ಸಂತರು ಮಿಷನರಿಗಳಿಗಿಂತ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ: ಮೋಹನ್ ಭಾಗ್ವತ್

ಜೈಪುರ: "ಹಿಂದೂ ಸಂತರು ಮಿಷನರಿಗಳಿಗಿಂತ ಹೆಚ್ಚು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಶುಕ್ರವಾರ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಸೇವಾ ಸಂಗಮ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಿಷನರಿಗಳು ಆಸ್ಪತ್ರೆ ಮತ್ತು ಶಾಲೆಗಳನ್ನು ವಿಶ್ವಾದ್ಯಂತ ನಡೆಸುತ್ತಿವೆ. ಆದರೆ ನಾಲ್ಕು ದಕ್ಷಿಣ ರಾಜ್ಯಗಳಲ್ಲಿ ಸಂತರು ಸಮಾಜದಲ್ಲಿ ಇದಕ್ಕಿಂತ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
"ಚೆನ್ನೈನಲ್ಲಿ ಹಿಂದೂ ಸೇವಾ ಮೇಳ ನಡೆದಿತ್ತು. ಆಗ ದಕ್ಷಿಣ ಭಾರತದ ನಾಲ್ಕು ಪ್ರಾಂತ್ಯಗಳ ಆಚಾರ್ಯರು, ಮುನಿಗಳು, ಸನ್ಯಾಸಿಗಳು ಮಿಷನರಿಗಳಿಗಿಂತ ಉತ್ತಮ ಸೇವೆಯನ್ನು ಸಮಾಜಕ್ಕೆ ಒದಗಿಸುತ್ತಿದ್ದಾರೆ ಎನ್ನುವುದು ನನಗೆ ತಿಳಿಯಿತು" ಎಂದು ವಿವರಿಸಿದರು. ದೇಶದ ಹೊರಗಿನಿಂದ ಬಂದ ಆಡಳಿತಗಾರರು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಅಲೆಮಾರಿ ಬದುಕು ಸಾಗಿಸುತ್ತಿದ್ದ ಕಾರಣಕ್ಕಾಗಿ ಅಪರಾಧಿಗಳು ಎಂದು ಕರೆದರು. ಆರೆಸ್ಸೆಸ್ ಅವರ ಸಾಂಸ್ಕೃತಿಕ ಹಕ್ಕುಗಳನ್ನು ಪುನಃಸ್ಥಾಪಿಸಲು ಶ್ರಮಿಸುತ್ತಿದೆ" ಎಂದು ಹೇಳಿದರು.