ಚುನಾವಣೆ: ಉಡುಪಿ ಜಿಲ್ಲೆಯ ವಿವಿಧೆಡೆ ಪೊಲೀಸ್ ಪಥ ಸಂಚಲನ

ಉಡುಪಿ, ಎ.6: ಮುಂಬರುವ ವಿಧಾನಸಭಾ ಚುನಾವಣೆ ಶಾಂತಿಯುತವಾಗಿ ಹಾಗೂ ನಿಭೀರ್ತಿಯಿಂದ ನಡೆಯಲು ಉಡುಪಿ ಜಿಲ್ಲೆಯ ವಿವಿಧೆಡೆ ಇಂದು ಪೊಲೀಸ್ ಪಥ ಸಂಚಲನವನ್ನು ನಡೆಸಲಾಯಿತು.
ಉಡುಪಿ ತಾಲೂಕಿನ ಮಲ್ಪೆ ಏಳೂರು ಮೊಗವೀರ ಸಭಾಭವನದಿಂದ ಹೊರಟ ಪೊಲೀಸ್ ಪಥ ಸಂಚಲನ ಮಲ್ಪೆ ಪೇಟೆ, ಕೊಳ, ಮಲ್ಪೆ ಬೀಚ್ ಮಾರ್ಗವಾಗಿ ವಡಂಭಾಂಡೇಶ್ವರದಲ್ಲಿರುವ ಪೊಲೀಸ್ ಠಾಣೆಯ ಎದುರು ಸಮಾಪ್ತಿಗೊಂಡಿತು. ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ಧಲಿಂಗಪ್ಪ ಹಾಜರಿದ್ದರು.
ಅದೇ ರೀತಿ ಕಾಪು ತಾಲೂಕಿನ ಕಾಪು ನಗರದಲ್ಲಿ, ಕಾರ್ಕಳ ತಾಲೂಕಿನ ಬೈಲೂರು ಮತ್ತು ಕಾರ್ಕಳ ಪೇಟೆಯಲ್ಲಿ ಹಾಗೂ ಬೈಂದೂರು ತಾಲೂಕಿನ ಶಿರೂರಿನಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು. ಇದರಲ್ಲಿ ಪ್ಯಾರ ಮಿಲಿಟರಿ ಪಡೆ, ಪೊಲೀಸ್ ಸಿಬ್ಬಂದಿಗಳು, ಆಯಾ ವಿಭಾಗದ ಡಿವೈಎಸ್ಪಿ ಹಾಗೂ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
Next Story





