ಉಡುಪಿ: ಒಂದೇ ದಿನದಲ್ಲಿ 4 ಕೊರೋನ ಪಾಸಿಟಿವ್

ಉಡುಪಿ, ಎ.6: ಉಡುಪಿ ಜಿಲ್ಲೆಯಲ್ಲಿ ಕೊರೋನ ಸೋಂಕು ಮತ್ತೆ ಹೆಚ್ಚುವ ಸೂಚನೆ ಸಿಕ್ಕಿದ್ದು, ಇಂದು ಒಂದೇ ದಿನದಲ್ಲಿ ನಾಲ್ವರು ಕೊರೋನಕ್ಕೆ ಪಾಸಿಟಿವ್ ಆಗಿದ್ದಾರೆ. ದಿನದಲ್ಲಿ ಒಟ್ಟು 240 ಮಂದಿಯನ್ನು ಕೊರೋನ ಸೋಂಕಿಗೆ ಪರೀಕ್ಷೆಗೊಳಪಡಿಸಿದಾಗ ಇವರಲ್ಲಿ ಒಬ್ಬ ಪುರುಷ ಹಾಗೂ ಮೂವರು ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.
ಉಡುಪಿಯ ಇಬ್ಬರು ಹಾಗೂ ಕುಂದಾಪುರದ ಇಬ್ಬರು ಪಾಸಿಟಿವ್ ಬಂದವರಲ್ಲಿ ಸೇರಿದ್ದು, ಈ ಮೂಲಕ ಸದ್ಯ ಕೊರೋನಕ್ಕೆ ಚಿಕಿತ್ಸೆ ಪಡೆಯುವವರ ಸಂಖ್ಯೆ 9ಕ್ಕೇರಿದೆ. ಇಂದು ಪಾಸಿಟಿವ್ ಬಂದ ನಾಲ್ವರು ಮನೆಯಲ್ಲಿದ್ದು ಚಿಕಿತ್ಸೆ ಪಡೆಯುತಿದ್ದಾರೆ. ಮೂವರು ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.
Next Story