Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸಂಸತ್ ಕಲಾಪಗಳಿಗೆ ವ್ಯತ್ಯಯ: ಕಳೆದ ಐದು...

ಸಂಸತ್ ಕಲಾಪಗಳಿಗೆ ವ್ಯತ್ಯಯ: ಕಳೆದ ಐದು ವರ್ಷಗಳಲ್ಲಿಯೇ ಕನಿಷ್ಠ ಉತ್ಪಾದಕತೆಯ ಬಜೆಟ್ ಅಧಿವೇಶನ

17ನೇ ಲೋಕಸಭೆಯು 1952ರಿಂದೀಚಿಗೆ ಅತ್ಯಂತ ಕಡಿಮೆ ಬೈಠಕ್ ದಿನಗಳನ್ನು ದಾಖಲಿಸುವ ಸಾಧ್ಯತೆ

7 April 2023 7:04 PM IST
share
ಸಂಸತ್ ಕಲಾಪಗಳಿಗೆ ವ್ಯತ್ಯಯ: ಕಳೆದ ಐದು ವರ್ಷಗಳಲ್ಲಿಯೇ ಕನಿಷ್ಠ ಉತ್ಪಾದಕತೆಯ ಬಜೆಟ್ ಅಧಿವೇಶನ
17ನೇ ಲೋಕಸಭೆಯು 1952ರಿಂದೀಚಿಗೆ ಅತ್ಯಂತ ಕಡಿಮೆ ಬೈಠಕ್ ದಿನಗಳನ್ನು ದಾಖಲಿಸುವ ಸಾಧ್ಯತೆ

ಹೊಸದಿಲ್ಲಿ: ಗುರುವಾರ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟ ಸಂಸತ್ತಿನ ಬಜೆಟ್ ಅಧಿವೇಶನವು ಕಳೆದ ಐದು ವರ್ಷಗಳಲ್ಲಿಯೇ ಕನಿಷ್ಠ ಉತ್ಪಾದಕತೆಯನ್ನು ದಾಖಲಿಸಿದೆ ಮತ್ತು 17ನೇ ಲೋಕಸಭೆಯು 1952ರಿಂದೀಚಿಗೆ ಅತ್ಯಂತ ಕಡಿಮೆ ಬೈಠಕ್ ದಿನಗಳನ್ನು ದಾಖಲಿಸುವ ಸಾಧ್ಯತೆಯಿದೆ.

ಲಂಡನ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಇತ್ತೀಚಿನ ಹೇಳಿಕೆಗಳು ಮತ್ತು ಅದಾನಿ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗಾಗಿ ಬೇಡಿಕೆ ಕುರಿತು ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವಿನ ಪರಸ್ಪರ ಕೆಸರೆರಚಾಟದ ನಡುವೆ ಸಂಸತ್ತಿನ ಉತ್ಪಾದಕತೆ ಕುಸಿದಿದೆ. ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹತೆಯನ್ನು ವಿರೋಧಿಸಿ ಪ್ರತಿಪಕ್ಷಗಳ ಸದಸ್ಯರ ಪ್ರತಿಭಟನೆಗಳೂ ಇದಕ್ಕೆ ತಮ್ಮ ಕೊಡುಗೆಯನ್ನು ಸಲ್ಲಿಸಿವೆ.

ಪ್ರತಿಪಕ್ಷಗಳಿಂದ ಆಗಾಗ್ಗೆ ಪ್ರತಿಭಟನೆಗಳು ಮತ್ತು ಉಭಯ ಸದನಗಳ ಪುನರಾವರ್ತಿತ ದೈನಂದಿನ ಮುಂದೂಡಿಕೆಗಳು ಬಜೆಟ್ ಅಧಿವೇಶನದ ಎರಡನೇ ಹಂತದ 25 ದಿನಗಳು ವ್ಯರ್ಥಗೊಳ್ಳಲು ಕಾರಣವಾಗಿದ್ದವು. ಈ ಅವಧಿಯಲ್ಲಿ ಸೀಮಿತ ಶಾಸಕಾಂಗ ಚಟುವಟಿಕೆಗಳು ಮತ್ತು ಕನಿಷ್ಠ ಚರ್ಚೆಗಳು ನಡೆದಿದ್ದವು. ಮಹತ್ವದ ಹಣಕಾಸು ಮಸೂದೆ 2023 ಸೇರಿದಂತೆ ಆರು ಮಸೂದೆಗಳು ಯಾವುದೇ ಚರ್ಚೆಯಿಲ್ಲದೆ ಅಂಗೀಕಾರಗೊಂಡಿದ್ದವು.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಹಾಯಕ ಸಂಸದೀಯ ವ್ಯವಹಾರಗಳ ಸಚಿವ ಅರ್ಜುನ ರಾಮ ಮೇಘ್ವಾಲ್ ಅವರು, ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಲೋಕಸಭೆ ಶೇ.34ರಷ್ಟು ಮತ್ತು ರಾಜ್ಯಸಭೆ ಶೇ.24.4ರಷ್ಟು ಉತ್ಪಾದಕತೆಯನ್ನು ದಾಖಲಿಸಿವೆ ಎಂದು ತಿಳಿಸಿದರು.

ಪಿಆರ್ಎಸ್ ಲೆಜಿಸ್ಲೇಟಿವ್ ರೀಸರ್ಚ್ ನ ವರದಿಯಂತೆ, ಈ ಅಧಿವೇಶನದಲ್ಲಿ ಲೋಕಸಭೆಯು ನಿಗದಿತ 133.6 ಗಂಟೆಗಳ ಬದಲು ಕೇವಲ 45.9 ಗಂಟೆ ಮತ್ತು ರಾಜ್ಯಸಭೆ ನಿಗದಿತ 130 ಗಂಟೆಗಳ ಬದಲು ಕೇವಲ 32.3 ಗಂಟೆ ಕಾಲ ಕಾರ್ಯ ನಿರ್ವಹಿಸಿವೆ.

ಜ.31ರಿಂದ ಫೆ.13ರವರೆಗೆ ಮತ್ತು ಮಾ.13ರಿಂದ ಎ.6ರವರೆಗೆ ಹೀಗೆ ಎರಡು ಹಂತಗಳಲ್ಲಿ ಬಜೆಟ್ ಅಧಿವೇಶನ ನಡೆದಿತ್ತು. ಫೆ.14ರಿಂದ ಮಾ.12 ವಿರಾಮದ ಅವಧಿಯಾಗಿತ್ತು.
ಲೋಕಸಭೆಯಲ್ಲಿ ಮೊದಲ ಹಂತದಲ್ಲಿ ಉತ್ಪಾದಕತೆ ಶೇ.83.80ರಷ್ಟಿದ್ದರೆ ಎರಡನೇ ಹಂತದಲ್ಲಿ ಅದು ಶೇ.5.29ಕ್ಕೆ ಕುಸಿದಿತ್ತು. ವ್ಯತ್ಯಯಗಳಿಂದಾಗಿ ಸದನವು 96 ಗಂಟೆಗಳು 13 ನಿಮಿಷಗಳ ಕಲಾಪ ಅವಧಿಯನ್ನು ಕಳೆದುಕೊಂಡಿತ್ತು. ಅತ್ತ ರಾಜ್ಯಸಭೆಯಲ್ಲಿ ಮೊದಲ ಹಂತದಲ್ಲಿ ಉತ್ಪಾದಕತೆ ಶೇ.56.3ರಷ್ಟಿದ್ದರೆ ಎರಡನೇ ಹಂತದಲ್ಲಿ ಶೇ.6.4ಕ್ಕೆ ಕುಸಿದಿತ್ತು. ಸದನದ ಸಂಚಿತ ಉತ್ಪಾದಕತೆಯು ಕೇವಲ ಶೇ.24.4ರಷ್ಟಿದ್ದು,ವ್ಯತ್ಯಯಗಳು 103.5 ಗಂಟೆಗಳ ಕಲಾಪ ಅವಧಿಯನ್ನು ನುಂಗಿದ್ದವು.

ಲೋಕಸಭೆಯ ಉತ್ಪಾದಕತೆ ಇದಕ್ಕಿಂತ ಕಡಿಮೆಯಾಗಿದ್ದು 2021ರ ಮುಂಗಾರು ಅಧಿವೇಶನದಲ್ಲಿ ಮಾತ್ರ. ಆಗ ಅದು ನಿಗದಿತ ಅವಧಿಯ ಕೇವಲ ಶೇ.20.93ರಷ್ಟು ಕಾರ್ಯ ನಿರ್ವಹಿಸಿತ್ತು. 2022ರಲ್ಲಿ ಲೋಕಸಭೆ 177 ಗಂಟೆ ಮತ್ತು ರಾಜ್ಯಸಭೆ 127.6 ಗಂಟೆಗಳ ಕಾಲ ಕಾರ್ಯ ನಿರ್ವಹಿಸಿದ್ದವು. 2021ರಲ್ಲಿ ಇದು ಅನುಕ್ರಮವಾಗಿ 131.8 ಗಂಟೆ ಮತ್ತು 104 ಗಂಟೆಗಳಾಗಿದ್ದರೆ,2020ರಲ್ಲಿ 111.2 ಗಂಟೆ ಮತ್ತು 93.8 ಗಂಟೆಗಳಾಗಿದ್ದವು.

ಈ ವರ್ಷದ ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ಲೋಕಸಭೆಯು ಚರ್ಚೆಗಳಿಗಾಗಿ ನಿಗದಿತ 12 ಗಂಟೆಗಳ ಬದಲು 14 ಗಂಟೆ 45 ನಿಮಿಷಗಳನ್ನು ಬಳಸಿಕೊಂಡಿತ್ತು. ರಾಜ್ಯಸಭೆಯಲ್ಲಿ ಕೇಂದ್ರ ಬಜೆಟ್ ಮೇಲಿನ ಚರ್ಚೆಯು ಮೊಟಕುಗೊಂಡಿತ್ತು ಮತ್ತು ಎರಡು ದಿನಗಳಲ್ಲಿ ಒಟ್ಟು 2 ಗಂಟೆ 39 ನಿಮಿಷಗಳ ಕಾಲ ನಡೆದಿತ್ತು ಎಂದು ಪಿಆರ್ಎಸ್ ಡೇಟಾ ತೋರಿಸಿದೆ.

ಅಧಿವೇಶನಕ್ಕೆ ಮುನ್ನ ಸರಕಾರವು ಹಣಕಾಸು ಮಸೂದೆ ಸೇರಿದಂತೆ 19 ಮಸೂದೆಗಳನ್ನು ಮಂಡಿಸುವುದಾಗಿ ಮತ್ತು 10 ಮಸೂದೆಗಳನ್ನು ಅಂಗೀಕರಿಸುವುದಾಗಿ ಪ್ರಕಟಿಸಿತ್ತು. ಆದರೆ ಕೇವಲ ಎಂಟು ಮಸೂದೆಗಳನ್ನು ಮಂಡಿಸಲಾಗಿದ್ದು,ಈ ಪೈಕಿ ಆರು ಮಸೂದೆಗಳನ್ನು ಲೋಕಸಭೆಯು ಅಂಗೀಕರಿಸಿತ್ತು. ರಾಜ್ಯಸಭೆಯು ಆರು ಮಸೂದೆಗಳನ್ನು ಅಂಗೀಕರಿಸಿತ್ತು ಅಥವಾ ಮರಳಿಸಿತ್ತು. ಉಭಯ ಸದನಗಳು ಅಂಗೀಕರಿಸಿದ ಅಥವಾ ಮರಳಿಸಿದ ಮಸೂದೆಗಳ ಒಟ್ಟು ಸಂಖ್ಯೆಯೂ ಆರು ಆಗಿದೆ ಎನ್ನುವುದನ್ನು ಪಿಆರ್ಎಸ್ ಡೇಟಾ ತೋರಿಸಿದೆ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತನ್ನ ಅಧಿವೇಶನ ಸಮಾರೋಪ ಭಾಷಣದಲ್ಲಿ ತಿಳಿಸಿರುವಂತೆ ಎಂಟು ಸರಕಾರಿ ಮಸೂದೆಗಳನ್ನು ಮಂಡಿಸಲಾಗಿದ್ದು,ಆರು ಮಸೂದೆಗಳು ಅಂಗೀಕಾರಗೊಂಡಿವೆ. 29 ಪ್ರಶ್ನೆಗಳಿಗೆ ವೌಖಿಕವಾಗಿ ಉತ್ತರಿಸಲಾಗಿದ್ದರೆ,133 ಸಾರ್ವಜನಿಕ ಮಹತ್ವದ ವಿಷಯಗಳನ್ನು ಎತ್ತಲಾಗಿತ್ತು ಮತ್ತು ನಿಯಮ 377ರಡಿ 436 ವಿಷಯಗಳನ್ನು ಚರ್ಚಿಸಲಾಗಿತ್ತು. ವಿವಿಧ ಇಲಾಖಾ ಸಂಬಂಧಿ ಸಂಸದೀಯ ಸ್ಥಾಯಿ ಸಮಿತಿಗಳಿಂದ ಒಟ್ಟು 62 ವರದಿಗಳು ಸದನದಲ್ಲಿ ಮಂಡನೆಯಾಗಿವೆ.

17ನೇ ಲೋಕಸಭೆಯ ಅವಧಿಯಲ್ಲಿ ಮಂಡಿಸಲಾದ ಮತ್ತು ಅಂಗೀಕರಿಸಲಾದ ಮಸೂದೆಗಳ ಸಂಖ್ಯೆಯಲ್ಲಿಯೂ ಇಳಿಕೆಯಾಗಿದೆ ಎನ್ನವುದನ್ನು ಪಿಆರ್ಎಸ್ ಡೇಟಾ ತೋರಿಸಿದೆ.
ಹಣಕಾಸು ವಿಷಯಗಳಿಗೆ ಸಂಬಂಧಿತ ಕಲಾಪಗಳಿಗೆ ಲೋಕಸಭೆಯು 17.3 ಗಂಟೆಗಳನ್ನು ವ್ಯಯಿಸಿದ್ದರೆ,ರಾಜ್ಯಸಭೆಯು 2.6 ಗಂಟೆಗಳನ್ನು ವ್ಯಯಿಸಿತ್ತು. ಶಾಸಕಾಂಗೇತರ ಕಲಾಪಗಳಿಗಾಗಿ ಲೋಕಸಭೆ ಸುಮಾರು 20 ಗಂಟೆ ಮತ್ತು ರಾಜ್ಯಸಭೆ 18 ಗಂಟೆಗೂ ಅಧಿಕ ಸಮಯವನ್ನು ವ್ಯಯಿಸಿವೆ.

ಬಜೆಟ್ ಅಧಿವೇಶನವು ಪ್ರಶ್ನೆಗಳಿಗಾಗಿ 17ನೇ ಲೋಕಸಭೆಯಲ್ಲಿ ಅತ್ಯಂತ ಕಡಿಮೆ ಸಮಯವನ್ನು ವ್ಯಯಿಸಿದೆ. ಲೋಕಸಭೆಯು ಕೇವಲ 4.32 ಗಂಟೆಗಳ ಕಾಲ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿದ್ದರೆ ರಾಜ್ಯಸಭೆಯು 1.85 ಗಂಟೆಗಳನ್ನು ವ್ಯಯಿಸಿದೆ. ಉಭಯ ಸದನಗಳಲ್ಲಿ ಕೇವಲ ಶೇ.7ರಷ್ಟು ಚುಕ್ಕಿ ಗುರುತಿನ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ ಎಂದೂ ಪಿಆರ್ಎಸ್ ಡೇಟಾ ತೋರಿಸಿದೆ.

share
Next Story
X