ದರ್ಶನ್ ಸೋಲಂಕಿ ಆತ್ಮಹತ್ಯೆ ಪ್ರಕರಣ: ಐಐಟಿ ಬಾಂಬೆ ವಿದ್ಯಾರ್ಥಿ ಬಂಧನ

ಮುಂಬೈ: 19ರ ಹರೆಯದ ಐಐಟಿ ಬಾಂಬೆ ವಿದ್ಯಾರ್ಥಿ ದರ್ಶನ್ ಸೋಲಂಕಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಪಾಠಿಯೋರ್ವನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಅರ್ಮಾನ್ ಖಾತ್ರಿ ಎಂಬಾತನ್ನು ಬಂಧಿಸಲಾಗಿದೆ.
ದರ್ಶನ್ ಸೋಲಂಕಿ ತನ್ನ ಆತ್ಮಹತ್ಯಾ ನೋಟ್ ನಲ್ಲಿ, "ಅರ್ಮಾನ್ ನೀನು ನನ್ನನ್ನು ಕೊಂದಿದ್ದಿ" ಎಂದು ಬರೆದಿದ್ದ ಎನ್ನಲಾಗಿದೆ. ಈ ಸೂಸೈಡ್ ನೋಟ್ ಅನ್ನು ಮುಂಬೈ ಪೊಲೀಸ್ ವಿಶೇಷ ತನಿಖಾ ತಂಡವು ಪತ್ತೆಹಚ್ಚಿದೆ.
ಈ ಕುರಿತು ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ, "ನಾವು ಅರ್ಮಾನ್ ಹೇಳಿಕೆಯನ್ನು ದಾಖಲಿಸಿದ್ದೇವೆ. ಆದರೆ, ಅವರಿಬ್ಬರ ನಡುವಿನ ವಿವಾದಕ್ಕೆ ಕಾರಣವಾದ ನೈಜ ಅಂಶವನ್ನು ಅವರು ಬಹಿರಂಗಪಡಿಸುತ್ತಿಲ್ಲ. ಆದ್ದರಿಂದ ನಾವು ಆತನನ್ನು ಬಂಧಿಸಿದ್ದೇವೆ. ಸದ್ಯ ನಾವೀಗ ಆತನನ್ನು ಪ್ರಶ್ನಿಸಬಹುದು ಮತ್ತು ಘಟನೆಯ ಕುರಿತ ನಿಖರ ಮಾಹಿತಿಗಳನ್ನು ಪಡೆಯಬಹುದು" ಎಂದು ಹೇಳಿದ್ದಾಗಿ indianexpress.com ವರದಿ ಮಾಡಿದೆ.
Next Story





