‘ಅಂಚೆ ಕಲರವ’ ವಾರ್ಷಿಕ ಸಾಂಸ್ಕೃತಿಕ ಮೀಟ್

ಉಡುಪಿ: ಉಡುಪಿ ಅಂಚೆ ವಿಭಾಗದ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಬೋರ್ಡ್ ವತಿಯಿಂದ ‘ಅಂಚೆ ಕಲರವ’ ವಾರ್ಷಿಕ ಸಾಂಸ್ಕೃತಿಕ ಮೀಟ್ ಕಾರ್ಯಕ್ರಮವನ್ನು ಉಡುಪಿ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನ ದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಯಾಗಿ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೀಲಾ ಬಾಯಿ ಭಟ್ ಮಾತನಾಡಿ, ಸ್ವಾಯತ್ತತೆ ಸಂಸ್ಥೆಗಳು ಪ್ರಾರಂಭವಾಗುತ್ತಿದೆ. ಅಂಚೆ ಇಲಾಖೆಯ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಕ್ಯಾಶಲೆಸ್ ವರ್ಗಾವಣೆ ಸೇರಿದಂತೆ ಇತರ ವಿಚಾರಗಳಿಗೆ ಅಪ್‌ಡೇಟ್ ಆಗಬೇಕಾಗಿದೆ. ಈ ಮೂಲಕ ಅಂಚೆ ಇಲಾಖೆಯಿಂದ ಹೆಚ್ಚು ಆದಾಯ ತಂದುಕೊಡಲು ಸಾಧ್ಯವಾಗುತ್ತದೆ ಎಂದರು.
ನಮ್ಮ ದೇಶದ ಪ್ರತಿ ಹಳ್ಳಿಹಳ್ಳಿಯನ್ನು ತಲುಪಿರುವ ಏಕೈಕ ಮಾಧ್ಯಮ ಅಂಚೆ ಇಲಾಖೆ. ಅಂಚೆ ಕಚೇರಿ ಪ್ರತಿಯೊಬ್ಬರಿಗೂ ಆತ್ಮೀಯ ಸ್ಥಳವಾಗಿದೆ. ಆಧು ನೀಕರಣಕ್ಕೆ ಒಗ್ಗಿಕೊಂಡು ಇಂದು ಸಾಕಷ್ಟು ಸಂಪರ್ಕ ಮಾಧ್ಯಮ ಗಳು, ಪಾರ್ಸೆಲ್ ಕೋರಿಯರ್‌ಗಳು ಬಂದಿವೆ. ಅದಕ್ಕೆ ಸ್ಪರ್ಧಿಯಾಗಿ ಅಂಚೆ ಇಲಾಖೆ ಮುಂದುವರೆಯಬೇಕಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಡುಪಿ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ನವೀನ್ ಚಂದರ್ ವಹಿಸಿದ್ದರು. ಮಣಿಪಾಲ ಕೇಂದ್ರ ಅಂಚೆ ವ್ಯವಹಾರದ ಅಧೀಕ್ಷಕ ಶಂಕರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹು ಮಾನ ವಿತರಿಸಲಾಯಿತು. ಉಡುಪಿ ಅಂಚೆ ವಿಭಾಗದ ಉಪ ಅಂಚೆ ಅಧೀಕ್ಷಕ ಕೆ.ವಿ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ಜತ್ತನ್ನ ಸ್ವಾಗತಿಸಿ ದರು. ಉಡುಪಿ ಪ್ರಧಾನ ಅಂಚೆ ಲಕಚೇರಿಯ ಅಂಚೆಪಾಲಕ ಗುರುಪ್ರಸಾದ್ ವಂದಿಸಿದರು. ಕುಂದಾಪುರ ಅಂಚೆ ಕಚೇರಿಯ ಸೌಮ್ಯ ಓಂಗುರು ಕಾರ್ಯಕ್ರಮ ನಿರೂಪಿಸಿದರು.







