ಬೆಂಗಳೂರು | ಕರಗ ಆಚರಣೆಯ ವೇಳೆ ಅಗ್ನಿ ಅವಘಢ: 20ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

ಬೆಂಗಳೂರು, ಎ.6: ಇತಿಹಾಸ ಪ್ರಸಿದ್ಧ ಬೆಂಗಳೂರು ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಕರಗ ಆಚರಣೆಯ ಸಂದರ್ಭದಲ್ಲಿ ಭಕ್ತರು ಭಾರಿ ಪ್ರಮಾಣದ ಕರ್ಪೂರಕ್ಕೆ ಬೆಂಕಿ ಹಚ್ಚಿದ್ದ ಪರಿಣಾಮ, ಕೆಲ ವಾಹನಗಳು ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿವೆ.
ಇಲ್ಲಿನ ಎನ್.ಆರ್.ಸಿಗ್ನಲ್‍ನಿಂದ ಧರ್ಮರಾಯ ದೇವಸ್ಥಾನದವರೆಗೆ ಸುಮಾರು 700 ಮೀಟರ್ ದೂರಭಕ್ತರು ಕರ್ಪೂರ ಹಚ್ಚಿದರು. ಈ ವೇಳೆ ಏಕಾಏಕಿ ಭಾರಿ ಪ್ರಮಾಣದಲ್ಲಿ ಬೆಂಕಿ ಆವರಿಸಿಕೊಂಡು ನೋಡು ನೋಡುತ್ತಿದ್ದಂತೆ 20ಕ್ಕೂ ಹೆಚ್ಚು ಬೈಕ್ ಹಾಗೂ ಆಟೊಗಳಿಗೆ ತಗುಲಿ ಸುಟ್ಟು ಹೋಗಿವೆ. ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಅನಂತರ, ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಅಗ್ನಿಯನ್ನು ಸಂಪೂರ್ಣವಾಗಿ ನಂದಿಸಿದರು.
.jpg)
.jpg)
.jpg)
.jpg)
.jpg)
Next Story