ಕಾರ್ಕಳ: ಟೆಂಪೊಗೆ ಢಿಕ್ಕಿ; ಬೈಕ್ ಸವಾರ ಮೃತ್ಯು

ಕಾರ್ಕಳ : ಟೆಂಪೊ ಒಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಮಾಳ ಗ್ರಾಮದ ಕೂಡಬೆಟ್ಟು ತಿರುವಿನಲ್ಲಿ ಗುರುವಾರ ನಡೆದಿದೆ.
ಕಾರ್ಕಳ- ಶೃಂಗೇರಿ ರಾ.ಹೆದ್ದಾರಿಯಲ್ಲಿ ಸ್ಲೈಂಡರ್ ಮಾದರಿಯ ಮೋಟಾರು ಸೈಕಲ್‌ನ್ನು ಸವಾರಿ ಮಾಡಿಕೊಂಡ ಬಂದ ಸವಾರ ಮಾಳ ಚೆಕ್ ಪೋಸ್ಟ್ ಕಡೆಯಿಂದ ಬಜಗೋಳಿ ಕಡೆಗೆ ಬೈಕ್‌ನ್ನು ಚಲಾಯಿಸಿ, ರಸ್ತೆಯ ತೀರಾ ಬಲಬದಿಗೆ ಹೋಗಿ ಎದುರಿನಿಂದ ಬರುತಿದ್ದ ಟೆಂಪೋದ ಬಲಬದಿ ಎದುರಿನ ಬಂಪರಿಗೆ ಢಿಕ್ಕಿ ಹೊಡೆದು ಮೋಟಾರು ಸೈಕಲ್ ಸಮೇತ ರಸ್ತೆಗೆ ಉರುಳಿಬಿದ್ದು ತಲೆಗಾದ ತೀವ್ರ ಗಾಯದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story