ಕಾರ್ಕಳ: ಕಿಡಿಗೇಡಿಗಳಿಂದ ಹಿಟಾಚಿಗೆ ಬೆಂಕಿ; 15 ಲಕ್ಷ ರೂ. ನಷ್ಟ

ಕಾರ್ಕಳ, ಎ.8: ಜಾಗ ಸಮತಟ್ಟು ಮಾಡಲು ನಿಲ್ಲಿಸಿದ್ದ ಹಿಟಾಚಿ ಯಂತ್ರಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಇದರಿಂದ ಸಂಪೂರ್ಣ ಸುಟ್ಟು ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಘಟನೆ ಎ.6ರಂದು ರಾತ್ರಿ ನಡೆದಿದೆ.
ಕಾರ್ಕಳದ ದಿನೇಶ್ ಶೆಟ್ಟಿ ಎಂಬವರು ತಮ್ಮ ಜಾಗದಲ್ಲಿ ಹೊಸ ಕ್ರಶರ್ ಪ್ರಾರಂಭಿಸಲು ಸ್ಥಳ ಸಮತಟ್ಟು ಮಾಡುವ ಉದ್ದೇಶದಿಂದ ಹಿಟಾಚಿ ಯಂತ್ರ ವನ್ನು ನಿಲ್ಲಿಸಿದ್ದರು. ಇದಕ್ಕೆ ಕಿಡಿಗೇಡಿಗಳು ಬೆಂಕಿ ಕೊಟ್ಟಿದ್ದು, ಯಂತ್ರವು ಸುಟ್ಟು ಕರಕಲಾಗಿದೆ. ಇದರಿಂದ ಸುಮಾರು 15 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ದೂರಲಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





