ಪಾಕಿಸ್ತಾನ: ಸೇನಾ ಕಾರ್ಯಾಚರಣೆಯಲ್ಲಿ 8 ಉಗ್ರರ ಹತ್ಯೆ, ಯೋಧ ಮೃತ್ಯು

ಇಸ್ಲಮಾಬಾದ್, ಎ.6: ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಉಗ್ರರ ಅಡಗುತಾಣದಲ್ಲಿ ಬುಧವಾರ ತಡರಾತ್ರಿ ಪಾಕಿಸ್ತಾನ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ 8 ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧನೂ ಮೃತಪಟ್ಟಿದ್ದಾನೆ ಎಂದು ಪಾಕಿಸ್ತಾನದ ಸೇನೆ ಹೇಳಿದೆ.
ಸೌತ್ ವಝೀರಿಸ್ತಾನ್ ಜಿಲ್ಲೆಯಲ್ಲಿನ ಶಿನ್ವರ್ಸಾಕ್ ಪ್ರದೇಶದಲ್ಲಿ ಖಚಿತ ಮಾಹಿತಿಯಂತೆ ಸೇನೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದಾಗ ಓರ್ವ ಯೋಧ ಮೃತಪಟ್ಟಿದ್ದಾನೆ. ಬಳಿಕ ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಉಗ್ರರ ಕಮಾಂಡರ್ ಸಹಿತ 8 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿಕೆ ತಿಳಿಸಿದೆ.
Next Story