ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ ಪ್ರಕರಣ: ಗಾಯಕ ಸಮರ್ ಸಿಂಗ್ ಬಂಧನ

ಲಕ್ನೋ, ಎ. 6: ವಾರಣಾಸಿಯ ಹೊಟೇಲ್ ಕೊಠಡಿಯೊಂದರಲ್ಲಿ ಭೋಜಪುರಿ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ ಮಾಡಿಕೊಂಡ ಸರಿ ಸುಮಾರು 10 ದಿನಗಳ ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಗೆಳೆಯ, ಗಾಯಕ ಸಮರ್ ಸಿಂಗ್‌ನನ್ನು ಪೊಲೀಸರು ಗಾಝಿಯಾಬಾದ್‌ನಿಂದ ಶುಕ್ರವಾರ ಬಂಧಿಸಿದ್ದಾರೆ. ಗಾಝಿಯಾಬಾದ್‌ನ ರಾಜ್‌ನಗರ್ ಪ್ರದೇಶದಲ್ಲಿರುವ ಚಾರ್ಮ್ಸ್ ಕ್ರಿಸ್ಟಲ್ ಸೊಸೈಟಿಯಿಂದ ಸಮರ್ ಸಿಂಗ್‌ನನ್ನು ಬಂಧಿಸಲಾಗಿದೆ ಎಂದು ವಾರಣಾಸಿ ಪೊಲೀಸ್ ಆಯುಕ್ತ ಅಶೋಕ್ ಮುಥಾ ಜೈನ್ ತಿಳಿಸಿದ್ದಾರೆ
ಸಮರ್ ಸಿಂಗ್ ಹಾಗೂ ಆತನ ಸಹೋದರ ಸಂಜಯ್ ಸಿಂಗ್ ವಿರುದ್ಧ ರೆಡ್ ಕಾರ್ನರ್ ನೋಟಿಸು ಹೊರಡಿಸಲಾಗಿತ್ತು. ಆಕಾಂಕ್ಷಾ ದುಬೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಸಮರ್ ಸಿಂಗ್ ಪ್ರಚೋದನೆ ನೀಡಿದ್ದಾನೆ ಎಂದು ಆರೋಪಿಸಿ ಆಕಾಂಕ್ಷಾ ತಾಯಿ ದೂರು ದಾಖಲಿಸಿದ್ದರು. ಅನಂತರ ಸಮರ್ ಸಿಂಗ್ ನಾಪತ್ತೆಯಾಗಿದ್ದ ಎಂದು ಅವರು ತಿಳಿಸಿದ್ದಾರೆ. ಆಕಾಂಕ್ಷಾ ದುಬೆ ಅವರ ತಾಯಿ ಮಧು ದುಬೆ ಸಲ್ಲಿಸಿದ ದೂರಿನಲ್ಲಿ ಸಮರ್ ಸಿಂಗ್ ಅವರ ಸಹೋದರ ಸಂಜಯ್ ಸಿಂಗ್ ಅವರನ್ನು ಇನ್ನೋರ್ವ ಆರೋಪಿ ಎಂದು ಹೆಸರಿಸಲಾಗಿದೆ.
ಆಕಾಂಕ್ಷಾ ಮಾರ್ಚ್ 26ರಂದು ಸಾರನಾಥ್‌ನಲ್ಲಿರುವ ಹೊಟೇಲ್‌ನ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.