ಅತ್ಯುತ್ತಮ ಸಾರಿಗೆ ವ್ಯವಸ್ಥೆಯ ನಗರ: ಬರ್ಲಿನ್‍ಗೆ ಅಗ್ರಸ್ಥಾನ , 19ನೇ ಸ್ಥಾನದಲ್ಲಿ ಮುಂಬೈ

ಲಂಡನ್, ಎ.7: ವಿಶ್ವದಲ್ಲಿ ಅತ್ಯುತ್ತಮ ಸಾರಿಗೆ ವ್ಯವಸ್ಥೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಜರ್ಮನಿಯ ಬರ್ಲಿನ್ ಅಗ್ರಸ್ಥಾನದಲ್ಲಿ, ಝೆಕ್ ಗಣರಾಜ್ಯದ ರಾಜಧಾನಿ ಪ್ರೇಗ್ ದ್ವಿತೀಯ ಸ್ಥಾನದಲ್ಲಿದ್ದರೆ, ಭಾರತದ ವಾಣಿಜ್ಯ ರಾಜಧಾನಿ ಎನಿಸಿರುವ ಮುಂಬೈ 19ನೇ ಸ್ಥಾನ ಪಡೆದಿದೆ.
ತಮ್ಮ ಸ್ಥಳೀಯ ಸಾರಿಗೆ ವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಲಂಡನ್ ಮೂಲದ `ಟೈಮ್ ಔಟ್' ಮಾಧ್ಯಮ ಸಂಸ್ಥೆ ವಿಶ್ವದಾದ್ಯಂತದ 50 ನಗರಗಳ 20,000 ಜನರನ್ನು ಸಮೀಕ್ಷೆ ನಡೆಸಿ ಈ ವರದಿ ತಯಾರಿಸಿದ್ದು ಅಗ್ರ 10 ನಗರಗಳ ಪಟ್ಟಿಯಲ್ಲಿ ಜಪಾನ್‍ನ ಟೋಕ್ಯೊ, ಚೀನಾದ ಶಾಂಘೈ, ಸಿಂಗಾಪುರ, ಹಾಂಕಾಂಗ್, ತೈಪೆ ಸಹಿತ ಏಶ್ಯಾದ 5 ನಗರಗಳಿವೆ.
Next Story





