ಒಂದು ಅನರ್ಹತೆ ಪ್ರಸಂಗ ಮತ್ತು ನ್ಯಾಯೋಚಿತ ಆಟ

ಅದು ತೊಂಭತ್ತರ ದಶಕ. ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಎಲ್ಲಾ ದೇಶದ ದಾಂಡಿಗರಿಗೂ ತಲೆನೋವಾಗಿ ಪರಿಣಮಿಸಿದ್ದರು. ಆತ ಕೇಳುತ್ತಿದ್ದ ಪ್ರಶ್ನೆಗಳಿಗೆ ಬ್ಯಾಟ್ಸ್ಸ್‌ಮನ್‌ಗಳ ಬಳಿ ಉತ್ತರವೇ ಇರುತ್ತಿರಲಿಲ್ಲ. 1995-96ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಆಸ್ಟ್ರೇಲಿಯ ಟೂರ್ ಮಾಡುವುದಿತ್ತು. ಆಗಿನ ಕಾಲಕ್ಕೆ ಏಶ್ಯ ತಂಡಗಳ ಹೆಚ್ಚುತ್ತಿದ್ದ ಪ್ರಾಬಲ್ಯದಿಂದ ವಿಚಲಿತರಾಗಿದ್ದ ಮತ್ತು ಸುಲಭವಾಗಿ ಸೋಲನ್ನು ಜೀರ್ಣಿಸಿಕೊಳ್ಳಲಾಗದ ಆಸ್ಟ್ರೇಲಿಯ ತಂಡ ಮತ್ತು ಅಲ್ಲಿನ ಬೋರ್ಡ್ ಒಂದು ಉಪಾಯ ಮಾಡಿದವು. ಎಲ್ಲರಿಗೂ ದುಃಸ್ವಪ್ನವಾಗಿದ್ದ ಮುತ್ತಯ್ಯ ಮುರಳೀಧರನ್ ವೃತ್ತಿ ಜೀವನವನ್ನೇ ಅನೈತಿಕವಾಗಿ ಅಂತ್ಯಗೊಳಿಸುವುದು ಎಂದು! ಅಂದು ಪೂರ್ವನಿಯೋಜಿತ ಯೋಜನೆಯಂತೆ ಆಸ್ಟ್ರೇಲಿಯನ್ ಕ್ರಿಕೆಟ್ ಬೋರ್ಡ್ ನೀಡಿದ ಎಟ ಛಿ ಚ್ಞ ಛಿಠ್ಟಿಟ ಮುರಳಿ ಎಂಬ ಸ್ಪಷ್ಟ ನಿರ್ದೇಶನದೊಂದಿಗೆ ಮೈದಾನಕ್ಕಿಳಿದವರು ಆಟಗಾರರಲ್ಲ, ಅಂಪೈರ್‌ಗಳು!
ಮೊದಲಿಗೆ ಟೆಸ್ಟ್ ಪಂದ್ಯಗಳಲ್ಲಿ ಡ್ಯಾರೆಲ್ ಹೇರ್ ಎಂಬ ಭೂಪ ಮುರಳಿ ಬೌಲಿಂಗ್ ಮಾಡುತ್ತಿಲ್ಲ, ಆತ ಚೆಂಡನ್ನು ಎಸೆಯುತ್ತಿದ್ದಾನೆ ಎಂಬ ಕಾರಣ ನೀಡಿ ಮುರಳಿ ಎಸೆತಗಳನ್ನು 'ನೋ ಬಾಲ್' ಎಂದು ಕರೆಯತೊಡಗಿದ. ನಂತರದ ದಿನಗಳಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮುರಳಿಯನ್ನು ನಾನಾ ಪರೀಕ್ಷೆಗಳಿಗೆ ಒಳಪಡಿಸಿತು. ಮುರಳಿಯ ಬೌಲಿಂಗ್ ನೈಜವಾಗಿ, ಕಾನೂನುಬದ್ಧವಾಗಿದೆ ಎಂದು ಐಸಿಸಿ ಘೋಷಿಸಿತ್ತು. ಇಷ್ಟಾದರೂ 1999ರ ಏಕದಿನ ಸರಣಿಯಲ್ಲಿ ರಾಸ್ ಎಮರ್ಸನ್ ಎಂಬ ಅಂಪೈರ್ ಮತ್ತದೇ ಕ್ಯಾತೆ ತೆಗೆದಿದ್ದ. ಆಸ್ಟ್ರೇಲಿಯನ್ ಕ್ರಿಕೆಟ್ ಬೋರ್ಡ್ ಆಶಯದಂತೆಯೇ ಇವೆಲ್ಲವೂ ನಡೆದಿತ್ತು. ಮೀಡಿಯಾ ಕೂಡ ಬೋರ್ಡ್ ಬೆಂಬಲಕ್ಕೆ ನಿಂತಿತ್ತು. ಮುರಳಿಯನ್ನು '್ಚಜ್ಠ್ಚಛ್ಟಿ' ಎಂದೂ, ಶ್ರೀಲಂಕಾ ತಂಡದ ನಾಯಕ ಅರ್ಜುನ್ ರಣತುಂಗರನ್ನು 'ಜಛಿ' ಎಂದೂ ಬ್ರಾಂಡ್ ಮಾಡಿದ್ದವು.
ಈ ಸಮಯದಲ್ಲಿ ಮುರಳಿ ಅನುಭವಿಸಿದ ಅವಮಾನ ಬಹುಶಃ ನಮ್ಮ ಊಹೆಗೂ ನಿಲುಕದ್ದು. ಅಲ್ಲಿಯವರೆಗೆ ಎಲ್ಲವನ್ನೂ ಹಲ್ಲು ಕಚ್ಚಿ ಸಹಿಸಿದ್ದ ಅರ್ಜುನ್ ರಣತುಂಗ ಅವರ ಸಹನೆಯ ಕಟ್ಟೆ ಕೂಡ ಒಡೆಯುವುದರಲ್ಲಿತ್ತು. ಶ್ರೀಲಂಕಾ ಇಂಗ್ಲೆಂಡ್ ಪಂದ್ಯವೊಂದರಲ್ಲಿ ರಾಸ್ ಎಮರ್ಸನ್ ಟ್ಠಿಚ್ಟಛಿ ್ಝಛಿಜನಿಂದ 'ನೋ ಬಾಲ್' ಎಂದು ಕರೆಯುತ್ತಿದ್ದಂತೆ ರಣತುಂಗ ಇಡೀ ತಂಡವನ್ನೇ ಕ್ರೀಡಾಂಗಣದಿಂದ ಹೊರನಡೆಸಿದರು. ದೂರವಾಣಿ ಕರೆಗಳಲ್ಲೇ ಶ್ರೀಲಂಕಾ ಹಾಗೂ ಆಸ್ಟ್ರೇಲಿಯನ್ ಕ್ರಿಕೆಟ್ ಬೋರ್ಡ್‌ಗಳ ನಡುವೆ ನಡೆದ ತೀವ್ರ ರಾಜತಾಂತ್ರಿಕ ಸಂವಾದದಲ್ಲಿ ಎಮರ್ಸನ್ ಬಾಯಿಮುಚ್ಚಿ ನಿಲ್ಲಬೇಕೆಂದು ತೀರ್ಮಾನಿಸಲಾಯಿತು. ಮುರಳಿ ಬರಿಯ ಲೆಗ್ ಸ್ಪಿನ್ ಬೌಲ್ ಮಾಡಬೇಕೆಂದು ಸೂಚಿಸಲಾಯಿತು (ಲೆಗ್ ಸ್ಪಿನ್ ಎಸೆಯಲಾಗದು ಎಂಬುದು ಕ್ರಿಕೆಟ್ ಪರಿಣಿತರ ನಂಬಿಕೆ). ಅಂದು ಅರ್ಜುನ್ ರಣತುಂಗ ಮುರಳಿ ಬಳಿ ಬಂದು ಹೇಳಿದ್ದು ಒಂದೇ ಮಾತು- ''ನಿನಗೆ ಹೇಗೆ ಬೌಲಿಂಗ್ ಮಾಡ್ಬೇಕು ಅನಿಸುತ್ತೋ ಹಾಗೆ ಮಾಡು. ನಾನು ನೋಡ್ಕೋತೀನಿ'' ಎಂದು.
ಹಲವು ವರ್ಷಗಳ ನಂತರ, ಮುರಳಿಯನ್ನು ಅನರ್ಹ ಮಾಡಿದ್ದ ಡ್ಯಾರೆಲ್ ಹೇರ್ ಅವರನ್ನೇ ಅಂಪೈರಿಂಗ್ ವೃತ್ತಿಯಿಂದ ಅನರ್ಹಗೊಳಿಸಲಾಯಿತು. ಆತ ಅಂತರ್‌ರಾಷ್ಟ್ರಿಯ ಕ್ರಿಕೆಟ್ ಅಂಪೈರ್ ಆಗಲು ಸೂಕ್ತವಲ್ಲ ಎಂದು ತೀರ್ಮಾನಿಸಿದ ಐಸಿಸಿ ನಿಷೇಧ ಹೇರಿತು. ಕ್ರಿಕೆಟ್ ಅಂಪೈರಿಂಗ್ ವೃತ್ತಿಗೆ ಎಮರ್ಸನ್ ಕಳಂಕ ತಂದವನು ಎಂದು ಕ್ರೀಡಾ ಜಗತ್ತು ಪರಿಗಣಿಸಿತು. ಆಸ್ಟ್ರೇಲಿಯ ತಂಡದ ಸ್ಟೀವ್ ವಾ, ಮುರಳಿ ಬೌಲಿಂಗನ್ನು ಅನರ್ಹ ಮಾಡಿದ ಘಟನೆ ಕ್ರಿಕೆಟ್ ಇತಿಹಾಸದ ಕರಾಳ ಅಧ್ಯಾಯವೆಂದು ಹೇಳಿದರು.
''ಅಂದು ನೀವು ಮುರಳಿಯನ್ನು ತಂಡದಿಂದ ಏಕೆ ಹೊರದೂಡಲಿಲ್ಲ?'' ಎಂಬ ಪ್ರಶ್ನೆಗೆ ರಣತುಂಗ ನೀಡಿದ ಉತ್ತರ: ''ಇಡೀ ವಿಶ್ವವೇ ಒಪ್ಪಿದ ಪ್ರತಿಭೆಯನ್ನು ಇಬ್ಬರು ಅಂಪೈರ್‌ಗಳ ತಲೆಕೆಟ್ಟ ತೀರ್ಮಾನಕ್ಕೆ ಬಲಿಕೊಡಲಾದೀತೇ?''
ಕಾಲಚಕ್ರ ಉರುಳಿದೆ. ಅವಮಾನಗಳನ್ನು ಮೀರಿ ಬೆಳೆದ ಮುರಳಿಯ ಸಾಧನೆಗಳಿಂದು ಮಾತನಾಡುತ್ತವೆ. 133 ಟೆಸ್ಟ್ ಗಳಲ್ಲಿ 800 ವಿಕೆಟ್‌ಗಳು.
ಕ್ರಿಕೆಟ್ ಕ್ರೀಡೆಯಲ್ಲಿ ನಮಗೆ ಸೋಲು ಗೆಲುವಿಗಿಂತ ಸ್ಪಿರಿಟ್, ಹುರುಪು ಮುಖ್ಯ. ಅದೊಂದು ಜಂಟಲ್ಮನ್‌ಗಳ ಆಟ. ಅದರಿಂದಲೇ ಕ್ರಿಕೆಟ್ ಆಡುವ ಉದ್ದೇಶ ಗೆಲುವೊಂದೇ ಆಗಿರುವುದಿಲ್ಲ. ಇಂದಿಗೂ ನಾವು ಐದು ಓವರ್‌ಗಳ ಕ್ರಿಕೆಟ್ ಆಡದೆ ಐದು ದಿನಗಳ ಟೆಸ್ಟ್ ಯಾಕೆ ಆಡುತ್ತೇವೆ? ಕ್ರಿಕೆಟ್ ಆಟವೇ ಅಂಥದ್ದು. ಇಲ್ಲಿ ಕೌಶಲ್ಯಕ್ಕೆ, ಸ್ಪರ್ಧೆಗೆ, ತೀವ್ರ ಹಣಾಹಣಿಗೆ ಬೆಲೆ. ಇತ್ತೀಚೆಗೆ ಮುಗಿದ ಟೆಸ್ಟ್ ಸರಣಿಯಲ್ಲಿ ಭಾರತ ಗೆದ್ದರೂ, ಸರಣಿಯ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಅಸಮಾಧಾನವಿದೆ. ಆತಿಥೇಯ ತಂಡಕ್ಕೆ ಅನುಕೂಲವಾಗುವಂತೆ ಸ್ಪಿನ್ ಪಿಚ್ ತಯಾರಿಸದೆ ಸ್ಪೋರ್ಟಿಂಗ್ ಪಿಚ್‌ಗಳನ್ನು ತಯಾರಿಸಿದ್ದರೆ ಪಂದ್ಯಗಳು ಐದನೇ ದಿನದ ಕೊನೆಯ ಸೆಶನ್‌ವರೆಗೂ ಇರುತ್ತಿದ್ದವೇನೋ ಎಂಬ ಅಭಿಪ್ರಾಯವಿದೆ.
ಗೆಲುವಿಗಿಂತ ನಾವು ಗೆಲ್ಲುವ ವಿಧಾನವೇ ಮುಖ್ಯವಾಗುತ್ತದೆ ಎಂದು ಡ್ಯಾರೆಲ್ ಹೇರ್ ಹಗರಣ ನಮಗೆ ಮನದಟ್ಟು ಮಾಡಿತು. ಫೇರ್ ಪ್ಲೇ ಎಂಬ ಪದ ನಮಗೆಲ್ಲ ಪರಿಚಯವಿರಲೇಬೇಕು. ಡ್ಯಾರೆಲ್ ಹೇರ್ ವಿವಾದದ ನಂತರ ನ್ಯೂಟ್ರಲ್ ಅಂಪೈರ್‌ಗಳ ನೇಮಕ ಕಡ್ಡಾಯವಾಯಿತು. ಅಂಪೈರ್‌ಗಳ ಎಲೈಟ್ ಪ್ಯಾನೆಲ್ ರಚನೆಯಾಯಿತು. ಕ್ರಿಕೆಟ್ ವಿಕಸನ ಇಲ್ಲಿಗೆ ನಿಲ್ಲದೆ ಮುಂದುವರಿದು, ಸ್ನಿಕೋ ಮೀಟರ್, ಹಾಟ್ ಸ್ಪಾಟ್, ಬಾಲ್ ಟ್ರಾಕಿಂಗ್, ಝೂಮ್ ವೀಡಿಯೊಗ್ರಫಿ, ಅಂಪೈರಿಂಗ್ ರಿವ್ಯೆಗಳೆಲ್ಲವೂ ಪರಿಚಯವಾದವು. ಒಂದು ಕಾಲಕ್ಕೆ ಕ್ರಿಕೆಟಿಗೆ ಮಾರಕವಾಗಿದ್ದ ಮ್ಯಾಚ್ ಫಿಕ್ಸಿಂಗ್ ಸಹಿಸುವ ಪ್ರಶ್ನೆಯೇ ಇಲ್ಲವೆಂಬ ನೀತಿ ಬಂತು. ಕ್ರಿಕೆಟ್ ಕ್ರೀಡೆಯಲ್ಲಿ ಇಷ್ಟೆಲ್ಲಾ ಬದಲಾವಣೆಗಳನ್ನು ತರಲಾಗಿದ್ದಾದರೂ ಏತಕ್ಕೆ? ಕ್ರೀಡೆಯ ಮೇಲೆ ಜನರಿಗಿದ್ದ ಅಪಾರ ವಿಶ್ವಾಸ, ಪ್ರೀತಿ ಉಳಿಸಿಕೊಳ್ಳಲಿಕ್ಕೆ.
ಫೇರ್ ಪ್ಲೇ ಎಂಬುದು ಕ್ರೀಡೆಗೆ ಮಾತ್ರ ಅನ್ವಯಿಸುವುದಿಲ್ಲ. ಎಲ್ಲಾ ಕ್ಷೇತ್ರದಲ್ಲೂ ಆಗಿನ ಆಸ್ಟ್ರೇಲಿಯನ್ ಬೋರ್ಡ್ ತರಹದ ದುರ್ಜನರ ಮಾಫಿಯಾವೊಂದು ಕೆಲಸ ಮಾಡುತ್ತಲೇ ಇರುತ್ತದೆ. ಡ್ಯಾರೆಲ್ ಹೇರ್ ಮತ್ತು ರಾಸ್ ಎಮರ್ಸನ್ ಥರದವರನ್ನು ಆಯುಧಗಳಾಗಿ ಈ ಮಾಫಿಯಾ ಉಪಯೋಗಿಸುತ್ತಲೇ ಇರುತ್ತದೆ. ಅನುಕೂಲಕರ ಪಿಚ್ ತಯಾರಿಸಿ ಗೆಲುವು ಸಾಧಿಸುವ ಹಪಾಹಪಿ ಎಲ್ಲ ತಂಡಗಳಿಗೂ ಇದ್ದೇ ಇರುತ್ತದೆ. ಆದರೆ ಜನ ಕ್ರೀಡೆ ನೋಡಲು ಬರುವುದು ಗೆಲುವು, ಸೋಲಿಗಾಗಿ ಅಲ್ಲವೇ ಅಲ್ಲ. ಜನ ಬರುವುದು ಕ್ರೀಡಾಂಗಣದಲ್ಲಿ ನಡೆಯುವ ನ್ಯಾಯಯುತ ಸೆಣಸಾಟ ನೋಡುವುದಕ್ಕಾಗಿ. ಚೆನ್ನೈ ಕ್ರೀಡಾಂಗಣದಲ್ಲಿ ಸಯೀದ್ ಅನ್ವರ್ ಸಿಡಿಸಿದ 194 ರನ್‌ಗೆ ಆತ ಪಾಕಿಸ್ತಾನದ ಆಟಗಾರ ಎಂಬುದನ್ನು ಮರೆತು ಭಾರತೀಯ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದನ್ನು ನೋಡಿದ್ದೇವೆ. ಪಾಕಿಸ್ತಾನದ ಮುಲ್ತಾನ್ ನಲ್ಲಿ ಸೆಹ್ವಾಗ್ ಬಾರಿಸಿದ ತ್ರಿಶತಕದ ಕುರಿತು ಪಾಕಿಸ್ತಾನಿಯರು ಪ್ರಶಂಸಿಸುವುದನ್ನು ಕೇಳಿದ್ದೇವೆ. ವೀರಾವೇಶದಿಂದ ಹೋರಾಡಿ ಸೋತ ತಂಡಗಳು ಕ್ರೀಡಾಂಗಣದಿಂದ ತಲೆಯಿತ್ತಿ ನಡೆದಿದ್ದನ್ನು ಕಂಡಿದ್ದೇವೆ. ಸರಿ ಮಾರ್ಗದ ಹೋರಾಟ ಮನೋಭಾವ, ಫೇರ್ ಪ್ಲೇ ತಾಕತ್ತು ಅಂಥದ್ದು.
ಅಂದು ನಡೆದ ಆಸ್ಟ್ರೇಲಿಯ ಮತ್ತು ಶ್ರೀಲಂಕಾ ಸರಣಿಯನ್ನು ಆಸ್ಟ್ರೇಲಿಯ ತುಂಬಾ ್ಚಟಞಟ್ಟಛಿಛ್ಞಿಜಿಛಿ ಆಗಿ ಗೆದ್ದಿರಬಹುದು. ಆದರೆ ಜನರಿಗೆ ಇಂದು ಆ ಸರಣಿ ಜಯ ಅಮುಖ್ಯ. ಇಂದು ಆ ಸರಣಿಯನ್ನು ನೆನಪಿಸಿಕೊಳ್ಳುವುದು ಆಸ್ಟ್ರೇಲಿಯನ್ ಕ್ರಿಕೆಟ್ ಬೋರ್ಡ್ ಕುತ್ಸಿತ ಯೋಜನೆಗಳಿಗೆ, ಡ್ಯಾರೆಲ್ ಹೇರ್ ಮತ್ತು ರಾಸ್ ಎಮರ್ಸನ್ ಹೆಣೆದಿದ್ದ ಚಕ್ರವ್ಯೆಹಕ್ಕೆ. ಚಕ್ರವ್ಯೆಹದಲ್ಲಿ ಮುರಳಿ ಅಭಿಮನ್ಯುವಿನಂತೆ ಸಿಲುಕುವರೆಂಬ ಅಂದಾಜು ಅಂಪೈರ್‌ಗಳದ್ದಾಗಿತ್ತು. ಆದರೆ ಶ್ರೀಲಂಕೆಯ ಅರ್ಜುನ್, ಮುರಳಿಯ ಬೆಂಬಲಕ್ಕೆ ನಿಂತಿದ್ದರು. ಕಾಲಕಳೆದಂತೆ ಮುರಳಿಯ ಪತನಕ್ಕೆ ವ್ಯವಸ್ಥಿತ ಸಂಚು ನಡೆಸಿದ್ದವರೆಲ್ಲ ತರಗೆಲೆಯಂತೆ ಹಾರಿಹೋದರು. ಮುರಳಿಯ ಸಾಧನೆ ಉಳಿಯಿತು. ದಾಖಲೆಗಳು ಅಮರವಾದವು.
ಅನರ್ಹರಾದ ಮುರಳಿಯ ಬೆಂಬಲಕ್ಕೆ ನಿಂತ ಅರ್ಜುನ್ ರಣತುಂಗರದು ಎಂಥ ಮೇರು ವ್ಯಕ್ತಿತ್ವ! ಯಾವುದೇ ಆಟದಲ್ಲಿ ಫೇರ್ ಪ್ಲೇ ಎಷ್ಟು ಮುಖ್ಯ. ಎಲ್ಲಾ ಕ್ಷೇತ್ರಗಳಲ್ಲೂ ವಿಶ್ವಾಸಾರ್ಹತೆಯ ಮರುಸ್ಥಾಪನೆಯಾಗುವುದೆಷ್ಟು ಅಗತ್ಯ! ಅನ್ಯಾಯದ ಆಟದಿಂದ ಯಾರು ಬೇಕಾದರೂ ಒಂದೆರಡು ಸರಣಿ ಗೆಲ್ಲಬಹುದು. ಆದರೆ ಇತಿಹಾಸದ ಪುಟಗಳಲ್ಲಿ ಉಳಿಯುವುದು ಮುರಳಿಯಂಥವರು ಮಾತ್ರ







