ಕಾರ್ಕಳ: ಜ್ಯುವೆಲ್ಲರಿಯಲ್ಲಿಟ್ಟಿದ್ದ ಚಿನ್ನದ ಗಟ್ಟಿ ಕಳವು

ಕಾರ್ಕಳ, ಎ.6: ಜ್ಯುವೆಲ್ಲರ್ಸ್‌ಗೆ ಬಂದ ವ್ಯಕ್ತಿಯೊಬ್ಬ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಗಟ್ಟಿ ಕಳವು ಮಾಡಿರುವ ಘಟನೆ ಎ.3ರಂದು ಸಂಜೆ ವೇಳೆ ನಡೆದಿದೆ.
ನಂದಳಿಕೆಯ ಶ್ರೀಕಾಂತ್ ಆಚಾರ್ಯ ಎಂಬವರ ಓಂಕಾರ್ ಜುವೆಲ್ಲರ್ಸ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ಡ್ರಾವರ್‌ನ ಪರ್ಸ್‌ನಲ್ಲಿಟ್ಟಿದ್ದ 24 ಕ್ಯಾರೇಟ್‌ನ 20 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ಕಳವು ಮಾಡಿಕೊಂಡು ಹೋಗಿದ್ದಾನೆ ಎಂದು ದೂರಲಾಗಿದೆ. ಕಳವಾದ ಚಿನ್ನದ ಗಟ್ಟಿಯ ಮೌಲ್ಯ 1,20,000ರೂ. ಎಂದು ಅಂದಾಜಿಸಲಾಗಿದೆ.
ಅಂಗಡಿಗೆ ಅಳವಡಿಸಿದ ಸಿಸಿಟಿವಿಯ ಫೂಟೇಜನ್ನು ಪರಿಶೀಲಿಸಿದಾಗ ಈ ಕಳವು ದೃಶ್ಯ ಕಂಡು ಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story