ಐಪಿಎಲ್: ಲಕ್ನೊ ಗೆಲುವಿಗೆ 122 ರನ್ ಗುರಿ ನೀಡಿದ ಹೈದರಾಬಾದ್
ಕೃನಾಲ್ ಪಾಂಡ್ಯ ಅಮೋಘ ಬೌಲಿಂಗ್

ಕೃನಾಲ್ ಪಾಂಡ್ಯ ಅಮೋಘ ಬೌಲಿಂಗ್
ಲಕ್ನೊ, ಎ.7: ಕೃನಾಲ್ ಪಾಂಡ್ಯ(3-18)ನೇತೃತ್ವದ ಬೌಲರ್‌ಗಳ ದಾಳಿಗೆ ತತ್ತರಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಲಕ್ನೊ ಸೂಪರ್ ಜೈಂಟ್ಸ್ ತಂಡದ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ ಕೇವಲ 121 ರನ್ ಗಳಿಸಲಷ್ಟೇ ಶಕ್ತವಾಗಿದೆ.
ಶುಕ್ರವಾರ ಟಾಸ್ ಜಯಿಸಿದ ಹೈದರಾಬಾದ್ ತಂಡದ ನಾಯಕ ಮರ್ಕ್ರಮ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಹೈದರಾಬಾದ್ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್(8 ರನ್)ಅವರನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ನಾಯಕ ಮರ್ಕ್ರಮ್ ಶೂನ್ಯಕ್ಕೆ ಔಟಾದರು. ಹೈದರಾಬಾದ್ ಪರ ರಾಹುಲ್ ತ್ರಿಪಾಠಿ(34 ರನ್, 41 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು.
ಅನ್ಮೋಲ್‌ಪ್ರೀತ್ ಸಿಂಗ್(31ರನ್, 26 ಎಸೆತ), ಅಬ್ದುಲ್ ಸಮದ್(ಔಟಾಗದೆ 21 ರನ್, 10 ಎಸೆತ)ಹಾಗೂ ವಾಷಿಂಗ್ಟನ್ ಸುಂದರ್(16 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
ಲಕ್ನೊ ಪರ ಕೃನಾಲ್ ಪಾಂಡ್ಯ(3-18), ಅಮಿತ್ ಮಿಶ್ರಾ(2-23),ರವಿ ಬಿಷ್ಣೋಯ್(1-16) ಹಾಗೂ ಯಶ್ ಠಾಕೂರ್(1-23) 7 ವಿಕೆಟ್‌ಗಳನ್ನು ಹಂಚಿಕೊಂಡರು.
Next Story