ಉಪ್ಪಿನಂಗಡಿ: ಪಿಕಪ್ ವಾಹನ ಢಿಕ್ಕಿ; ಕಾರಿನಲ್ಲಿದ್ದ ಐವರಿಗೆ ಗಾಯ

ಉಪ್ಪಿನಂಗಡಿ: ಪಿಕಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದವರು ಗಾಯಗೊಂಡ ಘಟನೆ ಕಾಂಚನ- ಪೆರಿಯಡ್ಕ ಮಾರ್ಗದ ಕುವೆಚ್ಚಾರು ಎಂಬಲ್ಲಿ ನಡೆದಿದೆ.
ಗೋಳಿತೊಟ್ಟುವಿನ ನೂಜೋಲು ನಿವಾಸಿ ಇಸ್ಮಾಯೀಲ್ ಎಂಬವರು ಚಲಾಯಿಸುತ್ತಿದ್ದ ಕಾರಿಗೆ ಪಿಕಪ್ ವಾಹನ ಢಿಕ್ಕಿಯಾಗಿದ್ದು, ಘಟನೆಯಿಂದ ಕಾರು ಚಾಲಕ ಇಸ್ಮಾಯಿಲ್, ಅವರ ಪತ್ನಿ ಶಹೀದಾ, ಮಕ್ಕಳಾದ ಸಹನಾ, ಸಮೀಮಾ, ಮುಹಮ್ಮದ್ ಸಿನಾನ್ ಎಂಬವರು ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಪೆರಿಯಡ್ಕ ಕಡೆಯಿಂದ ಕಾಂಚನ ಕಡೆಗೆ ತೆರಳುತ್ತಿದ್ದ ಕಾರಿಗೆ ಕಾಂಚನ ಕಡೆಯಿಂದ ಪೆರಿಯಡ್ಕ ಕಡೆಗೆ ಬರುತ್ತಿದ್ದ ಪಿಕಪ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
Next Story