ಮಣಿಪಾಲ: ಗಾಂಜಾ ಸೇವನೆ ಪ್ರಕರಣ; ಎಂಟು ಮಂದಿ ವಶಕ್ಕೆ

ಮಣಿಪಾಲ, ಎ.6: ಮಣಿಪಾಲ ಹಾಗೂ ಉಡುಪಿ ಸೆನ್ ಪೊಲೀಸರು ಗಾಂಜಾ ಸೇವನೆಗೆ ಸಂಬಂಧಿಸಿ ಒಟ್ಟು ಎಂಟು ಮಂದಿಯನ್ನು ವಶಕ್ಕೆ ಪಡೆದು ಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾ.21ರಂದು ಮಣಿಪಾಲ ವಿದ್ಯಾರತ್ನ ನಗರ ಎಂಬಲ್ಲಿ ದಿಲೀಪ್ ಶೆಟ್ಟಿ (21), ಆದಿತ್ಯರಾಜ್ (20), ಎ.23ರಂದು 80 ಬಡಗುಬೆಟ್ಟ ಗ್ರಾಮದ ದಶರಥ ನಗರ ಡೌನ್ ಟೌನ್ ಹೊಟೇಲ್ ಬಳಿ ಆಶಿಶ್ ಕುಮಾರ್ (23), ಮಾ.24 ರಂದು ಮಣಿಪಾಲದ ಐರಿಸ್ ಫ್ಲಾಝಾ ಬಳಿ ಆನಂದ್ ಶಂಕರ್(20), ವಿಷ್ಣು ವಿನು(19), ದೇವನಾರಾಯಣ ಎ.(20) ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಎ.5ರಂದು ಬಂದ ವರದಿಯಲ್ಲಿ ಇವರೆಲ್ಲರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎ.4ರಂದು ಉಡುಪಿ ನಗರದ ಆರ್‌ಎಸ್‌ಬಿ ವಿಂಡ್ಸೋರ್ ಅಪಾರ್ಟಮೆಂಟ್ ಬಳಿ ಭಕ್ತ ಬಹದ್ದೂರ್ ಶರ್ಕಿ(40) ಹಾಗೂ ಮಣಿಪಾಲದ ಎಂಪಿ ಅಪಾರ್ಟ ಮೆಂಟ್ ಬಳಿ ಅಮನ್ ಚೇತ್ರಿ(24) ಎಂಬವರನ್ನು ಉಡುಪಿ ಸೆನ್ ಅಪರಾಧ ಠಾಣೆಯ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.