Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಆಂಧ್ರಪ್ರದೇಶ: ಸಾಮೂಹಿಕ ಅತ್ಯಾಚಾರ...

ಆಂಧ್ರಪ್ರದೇಶ: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಎಲ್ಲಾ 13 ಪೊಲೀಸರ ದೋಷಮುಕ್ತಿ ‌

ನ್ಯಾಯವಂಚಿತರಾಗಿದ್ದೇವೆ ಎಂದು ಬುಡಕಟ್ಟು ಸಂತ್ರಸ್ತೆಯ ಅಳಲು

9 April 2023 10:07 PM IST
share
ಆಂಧ್ರಪ್ರದೇಶ: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಎಲ್ಲಾ 13 ಪೊಲೀಸರ ದೋಷಮುಕ್ತಿ ‌
ನ್ಯಾಯವಂಚಿತರಾಗಿದ್ದೇವೆ ಎಂದು ಬುಡಕಟ್ಟು ಸಂತ್ರಸ್ತೆಯ ಅಳಲು

ವಿಶಾಖಪಟ್ಟಣಂ, ಎ.9: 2007ರಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಾಗಿದ್ದ 13 ಪೊಲೀಸರನ್ನು ದೋಷಮುಕ್ತಗೊಳಿಸಿರುವುದಕ್ಕೆ ಸಂತ್ರಸ್ತ ಬುಡಕಟ್ಟು ಮಹಿಳೆಯೊಬ್ಬರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ‘‘ ಓರ್ವ ಪೊಲೀಸನು ಇನ್ನೋರ್ವ ಪೊಲೀಸ್ ಎಸಗಿದ ಅಪರಾಧದ ಬಗ್ಗೆ ಎಂದಿಗೂ ತನಿಖೆ ನಡೆಸಲಾರ’. ನಾವು ನ್ಯಾಯದಿಂದ ವಂಚಿತರಾಗಿದ್ದೇವೆ ’’ಎಂದವರು ಹೇಳಿದ್ದಾರೆ.

2007ರಲ್ಲಿ ಆಗಸ್ಟ್ 20ರಂದು ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯಲ್ಲಿ 11ಬುಡಕಟ್ಟು ಮಹಿಳೆೆಯರ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಎಲ್ಲಾ 13 ಪೊಲೀಸ್ ಸಿಬ್ಬಂದಿಯನ್ನು ವಿಶಾಖಪಟ್ಟಣಂ ಜಿಲ್ಲಾ ನ್ಯಾಯಾಲಯವು ದೋಷಮುಕ್ತಗೊಳಿಸಿತ್ತು. ಈ ಪ್ರಕರಣದಲ್ಲಿ ತನಿಖಾಧಿಕಾರಿಯು ನ್ಯಾಯಸಮ್ಮತ ಹಾಗೂ ಪಕ್ಷಪಾತರಹಿತ ತನಿಖೆಯನ್ನು ನಡೆಸಲು ವಿಫಲರಾಗಿದ್ದಾರೆಂದು ನ್ಯಾಯಾಲಯ ಪ್ರತಿಪಾದಿಸಿತ್ತು. ಆದಾಗ್ಯೂತನಿಖಾಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಸಂತ್ರಸ್ತೆಯರಿಗೆ ಪರಿಹಾರ ಒದಗಿಸುವಂತೆ ವಿಶೇಷ ನ್ಯಾಯಾಧೀಶ ಎಲ್.ಶ್ರೀಧರ್ ಆದೇಶಿಸಿದ್ದಾರೆ.

ನಾವು ನ್ಯಾಯ ವಂಚಿತರಾಗಿದ್ದೇವೆ. ಆದರೆ ನಮಗೆ ಪರಿಹಾರ ಒದಗಿಸಬೇಕೆಂಬ ನ್ಯಾಯಾಲಯದ ಆದೇಶವೊಂದೇ ನಮಗಿರುವ ಆಶಾವಾದದ ಏಕೈಕ ಬೆಳ್ಳಿಗೆರೆಯಾಗಿದೆ. ಅಂದರೆ ನಾವು ಸಂತ್ರಸ್ತರೆಂಬುದನ್ನು ನ್ಯಾಯಾಲಯವು ನಂಬಿದೆ ಎಂದಾಯಿತು ಎಂದು ಬುಡಕಟ್ಟು ಮಹಿಳೆಯೊಬ್ಬರು ತೀರ್ಪಿನ ಬಗ್ಗೆ ಪ್ರತಿಕ್ರಿಯಿಸುತ್ತಾ ತಿಳಿಸಿದರು.

2007ರಲ್ಲಿ ಆಂಧ್ರಪ್ರದೇಶದ ಆಲ್ಲೂರಿ ಸೀತಾರಾಮರಾಜು ಜಿಲ್ಲೆಯ ವಕಪಲ್ಲಿ ಗ್ರಾಮದಲ್ಲಿ ವಿಶೇಷ ಮಾವೋವಾದಿ ನಿಗ್ರಹದಳ ತಂಡವೊಂದು ತಮಗೆ ಬಂದೂಕಿನಿಂದ ಬೆದರಿಸಿ ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿತ್ತೆಂದು ಕೊಂಡ ಬುಡಕಟ್ಟು ಪಂಗಡದ 11 ಮಂದಿ ಮಹಿಳೆಯರು ಆಪಾದಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ದಾಖಲಿಸುವುದರಿಂದ ಹಿಡಿದು, ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವವರೆಗೆ ಪ್ರಕರಣದ ತನಿಖೆಯು ವಿಳಂಬವಾಗಿ ಸಾಗಿತ್ತು ಹಾಗೂ ಲೋಪದೋಷಗಳಿಂದ ಕೂಡಿತ್ತು ಎಂದು ಸಂತ್ರಸ್ತ ಮಹಿಳೆಯರು ಆಪಾದಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 376 (2) (ಪೊಲೀಸ್ ಅಧಿಕಾರಿಯಿಂದ ಅತ್ಯಾಚಾರ) ಹಾಗೂ ಎಸ್ಸಿ/ ಎಸ್ಟಿ ದೌರ್ಜನ್ಯ ವಿರೋಧಿ ಕಾಯ್ದೆಗಳ ವಿವಿಧ ನಿಯಮಗಳಡಿ ಪ್ರಕರಣವನ್ನು ದಾಖಲಿಸಲಾಗಿತ್ತು. ಆದಾಗ್ಯೂ ಸಾಮೂಹಿಕ ಅತ್ಯಾಚಾರದ ಘಟನೆ ನಡೆದು 11 ವರ್ಷಗಳಾದ ಆನಂತರ ಸುಪ್ರೀಂಕೋರ್ಟ್ನ ಮಧ್ಯಪ್ರವೇಶಿಸಿದ ಬಳಿಕವಷ್ಟೇ 2018ರ ಆಗಸ್ಟ್ನಲ್ಲಿ ಪ್ರಕರಣದ ತನಿಖೆ ಆರಂಭಗೊಂಡಿತ್ತು. ಆದರೆನ್ಯಾಯಾಲಯದ ವಿಚಾರಣೆ ಆರಂಭಗೊಂಡ ಸಮಯಕ್ಕೆ 11 ಸಂತ್ರಸ್ತ ಮಹಿಳೆಯರ ಪೈಕಿ ಇಬ್ಬರು ಸಾವನ್ನಪ್ಪಿದ್ದರು.

ತಮ್ಮ ಮೇಲೆ ಅತ್ಯಾಚಾರ ನಡೆದಿದೆಯೆಂದು ಸಂತ್ರಸ್ತೆಯರು ದೂರು ನೀಡಿ ಆರು ದಿನಗಳಾದ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿರುವುದನ್ನು ವಿಶಾಖಪಟ್ಟಣ ಜಿಲ್ಲಾ ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿದೆಯೆದಂು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸುಂಕರ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

 2007ರ ಆಗಸ್ಟ್ 27ರಂದು ಬುಡಕಟ್ಟು ಮಹಿಳೆಯರು ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ಆಂಧ್ರಪ್ರದೇಶ ಸರಕಾರವು ವಿಶಾಖಪಟ್ಟಣ ಗ್ರಾಮಾಂತರ ವಿಭಾಗದ ಪೊಲೀಸ್ ಅಧೀಕ್ಷಕ ಬಿ.ಆನಂದ ರಾವ್ ಅವರನ್ನು ನೇಮಿಸಿತ್ತು. ಆದರೆ ಆನಂದ ರಾವ್ ಅವರು ಸೆಪ್ಟೆಂಬರ್ 8ರವರೆಗೆ ಗ್ರಾಮಕ್ಕೆ ಭೇಟಿ ನೀಡಲಿಲ್ಲ ಅಪರಾಧ ನಡೆದ ಸ್ಥಳವನ್ನು ನಿರ್ಬಂಧಿಸಿರಲಿಲ್ಲ ಮತ್ತು ಪುರಾವೆಗಳನ್ನು ಸಂಗ್ರಹಿಸಿರಲಿಲ್ಲ . ಅಲ್ಲದೆ ಸಾಮೂಹಿಕ ಅತ್ಯಾಚಾರದ ಘಟನೆ ನಡೆದು 17 ದಿನಗಳಾದ ಬಳಿಕವೂ ಪೊಲೀರು ಯಾವುದೇ ದೂರುಗಳನ್ನು ದಾಖಲಿಸಿರಲಿಲ್ಲ.

ಎಫ್ಐಆರ್ ದಾಖಲಿಸಲು ಆರು ದಿನ ವಿಳಂಬಿಸಿದ ಪೊಲೀಸರು ಬಳಿಕ ಮಹಿಳೆಯರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲು ಇನ್ನೂ ಎರಡು ದಿನಗಳನ್ನು ತೆಗೆದುಕೊಂಡಿದ್ದರು. ಪರೀಕ್ಷೆಗಳನ್ನು ನಡೆಸಲು ಸೂಕ್ತ ಸೌಲಭ್ಯಗಳಿಲ್ಲದ ಆಸ್ಪತ್ರೆಗೆ ಸಂತ್ರಸ್ತೆಯರನ್ನು ಕಳುಹಿಲು ಕೂಡಾ ಪೊಲೀಸರು ಯತ್ನಿಸಿದ್ದರೆಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

2018ರಲ್ಲಿ ನ್ಯಾಯಾಲಯದ ವಿಚಾರಣೆ ಆರಂಭವಾಗುವವರೆಗೆ ಆರೋಪಿಗಳ ಗುರುತುಪತ್ತೆ ಪರೀಕ್ಷೆಯನ್ನು ಕೂಡಾ ನಡೆಸಿರಲಿಲ್ಲವೆಂದು ವರಿದ ತಿಳಿಸಿದೆ.

ಈ ಘಟನೆ ನಡೆದ ಬಳಿಕ ಗ್ರಾಮವು ನಮ್ಮನ್ನು ಬಹಿಷ್ಕರಿಸಿತ್ತು. ಅಲ್ಲದೆ ಪತಿ ಹಾಗೂ ಗ್ರಾಮದ ಮುಖ್ಯಸ್ಥರು ನಮ್ಮನ್ನು ಬರ್ಬರವಾಗಿ ಹಾಗೂ ಅಮಾನವೀಯತೆಯಿಂದ ನಡೆಸಿಕೊಂಡರೆಂದು ಆಕೆ ಹೇಳಿದ್ದಾರೆ. ನಮ್ಮ ಮಕ್ಕಳೊಂದಿಗೆ ಮಾತನಾಡಲು ನಮಗೆ ಅವಕಾಶ ನೀಡುತ್ತಿರಲಿಲ್ಲ. ಹಲವಾರುದಿನಗಳ ಬಳಿಕವಷ್ಟೇ ನಮಗೆ ಮನೆಗೆ ಬರಲು ಅನುಮತಿ ದೊರೆಯಿತು ಹಾಗೂ ಪದೇಪದೇ ಶುದ್ದೀಕರಣ ಸ್ನಾನಗಳನ್ನು ಮಾಡಿಸಲಾಯಿತು ಎಂವರು ಹೇಳಿದರು.

share
Next Story
X