ದ.ಕ. ಜಿಲ್ಲೆ: ಸಿಆರ್‌ಪಿಎಫ್, ಕೆಎಸ್‌ಆರ್‌ಪಿ, ಸ್ಥಳೀಯ ಪೊಲೀಸರಿಂದ ಪಥ ಸಂಚಲನ

ಮಂಗಳೂರು: ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿ ರವಿವಾರ ಜಿಲ್ಲೆಯ ನಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಸೂಕ್ಷ್ಮ ಸ್ಥಳಗಳಲ್ಲಿ ಸಿಆರ್‌ಪಿಎಫ್, ಕೆಎಸ್‌ಆರ್‌ಪಿ ಮತ್ತು ಸ್ಥಳೀಯ ಪೊಲೀಸರು ಪಥ ಸಂಚಲನ ನಡೆಸಿದರು.
ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಸೂಕ್ಷ್ಮ ಪ್ರಮುಖ ಸ್ಥಳಗಳಾದ ಕಡಬ ಪೇಟೆ, ಕಾಳಾರ, ಕೊಡಿಂಬಾಳ, ಕಲ್ಲುಗುಡ್ಡೆ, ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ವೇಣೂರು ಮೇಲಿನ ಪೇಟೆ, ಕೆಳಗಿನ ಪೇಟೆ ಕರಿಮನೇಳು, ಮೂಡುಕೊಡಿ, ನಾರಾವಿ ಕಡೆಗಳಲ್ಲಿ ಪಥ ಸಂಚಲನ ನಡೆಸಿದರು.
ಪುತ್ತೂರು ನಗರ ಠಾಣಾ ವ್ಯಾಪ್ತಿಯ ಮುಕ್ವೆ - ಪುರುಷರ ಕಟ್ಟೆ ವರೆಗೆ, ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸೂಕ್ಷ್ಮ ಪ್ರಮುಖ ಸ್ಥಳಗಳಾದ ನೆಕ್ಕಿಲಾಡಿ, ಉಪ್ಪಿನಂಗಡಿ ಪೇಟೆ,ಹಿರೇಬಂಡಾಡಿ, ಸುಬ್ರಹ್ಮಣ್ಯ ಕ್ರಾಸ್, ಕರಾಯ, ಕಲ್ಲೇರಿ, ಕುಪ್ಪೆಟ್ಟಿನಲ್ಲಿ ಪಥ ಸಂಚಲ ನಡೆಯಿತು.
ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂಕ್ಷ್ಮ ಪ್ರಮುಖ ಸ್ಥಳಗಳಾದ ಕಾವಲ್‌ಕಟ್ಟೆ, ಧೂಮಳಿಕೆ, ಎನ್‌ಸಿ ರೋಡ್ ಕಡೆಗಳಲ್ಲಿ ಸಿಆರ್‌ಪಿಎಫ್, ಕೆಎಸ್‌ಆರ್‌ಪಿ ಮತ್ತು ಸ್ಥಳೀಯ ಪೊಲೀಸರು ಪಥಸಂಚಲನ ನಡೆಸಿದರು.