ಹಣ ದುರುಪಯೋಗ ಆರೋಪ: ದೂರು ದಾಖಲು

ಮಂಗಳೂರು, ಎ.8: ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಕ್ಲಾಸಿಕ್ ಪ್ಯಾರಡೈಸ್ ಅಪಾರ್ಟ್‌ಮೆಂಟ್‌ನ ಮಾಲಕರ ಸಂಘದ ಯಾವುದೇ ಮಂಡಳಿಯ ಸಭೆಗೆ ಹಾಜರಾಗದ ಸಂಘದ ಪ್ರಸ್ತುತ ಬೋರ್ಡ್ ಆಫ್ ಮ್ಯಾನೇಜರ್ ಅನಂತ ಪ್ರಸಾದ್, ಆತ್ಮಚರಣ್ ಹಾಗೂ ಅನಿತಾ ಮುರಳೀಧರನ್ ಅವರು ಸಂಘದ ಹಣದ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯ ಪ್ರಕ್ರಿಯೆ ಆರಂಭಿಸಿದ್ದಾರೆ.
ಅಪಾರ್ಟ್‌ಮೆಂಟ್‌ಗೆ ಸಂಬಂಧಿಸಿದ ಈಜುಕೊಳ ನವೀಕರಣ, ಕಾಂಪೌಂಡ್ ಪುನರ್ ನಿರ್ಮಾಣ, ಇಂಟರ್‌ಲಾಕ್ ಅಳವಡಿಕೆ, ಕಬ್ಬಿಣದ ಗ್ರಿಲ್ ಅಳವಡಿಕೆ, ತೋಟಗಾರಿಕೆ, ಕುರ್ಚಿಗಳ ಖರೀದಿ ಮತ್ತು ಭದ್ರತಾ ಶುಲ್ಕಗಳನ್ನು ಯಾವುದೇ ಅನುಮೋದನೆಯಿಲ್ಲದೆ ಕ್ಲಾಸಿಕ್ ಅಪಾರ್ಟ್‌ಮೆಂಟ್‌ನ ಉಪ-ಕಾನೂನಿಗೆ ವಿರುದ್ಧವಾಗಿ, ಪುಸ್ತಕದಲ್ಲಿ ನಮೂದಿಸದೆ ತಮ್ಮ ಇಚ್ಚೆಯಂತೆ ಮಂಡಳಿ/ಕಾರ್ಯಕಾರಿ ಸಮಿತಿಯಲ್ಲಿ ಪೂರ್ವಾನುಮತಿ ಪಡೆಯದೆ ಹಣ ದುರುಪಯೋಗ ಮಾಡಿದ್ದಾರೆ ಎಂದು ಬೋರ್ಡ್ ಆಫ್ ಮ್ಯಾನೇಜರ್ ರಾಹುಲ್ ರಾವ್ ದೂರು ನೀಡಿದ್ದಾರೆ.
Next Story