ವಿಟ್ಲ: ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ಹಿರಿಯ ವಿದ್ಯಾರ್ಥಿ ರಾಜೇಶ್ ರೈ ಕೇಪು ಶಾಲೆಗೆ ಭೇಟಿ, ಸನ್ಮಾನ ಸಮಾರಂಭ

ವಿಟ್ಲ: ಮಹಾರಾಷ್ಟ್ರ ಠಾಣೆ ಭವಾನಿ ಫೌಂಡೇಶನ್, ಕೇಪು ಶ್ರೀ ಉಳ್ಳಾಲ್ತಿ ಸೇವಾ ಟ್ರಸ್ಟ್, ಕೇಪು ದ.ಕ.ಜಿ.ಪಂ.ಹಿ. ಪ್ರಾ.ಶಾಲೆಯ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿ ಸಂಘಗಳ ಜಂಟಿ ಆಶ್ರಯದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕಗೊಂಡ ಕೇಪು ಶಾಲೆಯ ಹಿರಿಯ ವಿದ್ಯಾರ್ಥಿ ರಾಜೇಶ್ ರೈ ಕಲ್ಲಂಗಳ ಅವರ ಶಾಲಾ ಭೇಟಿ ಮತ್ತು ಸನ್ಮಾನ ಸಮಾರಂಭ ಕೇಪು ಶಾಲೆಯ ಭವಾನಿ ದೇರಣ್ಣ ಶೆಟ್ಟಿ ರಂಗಮಂದಿರದಲ್ಲಿ ರವಿವಾರ ನಡೆಯಿತು.
ಭವಾನಿ ಗ್ರೂಪ್ ಆಫ್ ಕಂಪೆನೀಸ್ ಎಂಡಿ ಕುಸುಮೋಧರ ಡಿ.ಶೆಟ್ಟಿ ಅಧ್ಯಕ್ಷತೆ ವಹಿಸಿ, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ ದಂಪತಿಯನ್ನು ಹುಟ್ಟೂರಿನಲ್ಲಿ ಸನ್ಮಾನಿಸಿ, ಮಾತನಾಡಿ, ಹಳ್ಳಿಯಲ್ಲಿ ಕಲಿತು ರಾಜ್ಯದ ಉನ್ನತ ಸ್ಥಾನಕ್ಕೇರಿ, ಊರಿಗೆ, ಕನ್ನಡ ನಾಡಿಗೆ ಕೀರ್ತಿ ತಂದ ರಾಜೇಶ್ ರೈ ಅವರು ಉನ್ನತ ಸಾಧನೆ ಮಾಡಿದ್ದಾರೆ ಎಂದರು.
ಲೋಕಸೇವಾ ಆಯೋಗದ ಮಾಜಿ ಸದಸ್ಯ ರಂಗಮೂರ್ತಿ ಎಸ್.ಆರ್. ಉದ್ಘಾಟಿಸಿದರು. ಹೆಬ್ಬಾಳದ ಜಿ.ಕೆ.ವಿ.ಕೆ. ಕೃಷಿ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಶ್ರೀಹರಿ, ವಿಟ್ಲ ಅರಮನೆಯ ಕೃಷ್ಣಯ್ಯ ಕೆ.ವಿಟ್ಲ, ವಿಟ್ಠಲ ಶೆಟ್ಟಿ ಚೆಲ್ಲಡ್ಕ, ಸಮೂಹ ಸಂಪನ್ಮೂಲ ವ್ಯಕ್ತಿ ಪುಷ್ಪಾವತಿ, ಭವಾನಿ ಫೌಂಡೇಶನ್ ಉಪಾಧ್ಯಕ್ಷ ದಿನೇಶ್ ಶೆಟ್ಟಿ, ಕೇಪು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವೆಂಕಟರಾಘವೇಂದ್ರಸ್ವಾಮಿ, ಮುಖ್ಯೋಪಾಧ್ಯಾಯರಾದ ಭಾಗೀರಥಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧನಂಜಯ, ಶ್ರೀನಿವಾಸ ರೈ ಕುಂಡಕೋಳಿ, ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ ಮತ್ತಿತರರು ಉಪಸ್ಥಿತರಿದ್ದರು.
ಕೇಪು ಶ್ರೀ ಉಳ್ಳಾಲ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ಪಡಿಬಾಗಿಲು ಸ್ವಾಗತಿಸಿ, ಪ್ರಸ್ತಾಪಿಸಿದರು. ಶಿಕ್ಷಕ ಸುರೇಶ್ ಶೆಟ್ಟಿ ಪಡಿಬಾಗಿಲು ನಿರೂಪಿಸಿದರು.







