`ಬಿಳಿಯರು ಮಾತ್ರ ಅರ್ಜಿ ಸಲ್ಲಿಸಬಹುದು' ಅಮೆರಿಕದ ಸಂಸ್ಥೆಯ ಜಾಹೀರಾತು ವಿವಾದ
ವಾಷಿಂಗ್ಟನ್, ಎ.6: ಅಮೆರಿಕದ ದಲಾಸ್ ನಲ್ಲಿರುವ ಸಂಸ್ಥೆಯೊಂದು ಉದ್ಯೋಗಿಗಳ ನೇಮಕಕ್ಕೆ ಜಾಹೀರಾತು ಪ್ರಕಟಿಸುವಾಗ `ಬಿಳಿಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು' ಎಂದು ಉಲ್ಲೇಖಿಸಿರುವುದು ವ್ಯಾಪಕ ವಿವಾದಕ್ಕೆ ಕಾರಣವಾಗಿದೆ.
ದಲಾಸ್ ನಲ್ಲಿರುವ ಟೆಕ್ ಸಂಸ್ಥೆ `ಆರ್ಥರ್ ಗ್ರ್ಯಾಂಡ್ ಟೆಕ್ನಾಲಜೀಸ್' ಮಂಗಳವಾರ ಬ್ಯುಸಿನೆಸ್ ಅನಾಲಿಸ್ಟ್ ಹುದ್ದೆಗೆ ಜಾಹೀರಾತು ನೀಡುವಾಗ ಈ ಷರತ್ತು ವಿಧಿಸಿದೆ.
ಈ ಕುರಿತು ವ್ಯಾಪಕ ಆಕ್ರೋಶ, ಖಂಡನೆ ವ್ಯಕ್ತವಾಗುತ್ತಿದ್ದಂತೆಯೇ ಸಂಸ್ಥೆ ಕ್ಷಮೆ ಯಾಚಿಸಿದೆ.
ಹೊಸದಾಗಿ ನೇಮಕಗೊಂಡಿದ್ದ ಸಿಬ್ಬಂದಿ ಈ ಪ್ರಮಾದಕ್ಕೆ ಹೊಣೆ ಎಂಬುದು ಆಂತರಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ʼಬಿಳಿಯರಿಗೆ ಮಾತ್ರ' ಎಂಬ ಸಾಲನ್ನು ಜಾಹೀರಾತಿನಲ್ಲಿ ಸೇರಿಸಿದ್ದು ಸಂಸ್ಥೆಯ ಮಾಜಿ ಉದ್ಯೋಗಿ. ಆತನಿಗೆ ಜಾಹೀರಾತಿನ ಪ್ರತಿ ಲಭ್ಯವಾಗಲು ಹೊಸದಾಗಿ ನೇಮಕಗೊಂಡಿದ್ದ ಸಿಬಂದಿಯ ನಿರ್ಲಕ್ಷ್ಯ ಕಾರಣವಾಗಿರುವುದರಿಂದ ಆತನನ್ನು ವಜಾಗೊಳಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
Next Story