ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ಶ್ರೀಮಂತ ವ್ಯಕ್ತಿ

ನ್ಯೂಯಾರ್ಕ್, ಎ.6: ಲೂಯಿಸ್ ವ್ಯುಟನ್(ಎಲ್ವಿಎಂಎಚ್)ನ ಸಿಇಒ ಮತ್ತು ಅಧ್ಯಕ್ಷ ಬರ್ನಾರ್ಡ್ ಅರ್ನಾಲ್ಟ್ ಅವರ ಸಂಪತ್ತು ಒಂದೇ ದಿನದಲ್ಲಿ 200 ಶತಕೋಟಿ ಡಾಲರ್ ನಷ್ಟು ಹೆಚ್ಚಿದ್ದು ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ.
ಇದುವರೆಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಟೆಸ್ಲಾದ ಸಿಇಒ ಎಲಾನ್ ಮಸ್ಕ್ 2ನೇ ಸ್ಥಾನಕ್ಕೆ ಹಾಗೂ ಅಮಝಾನ್ ನ ಸ್ಥಾಪಕ ಜೆಫ್ ಬೆಝೋಸ್ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಐಷಾರಾಮಿ ಬಳಕೆಯ ವಸ್ತುಗಳನ್ನು ಉತ್ಪಾದಿಸುವ ಎಲ್ವಿಎಂಎಚ್ ನ ಶೇರುಗಳ ಮೌಲ್ಯ ಮಂಗಳವಾರ 30%ದಷ್ಟು ಹೆಚ್ಚುವ ಮೂಲಕ ಬರ್ನಾರ್ಡ್ ಅರ್ನಾಲ್ಟ್ ಅವರ ಸಂಪತ್ತಿನ ಮೌಲ್ಯ 201 ಶತಕೋಟಿ ಡಾಲರ್ಗೆ ಏರಿಕೆಯಾಗಿದೆ ಎಂದು ಬ್ಲೂಮ್ಬರ್ಗ್ ಕೋಟ್ಯಾಧಿಪತಿಗಳ ಸೂಚ್ಯಾಂಕವನ್ನು ಉಲ್ಲೇಖಿಸಿ `ದಿ ಗಾರ್ಡಿಯನ್' ವರದಿ ಮಾಡಿದೆ.
Next Story