ಪೈಥಾಗಾರಸ್ ಪ್ರಮೇಯಕ್ಕೆ ಹೊಸ ವಿಧಾನ ಕಂಡುಹಿಡಿದ ವಿದ್ಯಾರ್ಥಿಗಳು

ವಾಷಿಂಗ್ಟನ್, ಎ.9: ಪೈಥಾಗಾರಸ್ ಪ್ರಮೇಯವನ್ನು ಬಿಡಿಸಲು ಹೊಸ ಸಿದ್ಧಾಂತ ಕಂಡುಹಿಡಿಯುವ ಮೂಲಕ ಅಮೆರಿಕದ ಇಬ್ಬರು ಹೈಸ್ಕೂಲ್ ವಿದ್ಯಾರ್ಥಿಗಳು ಗಣಿತಶಾಸ್ತ್ರಜ್ಞರನ್ನು ಬೆರಗುಗೊಳಿಸಿದ್ದಾರೆ.
ತ್ರಿಕೋನಮಿತಿಯನ್ನು ಬಳಸಿಕೊಂಡು ಪೈಥಾಗಾರಸ್ ಪ್ರಮೇಯವನ್ನು ಸಾಬೀತುಪಡಿಸುವ ಹೊಸ ಮಾರ್ಗವನ್ನು ಕಂಡುಹಿಡಿದಿರುವುದಾಗಿ ಅಮೆರಿಕದ ನ್ಯೂ ಆರ್ಲಿಯನ್ಸ್ ನ ಸೈಂಟ್ ಮೇರೀಸ್ ಅಕಾಡೆಮಿಯ ಕಾಲ್ಸಿಯಾ ಜಾನ್ಸನ್ ಮತ್ತು ನೆಕಿಯಾ ಜಾಕ್ಸನ್ ಹೇಳಿದ್ದು ತಮ್ಮ ಅನ್ವೇಷಣೆಯನ್ನು ಅಮೆರಿಕನ್ ಮ್ಯಾಥೆಮಟಿಕಲ್ ಸೊಸೈಟಿಯ ಸಭೆಯಲ್ಲಿ ಮಂಡಿಸಿದ್ದಾರೆ ಎಂದು `ದಿ ಗಾರ್ಡಿಯನ್' ವರದಿ ಮಾಡಿದೆ.
ಒಂದು ಲಂಬಕೋನ ತ್ರಿಭುಜದಲ್ಲಿ ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮವಾಗಿರುತ್ತದೆ ಎಂದು 2000 ವರ್ಷಗಳಿಗೂ ಹಿಂದಿನ ಪೈಥಾಗಾರಸ್ ಪ್ರಮೇಯ ಹೇಳುತ್ತದೆ. ಈ ಸಮೀಕರಣವನ್ನು ಹೊಸ ರೀತಿಯಲ್ಲಿ ತಿಳಿಯಪಡಿಸಲು ನಾವು ತ್ರಿಕೋನ ಮಿತಿಯ ಸಮೀಕರಣವನ್ನು ಬಳಸಿಕೊಂಡಿದ್ದೇವೆ ಎಂದು ಈ ಇಬ್ಬರು ವಿದ್ಯಾರ್ಥಿಗಳು ಹೇಳಿದ್ದಾರೆ.
Next Story