತ್ತ ಹೆಜ್ಜೆ ಇಟ್ಟಿರುವ ಶಿವದೂತೆ ಗುಳಿಗೆ ನಾಟಕ ಕನ್ನಡ ಹಾಗೂ ತುಳು ಭಾಷೆಯ ಎರಡು ಪ್ರದರ್ಶನವನ್ನು ಆಯೋಜಿಸಿದೆ. ಅಂದು ಬೆಳಗ್ಗೆ 11ಕ್ಕೆ ಕನ್ನಡ ಹಾಗೂ ಸಂಜೆ 5ಕ್ಕೆ ತುಳು ಭಾಷೆಯಲ್ಲಿ ಒಟ್ಟು 25 ಜನರ ತಂಡ ಮಸ್ಕತ್‌ನ ಕಲಾಭಿಮಾನಿಗಳನ್ನು ರಂಜಿಸಲಿದೆ.
ಮುಂದಿನ ದಿನಗಳಲ್ಲಿ ಕತರ್, ಕುವೈತ್ ಹಾಗೂ ಬಹರೈನ್‌ನಲ್ಲಿ ನಾಟಕ ಪ್ರದರ್ಶನಗೊಳಿಸುವಂತೆ ಮಾತುಕತೆ ನಡೆಸಲಾಗಿದೆ. ಅಲ್ಲದೇ ಪಾಲಕ್ಕಡ್ ದೇವಸ್ಥಾನದಲ್ಲಿ ಮೊದಲ ಬಾರಿಗೆ ಮಲಯಾಲಂ ಭಾಷೆಯಲ್ಲಿ ನಾಟಕ ಪ್ರದರ್ಶನವಾಗಲಿದೆ. ಕನ್ನಡ ಹಾಗೂ ತುಳು ಬಾಷೆ ಸೇರಿ ಒಟ್ಟು ದೇಶದಾತ್ಯಂತ ಈಗಾಗಲೇ 400 ಪ್ರದರ್ಶನವನ್ನು ನೀಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರಾವಳಿ ಫ್ರೆಂಡ್ಸ್ ಮಸ್ಕತ್‌ನ ಅಧ್ಯಕ್ಷ ಹಿತೇಶ್ ಹಾಗೂ ಶಿವದೂತೆ ಗುಳಿಗೆ ನಾಟಕ ಕಲಾವಿದ ಸ್ವರಾಜ್ ಶೆಟ್ಟಿ ಉಪಸ್ಥಿತರಿದ್ದರು.