ಎರಡು ಬೈಕ್ ಕಳವು: ದೂರು

ಮಂಗಳೂರು, ಎ.8: ನಗರದ ಎರಡು ಕಡೆ ಬೈಕ್ ಕಳವಾಗಿರುವ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಮಾ.26ರಂದು ರಾತ್ರಿ 9ಕ್ಕೆ ಶರತ್ ಎಂಬವರು ಲೇಡಿಹಿಲ್ ನಾರಾಯಣ ಗುರು ವೃತ್ತದ ಬಸ್ ನಿಲ್ದಾಣದಲ್ಲಿ ಬೈಕ್ ಪಾರ್ಕ್ ಮಾಡಿ ಸ್ಟ್ರೀಟ್ ಫುಡ್ ಫೆಸ್ಟಿವಲ್‌ಗೆ ಹೋಗಿದ್ದರು. ರಾತ್ರಿ 11ಕ್ಕೆ ವಾಪಸ್ ಬಂದಾಗ ಬೈಕ್ ಕಳವಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಾ.25ರಂದು ಸಂಜೆ 6:40ಕ್ಕೆ ಗಣೇಶ್ ಎಂಬವರು ನಗರದ ರಾವ್ ಆ್ಯಂಡ್ ರಾವ್ ವೃತ್ತದಿಂದ ಬಂದರು ಕಡೆಗೆ ತೆರಳುವ ಮಿಷನ್ ಸ್ಟ್ರೀಟ್ ರಸ್ತೆಯಲ್ಲಿರುವ ಅಂಗಡಿಯೊಂದರ ಎದುರು ಬೈಕ್ ನಿಲ್ಲಿಸಿದ್ದರು. ರಾತ್ರಿ 7:15ಕ್ಕೆ ಬಂದಾಗ ಬೈಕ್ ಕಳಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story