ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ಬದ್ರ್ ಮೌಲಿದ್

ಉಳ್ಳಾಲ: ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ವತಿಯಿಂದ ಬೃಹತ್ ಬದ್ರ್ ಮೌಲಿದ್ ಪಾರಾಯಣವು ಎಮ್.ಸಿ ಮುಹಮ್ಮದ್ ಪೈಝಿ ಮೋಂಗಮ್ ರವರ ನೇತ್ರತ್ವದಲ್ಲಿ ಉಳ್ಳಾಲ ಕೇಂದ್ರ ಮಸೀದಿಯಲ್ಲಿ ಜರುಗಿತು.
ಉಳ್ಳಾಲ ಕೇಂದ್ರ ಜುಮಾ ಮಸೀದಿ ಖತೀಬ್ ಇಬ್ರಾಹೀಮ್ ಸಅದಿ ದುಆಶಿರ್ವಾದಗೈದರು, ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಸಯ್ಯಿದ್ ಜಲಾಲ್ ತಂಙಳ್ ಅಳೇಕಲ ಬದ್ರ್ ಮೌಲಿದ್ ದುಆ ಗೈದರು.
ಕಾರ್ಯಕ್ರಮದಲ್ಲಿ ಸಯ್ಯಿದ್ ಮದನಿ ಅರಬಿಕ್ ಕಾಲೇಜಿನ ಮಾಜಿ ಪ್ರೊ. ಅಬ್ದುಲ್ ರಶೀದ್ ಮದನಿ, ದರ್ಗಾ ಕೋಶಾಧಿಕಾರಿ ನಾಝಿಮ್ ರಹ್ಮಾನ್, ಜತೆ ಕಾರ್ಯದರ್ಶಿ ಇಸಾಕ್ ಮೇಲಂಗಡಿ, ಮುಸ್ತಫ ಮದನಿನಗರ, ಲೆಕ್ಕ ಪರಿಶೋಧಕರಾದ ಯು.ಎಚ್ ಫಾರೂಕ್ ಕಲ್ಲಾಪು, ದರ್ಗಾ ಸದಸ್ಯರಾದ ಸಯ್ಯಿದ್ ಝಿಯಾದ್ ತಂಙಳ್, ಝೈನಾಕ ಮೇಲಂಗಡಿ, ಅಯ್ಯುಬ್ ಮುಕ್ಕಚ್ಚೇರಿ, ಅಬ್ದುಲ್ ರಹ್ಮಾನ್ ಅವೂದಿ, ಮೊಯ್ದಿನ್ ಬಿ ಇನ್ನಿತರರು ಉಪಸ್ಥಿತರಿದ್ದರು.