ಶಾಸಕಿ ಸೌಮ್ಯಾರೆಡ್ಡಿಗೆ ಸೇರಿದ ಕಾರು ಜಪ್ತಿ

ಬೆಂಗಳೂರು, ಎ.6: ಮತದಾರರಿಗೆ ಹಂಚಲು ವಸ್ತುಗಳಿದ್ದ ಕಾರೊಂದು ಪೊಲೀಸರು ಜಪ್ತಿ ಮಾಡಿದ್ದು, ಇದು ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಅವರಿಗೆ ಸೇರಿದ್ದು ಎಂದು ತಿಳಿದುಬಂದಿದೆ.
ತಿಲಕನಗರ ಪೊಲೀರು ಗುರುವಾರ ವಶಕ್ಕೆ ಪಡೆದಿದ್ದು, ಕಾರಿನಲ್ಲಿ ಮತದಾರರಿಗೆ ಹಂಚಲು ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣವೇ ಕಾರನ್ನು ಜಪ್ತಿ ಮಾಡಿ, ಅದರಲ್ಲಿರುವ ವಸ್ತುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
Next Story





