ಬೆಳ್ತಂಗಡಿ ತಾಲೂಕಿನ ಹಲವೆಡೆ ಆಲಿಕಲ್ಲು ಸಹಿತ ಮಳೆ

ಬೆಳ್ತಂಗಡಿ: ಬೇಸಗೆ ತಾಪಮಾನದಿಂದ ಬಸವಳಿದಿದ್ದ ಮಂದಿಗೆ ಮಳೆ ಕೊಂಚ ತಣಿಸಿದ್ದು, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸೇರಿದಂತೆ ಹಲವೆಡೆ ಶುಕ್ರವಾರ ಸಂಜೆ ಆಲಿಕಲ್ಲು ಸಹಿತ ಮಳೆಯಾಗಿದೆ.
ಉಜಿರೆ, ಮುಂಡಾಜೆ, ಧರ್ಮಸ್ಥಳ, ಕೊಕ್ಕಡ, ನಾರಾವಿ, ಬೆಳ್ತಂಗಡಿ, ಚಾರ್ಮಾಡಿ, ಸವಣಾಲು, ಕಡಿರುದ್ಯಾವರ ಸಹಿತ ಬಹುತೇಕ ಕಡೆಗಳಲ್ಲಿ ಸಾಮಾನ್ಯ ಮಳೆ ಸುರಿದಿದೆ.
ಗುರುವಾರ ಮಧ್ಯರಾತ್ರಿಯೂ ಗುಡುಗು ಸಹಿತ ಮಳೆಯಾಗಿತ್ತು. ಇದೀಗ ಶುಕ್ರವಾರ ತಣ್ಣನೆ ಗಾಳಿಯೊಂದಿಗೆ ಮಳೆ ಸುರಿದಿದೆ. ದಿನವಿಡಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಇದೀಗ ಅರ್ಧ ತಾಸು ಮಳೆಯಿಂದಾಗಿ ವಾತಾವರಣ ತಂಪಾಗಿದೆ.
.jpeg)
Next Story





