ಸುದೀಪ್ ಬಿಜೆಪಿ ಪರ ಯಾಕೆ ನಿಂತರು ಎನ್ನುವುದನ್ನು ಬಹಿರಂಗಪಡಿಸಲಿ: ಹನುಮತಯ್ಯ

ಮಂಗಳೂರು: ನಟ ಸುದೀಪ್ ಅವರಿಗೆ ಯಾವುದೇ ಪಕ್ಷದ ಪರ ಪ್ರಚಾರ ಮಾಡಲು ಸ್ವಾತಂತ್ರ್ಯವಿದೆ. ಅದು ಅವರ ಆಯ್ಕೆ. ಆದರೆ ಅವರು ಯಾವ ಕಾರಣಕ್ಕಾಗಿ ಬಿಜೆಪಿ ಪರ ನಿಂತರು ಎನ್ನುವುದನ್ನು ಬಹಿರಂಗಪಡಿಸಲಿ ಎಂದು ರಾಜ್ಯಸಭಾ ಸದಸ್ಯ ಡಾ. ಹನುಮಂತಯ್ಯ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಸುದೀಪ್ ತಮ್ಮ ವೈಯಕ್ತಿಕ ಹಿತವನ್ನು ಕಾಪಾಡಲು ಬಿಜೆಪಿ ಪರ ಪ್ರಚಾರಕ್ಕೆ ನಿಂತರೆ ?ಎನ್ನುವ ಪ್ರಶ್ನೆಗೆ ಉತ್ತರ ನೀಡಲಿ ಎಂದರು.
ಬಿಜೆಪಿ ಪರ ಪ್ರಚಾರಕ್ಕೆ ನಿಂತದಕ್ಕೆ ಅವರ ಸಿನೆಮಾವನ್ನು ಬಹಿಷ್ಕರಿಸಲು ಕಾಂಗ್ರೆಸ್, ಜೆಡಿಎಸ್ ಮುಖಂಡರು ಹೇಳಿದ್ದಾರೆ. ಆದರೆ ಅದರ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ. ಸುದೀಪ್ ನಿಲುವಿನ ಬಗ್ಗೆ ಅನುಮಾನವಿದೆ. ಯಾವ ಕಾರಣದಿಂದ ಬಿಜೆಪಿಯನ್ನು ಆಯ್ಕೆ ಮಾಡಿಕೊಂಡರು ಎಂದು ಜನರ ಮುಂದೆ ಸ್ಪಷ್ಟಪಡಿಸಲಿ ಎಂದು ಅಭಿಪ್ರಾಯಪಟ್ಟರು.
Next Story