ಪಾಕ್ ಸರಕಾರದಿಂದ ದೇಶಕ್ಕೆ ಕೆಟ್ಟ ಹೆಸರು: ಇಮ್ರಾನ್ ಖಾನ್

ಇಸ್ಲಮಾಬಾದ್, ಎ.8: ಪಾಕಿಸ್ತಾನದ ಸರಕಾರದ ಕ್ರಮಗಳು ವಿದೇಶದಲ್ಲಿ ದೇಶವನ್ನು ಅಪಹಾಸ್ಯಕ್ಕೆ ಒಳಗಾಗಿಸಿದೆ ಎಂದು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷದ ಮುಖಂಡ, ಮಾಜಿ ಪ್ರಧಾನಿ ಇಮ್ರಾನ್ಖಾನ್ ಶುಕ್ರವಾರ ಕಳವಳ ವ್ಯಕ್ತಪಡಿಸಿದ್ದಾರೆ.
ಈಗ ಆಡಳಿತದಲ್ಲಿರುವ ಅಪಾಯಕಾರಿ ಬಫೂನ್ಗಳು ಮಾಜಿ ಪ್ರಧಾನಿಯ ವಿರುದ್ಧ ನಕಲಿ ಎಫ್ಐಆರ್, ಅಸಂಬದ್ಧ ದೇಶದ್ರೋಹ ಆರೋಪ ದಾಖಲಿಸುವ ಮೂಲಕ ವಿದೇಶದಲ್ಲಿ ದೇಶಕ್ಕೆ ಅಪಖ್ಯಾತಿ ತರುತ್ತಿದ್ದಾರೆ. ದೇಶವನ್ನು ಅಪಹಾಸ್ಯಕ್ಕೆ ಒಳಗಾಗಿಸಿದ್ದಾರೆ ಎಂದು ಇಮ್ರಾನ್ಖಾನ್ ಟ್ವೀಟ್ ಮಾಡಿದ್ದಾರೆ.
ಪಂಜಾಬ್ ಚುನಾವಣೆಯನ್ನು ವಿಳಂಬಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಒಪ್ಪಿಕೊಳ್ಳದ ಪಾಕ್ ಸರಕಾರದ ನಿಲುವು ವಿದೇಶದ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನಿಸಬಹುದು ಎಂದವರು ಎಚ್ಚರಿಸಿದ್ದಾರೆ
Next Story