Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಶಿವಮೊಗ್ಗ: ಪ್ರಧಾನಿ ಕಾರ್ಯಕ್ರಮಕ್ಕೆ 21...

ಶಿವಮೊಗ್ಗ: ಪ್ರಧಾನಿ ಕಾರ್ಯಕ್ರಮಕ್ಕೆ 21 ಕೋಟಿ ರೂ.ಗೂ ಹೆಚ್ಚು ವೆಚ್ಚ

ಸರಕಾರ ಪ್ರಕಟಿಸಿರುವ ರಾಜ್ಯಪತ್ರದಲ್ಲಿ ಅಂಶ ಬೆಳಕಿಗೆ

8 April 2023 12:24 AM IST
share
ಶಿವಮೊಗ್ಗ: ಪ್ರಧಾನಿ ಕಾರ್ಯಕ್ರಮಕ್ಕೆ 21 ಕೋಟಿ ರೂ.ಗೂ ಹೆಚ್ಚು ವೆಚ್ಚ
ಸರಕಾರ ಪ್ರಕಟಿಸಿರುವ ರಾಜ್ಯಪತ್ರದಲ್ಲಿ ಅಂಶ ಬೆಳಕಿಗೆ

ಶಿವಮೊಗ್ಗ, ಎ.7: ಶಿವಮೊಗ್ಗದ ಸೋಗಾನೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಮಾನ ನಿಲ್ದಾಣದ ಉದ್ಘಾಟನೆ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದು ಕೇವಲ ಒಂದೂವರೆ ಗಂಟೆ ಮಾತ್ರ. ಆದರೆ ಈ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ 21 ಕೋಟಿ ರೂ.ಗಳ ವೆಚ್ಚಕ್ಕೆ ಅನುಮೋದನೆ ನೀಡಿದ್ದು, ನಿಜಕ್ಕೂ ಎಷ್ಟು ಖರ್ಚು ಮಾಡಲಾಗಿದೆ ಎಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

ರಾಜ್ಯ ಸರಕಾರ 23-02-2023ರಂದು ಪ್ರಕಟಿಸಿರುವ ರಾಜ್ಯಪತ್ರದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)ಯ ಅಂದಿನ ಅಧೀನ ಕಾರ್ಯದರ್ಶಿ ಶಾಂತಮ್ಮ ಅವರು ಅಧಿಸೂಚನೆ ಹೊರಡಿಸಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಹಾಗೂ ಇತರ ಕಾಮಗಾರಿಗಳ ಶಂಕುಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿಯವರು ಫೆ.27ರಂದು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಅಗತ್ಯ ಕಾಮಗಾರಿಗಳನ್ನು ನೇರವಾಗಿ ಕೈಗೆತ್ತಿಕೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ(ಜಿ)ಅಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಲೋಕೋಪಯೋಗಿ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿ ರಾಜ್ಯ ಪತ್ರದಲ್ಲಿ ಆದೇಶಿಸಿದೆ.

ಮಲೆನಾಡಿನ ಬಹುದಿನಗಳ ಕನಸಾಗಿದ್ದ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗಕ್ಕೆ ಆಗಮಿಸಿ ಉದ್ಘಾಟಿಸಿದ್ದರು. ಈ ವೇಳೆ ಪ್ರಧಾನಿಯವರ ಕಾರ್ಯಕ್ರಮಕ್ಕೆ ಪೆಂಡಾಲ್, ಭದ್ರತೆ, ಕಾರ್ಯಕ್ರಮ ಜನರನ್ನು ಕರೆತರಲು ವಾಹನ ವೆಚ್ಚ ಸೇರಿದಂತೆ ನಾನಾ ಕಾಮಗಾರಿಗೆ ಬರೋಬ್ಬರಿ 21 ಕೊಟಿ ರೂ. ವ್ಯಯಿಸಲಾಗಿದೆ ಎಂದು ಮಾಹಿತಿ ಬಹಿರಂಗವಾಗಿದೆ.

ಯಾವುದಕ್ಕೆ ಎಷ್ಟು ವೆಚ್ಚ?: ಪ್ರಧಾನಿಯವರ ಗ್ರೀನ್ ರೂಮ್, ಫ್ಲವರ್ ಡೆಕೊರೇಷನ್, ಪಿಟಿಪಿಗೆ 18 ಲಕ್ಷ ರೂ., ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಸೇರಿದಂತೆ ಗಣ್ಯರು ಕೂರಲು ಜರ್ಮನ್ ಮಾದರಿಯ ವಾಟರ್ ಫ್ರೂಪ್ ಪೆಂಡಾಲ್, ಸ್ಟೇಜ್ ಮುಂಭಾಗದ ಡಯಾಸ್ ನಿರ್ಮಾಣಕ್ಕೆ 1.41 ಲಕ್ಷ ರೂ., ಕಾರ್ಯಕ್ರಮಕ್ಕೆ ಆಗಮಿಸಿದ ವಿವಿಐಪಿ, ವಿಐಪಿ ಮತ್ತು ಕಾರ್ಯಕ್ರಮದ ವರದಿಗೆ ತೆರಳಿದ ಮಾಧ್ಯಮದವರಿಗೆ ಕೂರಲು ಜರ್ಮನ್ ಮಾದರಿಯ ವಾಟರ್ ಫ್ರೂಪ್ ಪೆಂಡಾಲ್ ನಿರ್ಮಾಣಕ್ಕೆ 3.86 ಲಕ್ಷ ರೂ.,ಕಾರ್ಯಕ್ರಮದ ವೀಕ್ಷಣೆಗೆ ಆಗಮಿಸಿದ್ದ ಲಕ್ಷಾಂತರ ರೂ. ಜನರು ಕೂರಲು ಹಾಕಿದ್ದ ಪೆಂಡಾಲ್ ಹಾಗೂ ಫುಡ್ ಕೌಂಟರ್ ನಿರ್ಮಾಣಕ್ಕೆ 59.70 ಲಕ್ಷ ರೂ., ಕಾರ್ಯಕ್ರಮಕ್ಕೆ ಇಲೆಕ್ಟ್ರಿಕಲ್ ಸಿಸ್ಟಂ, ಪವರ್ ಜನರೇಟರ್, ಫೋಟೊ- ವೀಡಿಯೊಗ್ರಫಿ ಮತ್ತು ಇತರ ಖರ್ಚು ಸೇರಿ 65 ಲಕ್ಷ ರೂ. ವ್ಯಯಿಸಲಾಗಿದೆ.

ಪ್ರಧಾನಿ ಮೋದಿಯವರ ಭದ್ರತಾ ದೃಷ್ಟಿಯಿಂದ ವಿಮಾನ ನಿಲ್ದಾಣದ ಸುತ್ತಮುತ್ತ ಹಾಗೂ ವೇದಿಕೆ ಮುಂಭಾಗದಲ್ಲಿ ಸಿಸಿಟಿವಿ ಅಳವಡಿಕೆಗೆ 33.75 ಲಕ್ಷ ರೂ. ಹಾಗೂ ಬ್ಯಾರಿಕೇಡ್ ಒದಗಿ ಸಿರುವುದು, ಸೈನ್ ಬೋರ್ಡ್ ಸರಿಪಡಿಸುವುದು ಮತ್ತು ಸೈನ್ ಬೋರ್ಡ್ ಅನ್ನು ತೆಗೆದು ಹಾಕುವುದು ಮತ್ತು ಇತರ ಸಂಬಂಧಿತ ಕೆಲಸಗಳು ಮತ್ತು ಸೋಗಾನೆ ವಿಮಾನ ನಿಲ್ದಾಣದ ಹಿನ್ನಲೆಯ ಮಾಹಿತಿ ಪ್ರದರ್ಶನಕ್ಕೆ 19 ಲಕ್ಷ ರೂ. ಮತ್ತು ವಿಮಾನ ನಿಲ್ದಾಣ ಉದ್ಘಾಟನೆಗೆ ಬಂದವರಿಗೆ ಕುಡಿಯುವ ನೀರು, ಟಾಯ್ಲೆಟ್ ವ್ಯವಸ್ಥೆಗೆ 10 ಲಕ್ಷ ರೂ. ಹಾಗೂ ಸೋಗಾನೆಯಲ್ಲಿ ಸ್ಟೇಜ್‌ಗೆ ಪೆಂಡಾಲ್ ಹಾಕಲು ಹಾಗೂ ವಾಹನ ಪಾರ್ಕಿಂಗ್‌ಗೆ ನೆಲಸಮಗೊಳಿಸಲು ಖರ್ಚಾಗಿದ್ದು, 1.50 ಲಕ್ಷ ರೂ. ಮತ್ತು ವಿವಿಐಪಿ ವಾಹನ ನಿಲುಗಡೆಗೆ ಜಾಗವನ್ನು ನೆಲಸಮ ಮಾಡಲು 1.45 ಲಕ್ಷ ರೂ ., ಪ್ರಧಾನಿಯವರು ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಗೆ ತೆರಳಲು ಬದಲಿ ರಸ್ತೆ ನಿರ್ಮಾಣಕ್ಕೆ 32.50 ಲಕ್ಷ ರೂ. ಮತ್ತು ವಿಮಾನ ನಿಲ್ದಾಣದ ಆವರಣದಲ್ಲಿ ಈವೆಂಟ್ ಡಯಾಸ್ ಗೆ ಸಾರ್ವಜನಿಕ ಪ್ರವೇಶವನ್ನು ಕಲ್ಪಿಸಲು ಮುಂಭಾಗದ ಕಾಂಪೌಂಡ್ ಗೋಡೆಯನ್ನು ತೆಗೆದು ಹಾಕುವುದು ಮತ್ತು ಪುನರ್‌ನಿರ್ಮಿಸುವುದಕ್ಕೆ 11 ಲಕ್ಷ ರೂ., ವಿಮಾನ ನಿಲ್ದಾಣದ ಆವರಣದಲ್ಲಿ ಕಾರ್ಯಕ್ರಮದ ದಿನದಂದು ಸಾರ್ವಜನಿಕರಿಗೆ ಆಹಾರ ಮತ್ತು ಕುಡಿಯುವ ನೀರು ಒದಗಿಸಲು 1.50 ಕೋಟಿ ರೂ., ವಿಮಾನ ನಿಲ್ದಾಣದ ಉದ್ಘಾಟನೆಗೆ ಸಾರ್ವಜನಿಕರನ್ನು ಕರೆ ತರಲು ಸಾರಿಗೆ ಸೌಲಭ್ಯಕ್ಕಾಗಿ 4.25ಕೋಟಿ ರೂ., ವಿವಿಐಪಿಗಳ ಸಾರಿಗೆ ಸೌಲಭ್ಯಕ್ಕೆ 5 ಲಕ್ಷ ರೂ., ಪ್ರಧಾನಿ ಭದ್ರತಾ ತಂಡದ ಎಸ್‌ಪಿಜಿ ಮತ್ತು ವಿವಿಐಪಿಗಳಿಗೆ ಆಹಾರ ಮತ್ತು ಬೋರ್ಡಿಂಗ್ ಸೌಲಭ್ಯಕ್ಕಾಗಿ 35 ಲಕ್ಷ ರೂ. ಖರ್ಚು ವ್ಯಯಿಸಲಾಗಿದೆ.

ಅಲ್ಲದೆ ಅಂದಿನ ಕಾರ್ಯಕ್ರಮದ ಸಾಂಸ್ಕೃತಿಕ ಚಟುವಟಿಕೆಗೆ 25 ಲಕ್ಷ ರೂ. ಮತ್ತು ಉದ್ಘಾಟನಾ ಕಾರ್ಯಕ್ರಮದ ತಯಾರಿ ಮತ್ತು ಆಮಂತ್ರಣ ಪತ್ರಗಳ ಮುದ್ರಣಕ್ಕಾಗಿ 15 ಲಕ್ಷ ರೂ., ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಕುರಿತು ಪ್ರಧಾನಿಗೆ ವೀಡಿಯೊ ಮತ್ತು ಮಾದರಿ ಪ್ರಸ್ತುತಿಗಾಗಿ 20 ಲಕ್ಷ ರೂ. ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರಿಗೆ ಊಡುಗೊರೆ ನೀಡಲು ಖರ್ಚಾಗಿದ್ದು, 15 ಲಕ್ಷ ರೂ. ಮತ್ತು ವಿವಿಧ ಖರ್ಚು 24 ಲಕ್ಷ ರೂ. ಮತ್ತು ಶೇ.18 ಜಿಎಸ್‌ಟಿ 321.29 ಸೇರಿ ಬರೋಬ್ಬರಿ 21.06 ಕೋಟಿ ರೂ. ಅಂದಾಜು ಖರ್ಚಾಗಿ ದೆ ಎಂದು ರಾಜ್ಯಪತ್ರದಿಂದ ಮಾಹಿತಿ ದೊರೆತಿದೆ.

share
Next Story
X