ಕಾರ್ಕಳ: ಪ್ರಜಾ ವಿಜಯ ಸಮಾರಂಭ

ಕಾರ್ಕಳ: ಹಿರಿಯರಾಗಿರುವ ಪ್ರಮೋದ್ ಮುತಾಲಿಕ್ ನಮಗೆ ಮಾರ್ಗದರ್ಶಕರು. ಇಡೀ ಜೀವನವನ್ನು ಹಿಂದುತ್ವ ಕ್ಕಾಗಿ ಮುಡಿಪಾಗಿಟ್ಟವರು. ನಮ್ಮ ಸಂಸ್ಕೃತಿಗೆ ತೊಂದರೆಯಾದರೆ ಅದರ ವಿರುದ್ಧ ಸಿಡಿದು ನಿಲ್ಲುವ ವ್ಯಕ್ತಿ ಪ್ರಮೋದ್ ಮುತಾಲಿಕ್ ಎಂದು ತೆಲಂಗಾಣದ ಶಾಸಕ ರಾಜಸಿಂಗ್ ಠಾಕೂರ್ ಹೇಳಿದರು.
ಅವರು ಎ. 8ರಂದು ಹೆಬ್ರಿ ಬಸ್ ನಿಲ್ದಾಣ ವಠಾರದಲ್ಲಿ ಪ್ರಮೋದ್ ಮುತಾಲಿಕ್ ಅಭಿಮಾನಿ ಬಳಗದ ವತಿಯಿಂದ ನಡೆದ ಪ್ರಜಾ ವಿಜಯ ಸಮಾರಂಭದಲ್ಲಿ ಮಾತನಾಡಿದರು.
ಮುತಾಲಿಕ್ ಶ್ರೀರಾಮ ಸೇನೆ ಸ್ಥಾಪಿಸಿ ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತದಲ್ಲಿ ಹಿಂದೂಗಳನ್ನು ಒಂದು ಗೂಡಿಸುವ ಕಾರ್ಯ ಮಾಡಿದ್ದಾರೆ. ಸ್ವಾರ್ಥಕ್ಕಾಗಿ ಏನು ಮಾಡದೇ ತನ್ನ ಜೀವನವನ್ನು ಸಮಾಜಕ್ಕಾಗಿ, ಹಿಂದುತ್ವಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಇದರ ಪರಿಣಾಮ ನೂರಕ್ಕೂ ಅಧಿಕ ಕೇಸು ಅವರ ಮೇಲೆ ದಾಖಲಾಗಿ ಕೋರ್ಟ್ ಅಲೆಯುವಂತಾಗಿದೆ. ಇವರೊಂದಿಗೆ ನನ್ನದೂ ಒಂದು ಪ್ರಕರಣವಿದ್ದು ಅದಕ್ಕಾಗಿ ಬೆಂಗಳೂರು ಬಂದು ಹೋಗುತ್ತೇನೆ ಎಂದು ರಾಜಸಿಂಗ್ ಹೇಳಿದರು.
ಇವತ್ತು ನಾನು ಧರ್ಮ ಸಂಕಟಕ್ಕೆ ಸಿಲುಕಿದ್ದೇನೆ. ಒಂದು ಕಡೆ ಪ್ರಮೋದ್ ಜೀಯಾದರೆ ಇನ್ನೊಂದು ಕಡೆಯಲ್ಲಿ ಪಕ್ಷವಿದೆ. ಯಾರನ್ನು ಸಮರ್ಥಿಸಬೇಕು ? ಯಾರ ಪರ ಮಾತನಾಡಬೇಕೆಂದು ಗೊತ್ತಾಗುತ್ತಿಲ್ಲ. ನಿಮಗೆ ಯಾವ ರೀತಿಯ ನಾಯಕ ಬೇಕು ಎಂಬುವುದನ್ನು ನೀವೇ ಅರಿಯಿರಿ ಎಂದು ರಾಜಸಿಂಗ್ ಸೇರಿದ ಜನರಲ್ಲಿ ಹೇಳಿದರು.
ಭಾರತಕ್ಕೆ ಪ್ರಧಾನಿ ರೂಪದಲ್ಲಿ ಮೋದಿಯಂತಹ ಮಹಾ ನಾಯಕ ಸಿಕ್ಕಿದ್ದಾರೆ. ಅವರು ನಮ್ಮ ದೇಶದ ನಕ್ಷೆಯನ್ನೇ ಬದಲಿಸಿದ್ದಾರೆ. ಮೋದಿಯ ಆಡಳಿತ ವೈಖರಿಯಿಂದ ಇಂದು ಪ್ರಪಂಚದ ಬಹುತೇಕ ರಾಷ್ಟ್ರಗಳು ಭಾರತಕ್ಕೆ ತಲೆಬಾಗಿ ನಮಿಸುತ್ತಿದೆ ಎಂದು ರಾಜಸಿಂಗ್ ಹೇಳಿದರು.
ಅನೇಕ ರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿ ಆಡಳಿತ ನಡೆಸುತ್ತಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಸರಕಾರವಿದೆ. ಆದರೆ, ವ್ಯಕ್ತಿಗತವಾಗಿ ಜಾಸ್ತಿ ಏನೂ ಹೇಳಲು ಆಗುವುದಿಲ್ಲ. ನನಗೂ ಪ್ರೊಟೋಕಾಲ್ ಇದೆ. ಇದನ್ನು ನೀವು ಯೋಚಿಸಿ ನಿರ್ಧಾರ ಮಾಡಬೇಕು. ಯೋಗಿ ಆದಿತ್ಯನಾಥ್ ಇತಿಹಾಸ ರಚಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ರೌಡಿಗಳು ತಲೆ ಎತ್ತುವ ಮೊದಲು 10 ಬಾರಿ ಯೋಚಿಸುತ್ತಾರೆ. ತಲೆ ಎತ್ತಿದರೆ ಹೊಸಕಿ ಹಾಕಲಾಗುತ್ತಿದೆ. ರೌಡಿಸಂ ಮಾಡಿದರೆ ಮನೆ ಮೇಲೆ ಬುಲ್ಡೋಜರ್ ಹತ್ತಿಸಲಾಗುತ್ತದೆ ಎಂದು ರಾಜಸಿಂಗ್ ಹೇಳಿದರು.
ನಾನು ಬರುವಾಗ ಪರ್ಪಲೆ ಮಂದಿರಕ್ಕೆ ಹೋಗಿದ್ದೆ. ಆ ಮಂದಿರದ ಮುಂದೆ ನಾನು ಶಿಲುಬೆ ನೋಡಿದೆ. ಸರಕಾರವು ಇಲ್ಲಿ ಸಹ ಬುಲ್ಡೋಜರ್ ಹರಿಸಬೇಕೆಂದು ಮನವಿ ಮಾಡುತ್ತೇನೆ. ಯಾರಾದರೂ ಕಾನೂನು ಬಾಹಿರವಾಗಿ ಜಾಗ ಅತಿಕ್ರಮಣ ಮಾಡಿದಲ್ಲಿ ಕೂಡಲೇ ಬುಲ್ಡೋಜರ್ ಹರಿಸಿ ತೆರವುಗೊಳಿಸಬೇಕೆಂದು ರಾಜಸಿಂಗ್ ಹೇಳಿದರು.
ಕರ್ನಾಟಕದಲ್ಲಿ ಯೋಗಿ ಮಾದರಿಯಲ್ಲಿ ಕೆಲಸ ಮಾಡುವ ಅವಶ್ಯಕತೆ ಇದೆ. ಈ ರಾಜ್ಯದಲ್ಲಿ ಬಹಳಷ್ಟು ಒಳ್ಳೆಯ ಕಾರ್ಯಗಳಾಗಿದೆ. ಅದನ್ನು ನಾನು ಸಹ ನೋಡಿದ್ದೇನೆ. 4% ಮೀಸಲಾತಿಯನ್ನು ಕಿತ್ತು ಬಿಸಾಡಿದ್ದಾರೆ. ಇದನ್ನು ನಮ್ಮವರಿಗೆ ನೀಡಿರುವುದು ಒಳ್ಳೆಯ ಬೆಳವಣಿಗೆ. ಹಿಜಾಬ್ ನಿಷೇಧ, ಗೋ ಹತ್ಯೆ ನಿಷೇಧಿಸಿರುವುದು ಒಳ್ಳೆಯ ಬೆಳವಣಿಗೆ. ಕರ್ನಾಟಕದಲ್ಲಿ ಮುಂದಿನ ಬಾರಿಯೂ ಬಿಜೆಪಿ ಸರಕಾರವೇ ಬರಲಿ ಎಂದು ಪ್ರಾರ್ಥಿಸುತ್ತೇನೆ. ಮುಂದಿನ ಬಾರಿ ಸರಕಾರ ಬಂದ ಸಮಯದಲ್ಲಿ ಹಂತಕರಿಗೆ ಗಲ್ಲು ಶಿಕ್ಷೆಯಾಗಲಿ. ಇದಕ್ಕಾಗಿ ತ್ವರಿತ ನ್ಯಾಯಾಲಯಗಳ ಸ್ಥಾಪನೆಯಾಗಲಿ. ಈ ಬಗ್ಗೆ ಧ್ವನಿ ಎತ್ತುವವರನ್ನು ವಿಧಾನಸಭೆಗೆ ಕಳುಹಿಸಬೇಕಾಗಿದೆ ಎಂದು ರಾಜಸಿಂಗ್ ಹೇಳಿದರು.
ಇವತ್ತಿಗೂ ಗೋವುಗಳನ್ನು ಕಳ್ಳತನ ಮಾಡಲಾಗುತ್ತಿದೆ. ತಡೆಯಲು ಹೋದ ಹಿಂದೂ ಸಹೋದರನನ್ನು ಹತ್ಯೆ ಮಾಡಲಾಗುತ್ತಿದೆ. ಗೋ ಮಾತೆಯು ಹಿಂದೂಗಳ ಭಕ್ತಿಯ ಪ್ರತೀಕವಾಗಿದೆ. ಅದರಲ್ಲಿ ದೇವರನ್ನು ಕಾಣುತ್ತೇವೆ. ಗೋ ಹತ್ಯೆ ನಿಷೇಧ ಕಾನೂನಿದ್ದರೂ ಗೋವುಗಳನ್ನು ಕಡಿಯಲಾಗುತ್ತಿದೆ. ಪ್ರಮೋದ್ ಮುತಾಲಿಕ್ ಹಾಗೂ ಶ್ರೀರಾಮ ಸೇನೆಯ ಕಾರ್ಯಕರ್ತರು ಗೋ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ನಾನು ಅಭಿನಂದಿಸುತ್ತೇನೆ ಎಂದು ರಾಜಸಿಂಗ್ ಹೇಳಿದರು.
ರಮೇಶ್ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು. ಸುಧೀರ್ ಹೆಬ್ರಿ, ವಿವೇಕಾನಂದ ಶೆಣೈ ಕಾರ್ಕಳ, ಸುಭಾಶ್ಚಂದ್ರ ಹೆಗ್ಡೆ, ಅಶ್ವಿನಿ ಶಿವಮೊಗ್ಗ, ದಿವ್ಯಾ ನಾಯಕ್, ರೂಪ ಶೆಟ್ಟಿ, ರಾಹುಲ್ ಮೇಸ್ತ, ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ವಿನಯ ರಾನಡೆ ಮಾಳ, ಆನಂದ ಅಡ್ಯಾರ್, ನಾಗೇಶ್ ಪೈ ಕಾರ್ಕಳ, ರಾಘವ ನಾಯಕ್, ಪ್ರವೀಣ್ ಕಾಂತರಗೋಳಿ, ಶ್ರೀರಾಮ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು, ರತ್ನಾವತಿ ನಾಯಕ್ ಹಿರ್ಗಾನ, ವಾಸುದೇವ ಶೆಟ್ಟಿಗಾರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹರೀಶ್ ಅಧಿಕಾರಿ ಸ್ವಾಗತಿಸಿದರು








