ರಾಜಸ್ಥಾನ: ಟ್ರಾಕ್ಟರ್-ಟೆಂಪೋ ಡಿಕ್ಕಿ, ಮೂವರು ಮಕ್ಕಳು ಸೇರಿದಂತೆ ನಾಲ್ವರು ಮೃತ್ಯು

ಜೈಪುರ: ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ ಟ್ರ್ಯಾಕ್ಟರ್‌ಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಅಲ್ವಾರ್‌ನಲ್ಲಿ ಗುರುವಾರ ನಡೆದಿದೆ.
ಈ ಘಟನೆಯು ಅಲ್ವಾರ್‌ನ ಕಥೂಮರ್ ಪಟ್ಟಣದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿತು, ಕೋಪಗೊಂಡ ಗ್ರಾಮಸ್ಥರು ಶವಗಳೊಂದಿಗೆ ರಸ್ತೆ ತಡೆದು ಸ್ಥಳದಲ್ಲಿದ್ದ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಿದರು.
ಮರಳು ಮಾಫಿಯಾ ಮತ್ತು ಪೊಲೀಸರ ನಡುವೆ ನಂಟು ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹಲವು ಗಂಟೆಗಳ ಮನವೊಲಿಕೆ ಬಳಿಕ ಗ್ರಾಮಸ್ಥರು ಶವಗಳನ್ನು ಶವಾಗಾರಕ್ಕೆ ಕೊಂಡೊಯ್ಯಲು ಪೊಲೀಸರಿಗೆ ಅನುವು ಮಾಡಿಕೊಟ್ಟರು.
Next Story





