ಸುಖೋಯ್ 30 ಫೈಟರ್ ವಿಮಾನದಲ್ಲಿ ಮೊದಲ ಬಾರಿ ಪ್ರಯಾಣ ಬೆಳೆಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಗುವಾಹಟಿ: ರಾಷ್ಟ್ರಪತಿ ದ್ರೌಪದಿ ಮುರ್ಮು(President Droupadi Murmu)ಅವರು ಶನಿವಾರದಂದು ಅಸ್ಸಾಂನ ತೇಝ್ ಪುರ್ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಸುಖೋಯ್ 30 MKI ಫೈಟರ್ ಏರ್‌ಕ್ರಾಫ್ಟ್‌ನಲ್ಲಿ ಮೊದಲ ಬಾರಿಗೆ ಪ್ರಯಾಣ ಬೆಳೆಸಿದರು.
ರಾಜ್ಯಕ್ಕೆ ಮೂರು ದಿನಗಳ ಭೇಟಿಯ ಸಂದರ್ಭದಲ್ಲಿ ರಾಷ್ಟ್ರಪತಿಗಳು ಫೈಟರ್ ಜೆಟ್ ನಲ್ಲಿ ಪ್ರಯಾಣಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಎಪ್ರಿಲ್ 6 ರಂದು ಅಸ್ಸಾಂಗೆ ಆಗಮಿಸಿದ್ದರು. ಕಾಝಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ತೆರಳಿದರು. ಎಪ್ರಿಲ್ 7 ರಂದು ಕಾಝಿರಂಗ ರಾಷ್ಟ್ರೀಯ ಉದ್ಯಾನವನವನ್ನು ಉದ್ಘಾಟಿಸಿದರು. ಶುಕ್ರವಾರ ಉದ್ಯಾನದಲ್ಲಿ ಎರಡು ದಿನಗಳ 'ಗಜ್ ಉತ್ಸವ'ವನ್ನು ಉದ್ಘಾಟಿಸಿದ ನಂತರ ಗುವಾಹಟಿಯಲ್ಲಿ ಗುವಾಹಟಿ ಹೈಕೋರ್ಟ್‌ನ 75 ವರ್ಷಗಳನ್ನು ಪೂರ್ಣಗೊಳಿಸಿದ ಸಮಾರಂಭದಲ್ಲಿ ಭಾಗವಹಿಸಿದರು.
ಮುರ್ಮು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಿಕೊಂಡರು. 2009 ರಲ್ಲಿ ಪುಣೆ ಏರ್ ಫೋರ್ಸ್ ಬೇಸ್‌ನಿಂದ ಮುಂಚೂಣಿ ಯುದ್ಧ ವಿಮಾನ ಸುಖೋಯ್ ಫೈಟರ್ ಜೆಟ್‌ನಲ್ಲಿ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಹಾರಾಟ ನಡೆಸಿದ್ದರು.
#WATCH | Assam: President Droupadi Murmu takes sortie on the Sukhoi 30 MKI fighter aircraft pic.twitter.com/jtRVsFR2X2
— ANI (@ANI) April 8, 2023
#WATCH | President Droupadi Murmu to take sortie on the Sukhoi 30 MKI fighter aircraft at Tezpur Air Force Station, Assam pic.twitter.com/DXjG3kieut
— ANI (@ANI) April 8, 2023







