ಧಾರ್ಮಿಕ ಮತಾಂತರ ಆರೋಪ: ಇಸ್ಲಾಮಿಕ್ ವಿದ್ವಾಂಸ ಕಲೀಮ್ ಸಿದ್ದೀಕಿಗೆ ಹೈಕೋರ್ಟ್ ಜಾಮೀನು

ಅಲಹಾಬಾದ್, ಎ. 6: ಅಕ್ರಮ ಧಾರ್ಮಿಕ ಮತಾಂತರಗಳನ್ನು ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಇಸ್ಲಾಮಿಕ್ ವಿದ್ವಾಂಸ ಕಲೀಮ್ ಸಿದ್ದೀಕಿಗೆ ಅಲಹಾಬಾದ್ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ. ಪಶ್ಚಿಮ ಉತ್ತರಪ್ರದೇಶದ ಪ್ರಮುಖ ಧಾರ್ಮಿಕ ಮುಖಂಡರ ಪೈಕಿ ಒಬ್ಬರಾಗಿರುವ ಸಿದ್ದೀಕಿಯನ್ನು 2021 ಸೆಪ್ಟಂಬರ್ ನಲ್ಲಿ ರಾಜ್ಯದ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿತ್ತು.
ಸಿದ್ದೀಕಿ ಭಾರತದ ‘‘ಅತಿ ದೊಡ್ಡ ಧಾರ್ಮಿಕ ಮತಾಂತರ ಸಿಂಡಿಕೇಟ್ (ಸಂಘಟನೆ) ಒಂದನ್ನು ನಡೆಸುತ್ತಿದ್ದರು’’ ಎಂದು ಭಯೋತ್ಪಾದನಾ ನಿಗ್ರಹ ದಳವು ಹೇಳಿತ್ತು. ಸಿದ್ದೀಕ್ ರನ್ನು ಜಾಮಿಯಾ ಇಮಾಮ್ ವಲಿಯುಲ್ಲಾ ಟ್ರಸ್ಟ್ ‘‘ಕೋಮು ಸೌಹಾರ್ದ’’ ಕಾರ್ಯಕ್ರಮಗಳನ್ನು ಏರ್ಪಡಿಸುವ ಹೆಸರಿನಲ್ಲಿ ಅಕ್ರಮ ಧಾರ್ಮಿಕ ಮತಾಂತರಗಳನ್ನು ನಡೆಸುತ್ತಿತ್ತು ಎಂಬುದಾಗಿಯೂ ಅದು ಆರೋಪಿಸಿತ್ತು.
ಅಮೆರಿಕ ಸರಕಾರದ ಸ್ವತಂತ್ರ ಸಂಸ್ಥೆಯಾಗಿರುವ ‘ಅಮೆರಿಕ ಅಂತರ್ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ಆಯೋಗ’ವೂ ತನ್ನ ವರದಿಯಲ್ಲಿ ಸಿದ್ದೀಕ್ ರ ಬಂಧನವನ್ನು ಪ್ರಸ್ತಾಪಿಸಿತ್ತು.
Next Story





