ಸರಗೂರು ವಿವೇಕಾನಂದ ಆಸ್ಪತ್ರೆಯಲ್ಲಿ ತರಬೇತಿಗೆ ದಾಖಲಾಗಿದ್ದ ನಂಜನಗೂಡು ವಿದ್ಯಾರ್ಥಿನಿ ಆತ್ಮಹತ್ಯೆ
ಮೈಸೂರು: ಮೈಸೂರು ಜಿಲ್ಲೆ ಸರಗೂರು ಪಟ್ಟಣದ ಸ್ವಾಮಿ ವಿವೇಕಾನಂದ ಆಸ್ಪತ್ರೆಯಲ್ಲಿ ತರಬೇತಿಗೆ ದಾಖಲಾಗಿದ್ದ ವಿದ್ಯಾರ್ಥಿನಿ ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಂಜನಗೂಡು ತಾಲ್ಲೂಕು ಹೆಗ್ಗಡಹಳ್ಳಿಯ ಲೇಟ್ ಚಿಕ್ಕಣ್ಣ ಎಂಬುವವರ ಪುತ್ರಿ ಸಿ.ಬೇಬಿ ಆತ್ಮಹತ್ಯೆ ಮಾಡಿಕೊಂಡ ಯುವತಿ.
ಇವರು ಇತ್ತೀಚೆಗಷ್ಟೇ ಆಯುರ್ವೇದ ಪಂಚಕರ್ಮದಲ್ಲಿ ತರಬೇತಿ ತಡೆಯಲು ದಾಖಲಾಗಿದ್ದರು. ಗುರುವಾರ ತಲೆ ನೋವು ಎಂದು ಹೇಳಿ ವಿಶ್ರಾಂತಿಗಾಗಿ ಆಸ್ಪತ್ರೆಯ ಕ್ವಾಟ್ರಸ್ ನಲ್ಲಿ ಹಾಸ್ಟೆಲ್ ಗೆ ತೆರಳಿದ್ದರು. ಎರಡು ತಾಸು ಬಳಿಕ ಸಿಬ್ಬಂದಿ ಹೋಗಿ ನೋಡಿದಾಗ ಡೆತ್ ನೋಟ್ ಬರೆದಿಟ್ಟು ಬೇಬಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು.
ಈ ಕುರಿತು ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story