ಚುನಾವಣೆ ಹಿನ್ನೆಲೆ: ‘ಸಿಆರ್‌ಪಿಎಫ್’ನಿಂದ ರೂಟ್ ಮಾರ್ಚ್

ಮಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿರುವ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯು ಸಾರ್ವಜನಿಕರಿಗೆ ಧೈರ್ಯ ತುಂಬುವುದರ ಭಾಗವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ‘ರೂಟ್ ಮಾರ್ಚ್’ ನಡೆಸಿತು.
ನಗರದ ಮಂಗಳಾದೇವಿ, ಕಾಸಿಯಾ ಚರ್ಚ್ ರಸ್ತೆ, ಜೆಪ್ಪು ಮಾರ್ಕೆಟ್, ಬೋಳಾರ ಜಂಕ್ಷನ್, ಮಾರಿಗುಡಿ, ಕುತ್ತಾರ್, ಸುರತ್ಕಲ್, ಚೊಕ್ಕಬೆಟ್ಟು ಮತ್ತಿತರ ಕಡೆಗಳಲ್ಲಿ ‘ರೂಟ್ ಮಾರ್ಚ್’ ನಡೆಸಿ ಗಮನ ಸೆಳೆದರು. ಸಿಆರ್‌ಪಿಎಫ್‌ನೊಂದಿಗೆ ಸ್ಥಳೀಯ ಪೊಲೀಸರು ಸಾಥ್ ನೀಡಿದರು.
Next Story





