Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದುಬೈ: ನೂರುಲ್ ಹುದಾ ವತಿಯಿಂದ ʼದಾವತ್ ಇ...

ದುಬೈ: ನೂರುಲ್ ಹುದಾ ವತಿಯಿಂದ ʼದಾವತ್ ಇ ಇಫ್ತಾರ್ 2023ʼ

9 April 2023 10:08 PM IST
share
ದುಬೈ: ನೂರುಲ್ ಹುದಾ ವತಿಯಿಂದ ʼದಾವತ್ ಇ ಇಫ್ತಾರ್ 2023ʼ

ದುಬೈ: ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ಯು.ಎ.ಇ ರಾಷ್ಟ್ರೀಯ ಸಮಿತಿಯ ಅದೀನದಲ್ಲಿ ಬೃಹತ್ ನೂರುಲ್ ಹುದಾ ದಾವತ್ ಇ ಇಫ್ತಾರ್ 2023 ಕಾರ್ಯಕ್ರಮವು ದುಬೈ ಅಬ್ಜದ್ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವು  ಸೈಯ್ಯದ್ ಅಸ್ಗರ್ ಅಲಿ ತಂಙಲ್, ಅಬ್ದುಲ್ ಖಾದರ್ ಅಸ್ಸ ಅದಿ ಉಸ್ತಾದ್ ಅವರ ನೇತೃತ್ವದಲ್ಲಿ ಮಜ್ಲಿಸ್ಸುನ್ನೂರ್ ಹಾಗೂ ದುವಾ ಮಜ್ಲಿಸ್ ನೊಂದಿಗೆ ಆರಂಭಗೊಂಡಿತು.

ನೂರುಲ್ ಹುದಾ ಯು.ಎ.ಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಶರೀಫ್ ಕಾವು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಸ್ಟರ್ ಮುಹಮ್ಮದ್ ಅಝ್ಫರ್ ಸೋಂಪಾಡಿ ಕಿರಾಅತ್ ಪಠಿಸಿದರು, ನೂರುಲ್ ಹುದಾ ದಾವತ್ ಇ ಇಫ್ತಾರ್ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಸೋಂಪಾಡಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ಯುಎಇ ಸಮಿತಿ ಅಧ್ಯಕ್ಷ ಸೈಯ್ಯದ್ ಆಸ್ಕರ್ ಅಲಿ ತಂಙಳ್ ಮಾತನಾಡಿ ನೂರುಲ್ ಹುದಾ ವಿದ್ಯಾ ಸಂಸ್ಥೆ ನೀಡುತ್ತಿರುವ ಧಾರ್ಮಿಕ ಮತ್ತು ಲೌಕಿಕ ವಿದ್ಯಾಬ್ಯಾಸ ಪದ್ಧತಿಗಳನ್ನು ನೆನಪಿಸಿದರು ಮತ್ತು ನೂರುಲ್ ಹುದಾ ಇದರ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ವಿನಂತಿಸುತ್ತಾ ಪವಿತ್ರ ಕುರಾನ್ ಸೂಕ್ತದೊಂದಿಗೆ ಉದ್ಘಾಟಿಸಿದರು.

ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಪ್ರಾಂಶುಪಾಲ ಅಡ್ವೋಕೇಟ್ ಹನೀಫ್ ಹುದವಿ ಮಾತನಾಡಿ ಕರ್ನಾಟಕದ ಪ್ರಸಕ್ತ ಸನ್ನಿವೇಶಗಳು ಮತ್ತು ಪರಿಹಾರಗಳ ಬಗ್ಗೆ ಮಾತನಾಡಿದರು. ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಮೂಲಕ ಉತ್ತಮ ವಿದ್ಯಾಭ್ಯಾಸ ಪಡೆದು ಸಮುದಾಯಕ್ಕೆ ಉತ್ತಮ ನೇತೃತ್ವ ನೀಡುವ ನಾಯಕರನ್ನು ಸೃಷ್ಟಿಸುವ ಈ ಸುವರ್ಣ ಅವಕಾಶ ಸದುಪಯೋಗ ಪಡಿಸಿಕೊಂಡು ಅದಕ್ಕಾಗಿ ನಾವು ಪ್ರಯತ್ನಿಸೋಣ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಮಸ್ತ ಕೇರಳ ಕೇಂದ್ರ ಮುಶಾವರ ಸದಸ್ಯರು, ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ದುವಾ ಆಶಿರ್ವಚಗೈದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೇಸ್ ಗ್ರೂಪ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಝುಬೈರ್ ಪಿಎ, ಶಾಬಿತ್ ವಿಟ್ಲ ಮೊದಲಾದವರನ್ನು ನೂರುಲ್ ಹುದಾ ದಾವತ್ ಇ ಇಫ್ತಾರ್ ಕಾರ್ಯಕ್ರಮದ ಚಯರ್ ಮೇನ್ ನವಾಝ್ ಬಿಸಿ ರೋಡ್ ಅವರ ನೇತೃತ್ವದಲ್ಲಿ ಯುಎಇ ಸಮಿತಿಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಮಸ್ತ ಕೇರಳ ಕೇಂದ್ರ ಮುಶಾವರ ಸದಸ್ಯರು, ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್, ಉಸ್ತಾದ್ ಇಬ್ರಾಹಿಂ ಕುಟ್ಟಿ ಫೈಝಿ, ಪೇಸ್ ಗ್ರೂಪ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಝುಬೈರ್ ಪಿಎ, ಉದ್ಯಮಿ ಅಶ್ರಫ್ ಶಾ ಮಾಂತೂರು, ಉಸ್ತಾದ್ ಶಾಕಿರ್ ಹುದವಿ, ನೂರುಲ್ ಹುದಾ ಅಬುಧಾಬಿ ಸಮಿತಿ‌ ಪ್ರಧಾನ ಕಾರ್ಯದರ್ಶಿ ಅಶ್ರಫ್ ಪಿಕೆ ಅವರು ಮಾತನಾಡಿ ವಿದ್ಯಾ ಸಂಸ್ಥೆಯ ಅಭಿವೃದ್ಧಿಗಾಗಿ ಸಹಕರಿಸಿದರು.

ವೇದಿಕೆಯಲ್ಲಿ ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿ ರಕ್ಷಣಾಧಿಕಾರಿ ಯೂಸುಫ್ ಈಶ್ವರ ಮಂಗಲ, ಕೋಶಾಧಿಕಾರಿ ಅಶ್ರಫ್ ಯಾಕೂತ್ ನೆಕ್ಕರೆ, ದಾರುನ್ನೂರು ಯುಎಇ ಸಮಿತಿ ಗೌರವಾಧ್ಯಕ್ಷ ಉದ್ಯಮಿ ಮುಹಮ್ಮದ್ ಮುಶ್ತಾಕ್ ಕದ್ರಿ, ಉದ್ಯಮಿ ಶಂಸುದ್ದೀನ್ ಸೂರಲ್ಪಾಡಿ, ದಾರುನ್ನೂರು ಕೇಂದ್ರ ಸಮಿತಿ ಅಧ್ಯಕ್ಷರಾದ  ಉಸ್ಮಾನ್ ಹಾಜಿ ಏರ್ ಇಂಡಿಯಾ, ಅಬ್ದುಲ್ ಸಮದ್ ಹಾಜಿ ಬಂದರ್, ದಾರುನ್ನೂರು ಯುಎಇ ಸಮಿತಿ ಅಧ್ಯಕ್ಷ ಮುಹಮ್ಮದ್ ಮಾಡಾವು, ಕೆಐಸಿ ಯುಎಇ ಸಮಿತಿ ಅಧ್ಯಕ್ಷ ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ, ಉಸ್ತಾದ್ ಕರೀಂ ದಾರಿಮಿ, ಉದ್ಯಮಿ ಉಮ್ಮರ್ ಬೇಡಗ,  ನೂರುಲ್ ಹುದಾ ಶಾರ್ಜಾ ರಾಜ್ಯ ಸಮಿತಿಯ ಅಧ್ಯಕ್ಷ  ಅಶ್ರಫ್ ಗಾಳಿಮುಖ, ಉದ್ಯಮಿ ಯೂಸುಫ್ ಬೇರಿಕೆ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಮಿತಿಯ ಪ್ರಮುಖರಾದ ಅಬ್ದುಲ್ ಸಲಾಂ ಬಪ್ಪಲಿಗೆ, ಅಬ್ದುಲ್ ಖಾದರ್ ಬೈತಡ್ಕ, ಬದ್ರುದ್ದೀನ್ ಹೆಂತಾರ್, ಶೆರೀಫ್ ಕೊಡಿನೀರು, ಅಶ್ರಫ್ ಆರ್ತಿಕೆರೆ, ಅಬ್ದುಲ್ಲ ನಯೀಮಿ, ಅಲೀ ಈಶ್ವರಮಂಗಲ, ಇಸ್ಮಾಯಿಲ್ ತಿಂಗಳಾಡಿ,  ಸಿರಾಜ್ ಬಿ ಸಿ ರೋಡ್, ಉಸ್ಮಾನ್ ಮರೀಲ್, ಮುಹಮ್ಮದ್ ಪಲ್ಲತ್ತೂರು, ನಾಸಿರ್ ಬಪ್ಪಲಿಗೆ,  ಜಾಬಿರ್ ಬೆಟ್ಟಂಪಾಡಿ, ‌ಜಾಬಿರ್ ಬಪ್ಪಲಿಗೆ, ಇಶಾಕ್ ಕುಡ್ತಮುಗೇರು, ಜೌಹರ್ ಉರುಮಣೆ, ಆರಿಫ್ ಕೂರ್ನಡ್ಕ,  ಆಸಿಫ್ ಮರೀಲ್, ಜಬ್ಬಾರ್ ಬೈತಡ್ಕ , ಹಾರಿಸ್ ಪಾಪೆತಡ್ಕ,  ತಾಜುದ್ದೀನ್ ಕೊಚ್ಚಿ,  ಉಮ್ಮರ್ ಇಂದುಮೂಲೆ,  ಅಬೂಬಕ್ಕರ್ ಆತೂರು ಮೊದಲಾದವರು ಕಾರ್ಯಕ್ರಮಕ್ಕೆ ಸಹಕರಿಸಿದರು.

ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ಯುಎಇ, ಕೆಐಸಿ ಯುಎಇ ಸಮಿತಿ, ದಾರುನ್ನೂರು ಯುಎಇ ಸಮಿತಿ, ಶಂಸುಲ್ ಉಲೆಮಾ ತೋಡಾರ್ ಯುಎಇ ಸಮಿತಿ, ದಾರುಸ್ಸಲಾಮು ಯುಎಇ ರಾಷ್ಟ್ರೀಯ ಸಮಿತಿ, ದಾರುಲ್ ಹಸನೀಯ ಯುಎಇ, ವಿಖಾಯ ಕರ್ನಾಟಕ ಯುಎಇ ಸಮಿತಿ, ನೂರುಲ್ ಹುದಾ ಯು.ಎ.ಇ ಸಮಿತಿ, ದುಬೈ, ಅಬುಧಾಬಿ, ಶಾರ್ಜಾ ರಾಜ್ಯ ಸಮಿತಿ ಪದಾಧಿಕರಿಗಳು ಮತ್ತು ಎಲ್ಲಾ ಕ್ಲಸ್ಟರ್ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಹಿತೈಷಿಗಳು ಭಾಗವಹಿಸಿದ್ದರು.

ಶಂಸುಲ್ ಉಲೆಮಾ ಅರೆಬಿಕ್ ಕಾಲೇಜು ತೋಡಾರ್ ದುಬೈ ಸಮಿತಿ ಅಧ್ಯಕ್ಷರಾದ ಅಲಿ ಹಸನ್ ಫೈಝಿ ಉಸ್ತಾದ್, ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಝರ್ ಹಂಡೇಲು ಕಾರ್ಯಕ್ರಮ ನಿರೂಪಿಸಿದರು. ನೂರುಲ್ ಹುದಾ ದುಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ನವಾಝ್ ಕಟ್ಟತ್ತಾರ್ ವಂದಿಸಿದರು.

share
Next Story
X