ಎಸ್‌ಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ತೆಲಂಗಾಣ ಬಿಜೆಪಿ ಮುಖ್ಯಸ್ಥ ,ಸಂಸದ ಬಂಡಿ ಸಂಜಯ್ ಗೆ ಜಾಮೀನು

ಹೈದರಾಬಾದ್: ಎಸ್‌ಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಗುರುವಾರ ಜಾಮೀನು ಪಡೆದಿರುವ ತೆಲಂಗಾಣ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ಬಂಡಿ ಸಂಜಯ್(Bandi Sanjay Kumar ) ಶುಕ್ರವಾರ ಕರೀಂನಗರ ಜಿಲ್ಲಾ ಕಾರಾಗೃಹದಿಂದ ಹೊರಬಂದರು.
ಬಿಡುಗಡೆಯಾದ ಕೂಡಲೇ ಸಂಜಯ್ ಸ್ಥಳೀಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ವಾರಂಗಲ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 20,000 ರೂ.ಗಳ ಶ್ಯೂರಿಟಿಯ ಮೇಲೆ ಸಂಜಯ್ ಅವರನ್ನು ಬಿಡುಗಡೆ ಮಾಡಿದೆ. ಬಂಡಿ ಸಂಜಯ್ ಕುಮಾರ್ ಅವರು ದೇಶ ತೊರೆಯಬಾರದು, ತನಿಖೆಗೆ ಸಹಕರಿಸಬೇಕು ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಎಂಬ ಷರತ್ತುಗಳನ್ನೂ ನ್ಯಾಯಾಲಯ ವಿಧಿಸಿದೆ.
ಕರೀಂನಗರ ಕ್ಷೇತ್ರದ ಲೋಕಸಭಾ ಸಂಸದ ಬಂಡಿ ಸಂಜಯ್ ಕುಮಾರ್ ಅವರನ್ನು ಮಂಗಳವಾರ ಮಧ್ಯರಾತ್ರಿ ಕರೀಂನಗರದಲ್ಲಿರುವ ಅವರ ನಿವಾಸದಿಂದ ಪೊಲೀಸರ ತಂಡವೊಂದು ವಶಕ್ಕೆ ಪಡೆದಿತ್ತು.
ನಂತರ ಮಾಧ್ಯಮಿಕ ಶಾಲಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಸೋರಿಕೆ ಪ್ರಕರಣದಲ್ಲಿ ಅವರನ್ನು ಪ್ರಧಾನ ಆರೋಪಿ ಎಂದು ಹೆಸರಿಸಲಾಯಿತು. ಈ ವಿಚಾರದಲ್ಲಿ ನಗರ ಪೊಲೀಸರು ಅವರನ್ನು ಬಂಧಿಸಿದರು.
Telangana BJP president Bandi Sanjay reaches his residence after being released from Karimnagar jail on bail in the SSC paper leak case pic.twitter.com/xieB8K9QWZ
— ANI (@ANI) April 7, 2023







