ಉಡುಪಿ: ಮುದ್ರಾ ಲೋನ್ ಹೆಸರಿನಲ್ಲಿ ಲಕ್ಷಾಂತರ ರೂ. ಮೋಸ

ಉಡುಪಿ, ಎ.6: ಮುದ್ರಾ ಲೋನ್ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈದು ಗ್ರಾಮದ ಹೊಸ್ಮಾರು ನಿವಾಸಿ ಸುರೇಶ್ (43) ಎಂಬವರಿಗೆ ಫೆ.23ರಂದು ಮುದ್ರಾ ಲೋನ್ ಬಗ್ಗೆ ಮೇಸೆಜ್ ಬಂದಿದ್ದು ಮೇಸೆಜ್‌ನಲ್ಲಿ ನಮೂದಿಸಿದ ಮೊಬೈಲ್ ನಂಬ್ರಗಳಿಗೆ ಕರೆ ಮಾಡಿದಾಗ ವ್ಯಕ್ತಿಯೊಬ್ಬರು 50,00,000 ಮುದ್ರಾ ಲೋನ್ ದೊರೆತಿದ್ದು, ವಿವಿಧ ಶುಲ್ಕಗಳನ್ನು ಪಾವತಿಸಬೇಕೆಂದು ತಿಳಿಸಿದ್ದನು. ಅದರಂತೆ ಅವರು ಆರೋಪಿಗಳು ನೀಡಿದ ವಿವಿಧ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 1,30,900ರೂ. ಹಣವನ್ನು ಪಾವತಿಸಿದ್ದರು. ಆದರೆ ಮುದ್ರಾ ಲೋನ್ ನೀಡದೇ ಪಡೆದ ಹಣವನ್ನು ಹಿಂತಿರುಗಿಸದೇ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story