Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ. ರೈಪಿ.ಎ. ರೈ9 April 2023 6:36 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಓ ಮೆಣಸೇ...

ಬಿಜೆಪಿ ಎಂದೂ ದ್ವೇಷ ರಾಜಕಾರಣ ಮಾಡುವುದಿಲ್ಲ- ಶ್ರೀರಾಮುಲು, ಸಚಿವ
ಇಂತಹ ಮಾತುಗಳನ್ನು ನೀವು ಸಾರ್ವಜನಿಕವಾಗಿ ಹೇಳಿದರೆ, ಪಕ್ಷದ ಮೂಲಭೂತ ತತ್ವಾದರ್ಶಗಳ ವಿರುದ್ಧ ಮಾತನಾಡಿದ್ದಕ್ಕಾಗಿ ನಿಮ್ಮನ್ನು ಪಕ್ಷದಿಂದ ಹೊರಹಾಕುವ ಸಾಧ್ಯತೆ ಇದೆ.

ಬಾಡಿಗೆ ಮನೆ (ಬಿಜೆಪಿ)ಯಲ್ಲಿ ಎಷ್ಟು ದಿನಾಂತ ಇರುವುದು ಹಾಗಾಗಿ ಸ್ವಂತ ಮನೆ (ಕಾಂಗ್ರೆಸ್)ಗೆ ಹೋಗುತ್ತಿದ್ದೇನೆ- ಎನ್.ವೈ.ಗೋಪಾಲಕೃಷ್ಣ, ಮಾಜಿ ಶಾಸಕ
ಅಲ್ಲಿ ಬೋರ್ ಆದರೆ ಮತ್ತೆ ಮರಳುವುದಕ್ಕೆ ಬಾಡಿಗೆ ಮನೆಯಂತೂ ಇದ್ದೇ ಇದೆ.

ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಇದು ಕೊನೆಯ ಚುನಾವಣೆಯಾಗಿದೆ - ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ
  ಅವರಿಗೆ ಮಾತ್ರವಲ್ಲ ಒಟ್ಟು ದೇಶದ ಮಟ್ಟಿಗೆ ಮುಂದಿನ ಚುನಾವಣೆಯೇ ಕೊನೆಯ ಚುನಾವಣೆಯಾಗಲಿದೆ ಎಂಬ ಊಹಾಪೋಹಗಳಿವೆ.

ಖಾಲಿಸ್ತಾನ ಕೂಗು ಮತ್ತು ಅದರ ನಾಯಕ ಅಮೃತ್ ಪಾಲ್‌ನಂತಹವರು ಹುಟ್ಟಲು ಆರೆಸ್ಸೆಸ್ ಮತ್ತು ಬಿಜೆಪಿಯ ಸಿದ್ಧಾಂತಗಳೇ ಕಾರಣ- ಅಶೋಕ್ ಗೆಹ್ಲೋಟ್, ರಾಜಸ್ಥಾನ ಸಿಎಂ
ಅವರ ಮಡಿಲಲ್ಲಿ ಹುಟ್ಟಿದ ದೊಡ್ಡ ದೊಡ್ಡ ಅನಿಷ್ಟಗಳನ್ನೆಲ್ಲಾ ಬಿಟ್ಟು ಈ ಜುಜುಬಿ ಅನಿಷ್ಟಗಳನ್ನು ಮಾತ್ರ ಪ್ರಸ್ತಾಪಿಸುತ್ತಿದ್ದೀರಲ್ಲಾ!

1947ರಲ್ಲಿ ದೇಶವನ್ನು ಇಬ್ಭಾಗ ಮಾಡಿದ್ದು ಬಹಳ ದೊಡ್ಡ ತಪ್ಪು ಎಂಬ ಅರಿವು ಪಾಕಿಸ್ತಾನದ ಜನರನ್ನು ಕಾಡುತ್ತಿದೆ- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಅವರು ಪಾಠ ಕಲಿತದ್ದಾಯಿತು. ನೀವು ಯಾವಾಗ ಕಲಿಯುತ್ತೀರಿ?

ಸರ್ವಾಧಿಕಾರಿ ಆಡಳಿತಾಧಿಕಾರಿಗಳು ಬಂದಾಗಲೆಲ್ಲಾ ಜಗತ್ತಿನಲ್ಲಿ ಬಹುದೊಡ್ಡ ಕ್ರಾಂತಿಗಳು ನಡೆದಿವೆ- ನವಜೋತ್ ಸಿಂಗ್ ಸಿಧು, ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ
ತಲೆ ನೆಟ್ಟಗಿಲ್ಲದ ಆಡಳಿತಗಾರರ ಬಗ್ಗೆ ಕೂಡಾ ಅಂತಹ ನಂಬಿಕೆಗಳಿವೆ - ಸದ್ಯ ಮೋದಿ ಪಾಳಯ ಸೇರುವುದಕ್ಕೆ ಇದು ನಿಮ್ಮ ಮುನ್ನುಡಿ ಅಲ್ಲ ತಾನೇ?

ನನ್ನ ವರ್ಚಸ್ಸನ್ನು ಹಾಳು ಮಾಡುವ ಸಲುವಾಗಿ ಕೆಲವರು ದೇಶದ ಒಳಗಿನ ಮತ್ತು ಹೊರಗಿನ ಜನರಿಗೆ ಸುಪಾರಿ ನೀಡಿದ್ದಾರೆ- ನರೇಂದ್ರ ಮೋದಿ, ಪ್ರಧಾನಿ
ನೀವು ಒಂದು ಸಾಚಾ ಡಿಗ್ರಿ ತೋರಿಸಿದರೆ ಸಾಕು, ಅಂತಹ ಎಲ್ಲ ಸುಪಾರಿಗಳನ್ನು ಸೋಲಿಸಬಹುದು.

ನಾಯಕತ್ವದ ಹೊಣೆಯನ್ನು ವಹಿಸಿಕೊಂಡು ಉನ್ನತ ಸ್ಥಾನ ತಲುಪಿದ ಮೇಲೆ ಒಂದು ಹಂತದಲ್ಲಿ ಏಕಾಂಗಿತನ ಕಾಡುತ್ತದೆ. - ಡಾ.ಎನ್.ಆರ್.ನಾರಾಯಣ ಮೂರ್ತಿ, ಇನ್ಫೋಸಿಸ್ ಸಹ-ಸಂಸ್ಥಾಪಕ
ಅದು ಉನ್ನತ ಸ್ಥಾನ ಅಲ್ಲ, ಭ್ರಮೆಯ ಸ್ಥಾನ. ಮೂರು ದಿನಗಳ ಮಟ್ಟಿಗೆ, ಚೇಂಬರ್ ಬಿಟ್ಟು ರಿಸೆಪ್ಷನ್‌ನಲ್ಲಿ ಕೂತಿರಿ, ಕಾರಿನ ಗಾಜು ತೆರೆದಿಟ್ಟು ಪ್ರಯಾಣಿಸಿ ನೋಡಿ.

ಪ್ರಧಾನಿ ಮೋದಿ ಜನರಿಂದ ಪಿಕ್ ಪಾಕೆಟ್ ಮಾಡಲು ಗುತ್ತಿಗೆ ಪಡೆದಿದ್ದಾರೆ- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ವ್ಯಾಪಕ ದರೋಡೆ ಎಂಬ ಮಹಾಪರಾಧಕ್ಕೆ ಪಿಕ್ ಪಾಕೆಟ್ ಎಂಬ ಮುದ್ದಾದ ಪುಟ್ಟ ಹೆಸರು ಇಟ್ಟುಬಿಟ್ರಲ್ಲಾ ಸಾರ್?

ಕಾಂಗ್ರೆಸ್ ತನ್ನ ಚೀಲದಲ್ಲಿ ಜನರಿಗೆ ಹಾಕಲು ಮಕ್ಮಲ್ ಟೋಪಿ ಇಟ್ಟುಕೊಂಡಿದೆ - ಬಿ.ಎಲ್.ಸಂತೋಷ್, ಬಿಜೆಪಿ ರಾ.ಸಂ. ಕಾರ್ಯದರ್ಶಿ
ನೀವು ನಿಮ್ಮ ಚೀಲದಲ್ಲಿ ಬಚ್ಚಿಟ್ಟಿರುವ ವಿಷಾಹಾರಕ್ಕಿಂತ ವಾಸಿ.

ಪಶ್ಚಿಮ ದೇಶಗಳು ಇತರ ದೇಶಗಳ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಬೇಕು - ಎಸ್.ಜೈಶಂಕರ್, ಕೇಂದ್ರ ಸಚಿವ
ನಾವು ಗಣನೆಗೆ ತೆಗೆದುಕೊಳ್ಳುವುದು ಆ ದೇಶಗಳು ನಮ್ಮ ಬಗ್ಗೆ ಆಡುವ ಹೊಗಳಿಕೆಯ ಮಾತುಗಳನ್ನು ಮಾತ್ರ.

ಬಿಹಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೊಂಬಿಗೆ ಅವಕಾಶ ಇರುವುದಿಲ್ಲ- ಅಮಿತ್ ಶಾ, ಕೇಂದ್ರ ಸಚಿವ
ಹಾಗೆಂದು ಜನರನ್ನು ನಂಬಿಸಲಿಕ್ಕಾಗಿ ಅಷ್ಟು ದೊಡ್ಡ ಗಲಭೆ ಮಾಡಿಸಿಬಿಟ್ಟಿರಾ?

ನೆಂಟರೇ ಬಂದು ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿ ಎಂದರೂ ಅವರ ಮಾತುಗಳನ್ನು ನಂಬಬೇಡಿ- ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ
ನೆಂಟರ ಬಗ್ಗೆ ಇಂತಹ ಸಂಶಯ ಮೂಡುವುದಕ್ಕೆ ಕಾರಣವೇನು?

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್ ಪಕ್ಷವನ್ನು ಮುಗಿಸುವ ಹುನ್ನಾರ ನಡೆಸಿವೆ- ದೇವೇಗೌಡ, ಮಾಜಿ ಪ್ರಧಾನಿ
ಹೊಣೆ ಯಾರದ್ದೇ ಇರಲಿ, ಪಕ್ಷವಂತೂ ಈ ಬಾರಿ ಮುಗಿಯುವುದು ಖಚಿತ ಎಂಬುದು ನಿಮ್ಮ ಮಾತಿನಿಂದಿಂದ ಸ್ಪಷ್ಟವಾಗುತ್ತದೆ.

ಕಾಂಗ್ರೆಸ್‌ನವರಿಗೆ ಗುಂಡಿಗೆನೂ ಇಲ್ಲ, ಗಂಡಸ್ತನವೂ ಇಲ್ಲ- ಆನಂದ್ ಸಿಂಗ್, ಸಚಿವ
ಜನರಿಗೆ ಅದ್ಯಾವುದೂ ಬೇಡ. ಒಂದಷ್ಟು ಪ್ರಾಮಾಣಿಕತೆ, ಬದ್ಧತೆ ಮತ್ತು ದಕ್ಷತೆ ಇದ್ದರೆ ಸಾಕು.

ಈ ಬಾರಿಯ ಚುನಾವಣೆಯಲ್ಲಿ ಯಾವುದೇ ನಿಂಬೆ ಹಣ್ಣು ಕೆಲಸ ಮಾಡಲ್ಲ- ಡಿ.ಕೆ.ಸುರೇಶ್, ಸಂಸದ
ಜನರ ಬದುಕಿಗೆ ಹುಳಿ ಹಿಂಡಲು ಯಾವ ಹಣ್ಣು ಬಳಸುತ್ತೀರಿ ಹಾಗಾದರೆ ?

ಬಿಜೆಪಿಯ ಭ್ರಷ್ಟ ಸರಕಾರದ ಹುಟ್ಟಿಗೆ ಕಾರಣನಾದೆನಲ್ಲ ಎಂದು ನನ್ನ ಅಂತರಾತ್ಮ ತಿವಿಯುತ್ತಿದೆ- ಎಚ್.ವಿಶ್ವನಾಥ್, ವಿ.ಪ. ಸದಸ್ಯ
ಸಿಕ್ಕಿದ ದುಡ್ಡೆಲ್ಲ ಬರಿದಾದ ಬಳಿಕದ ಪಶ್ಚಾತ್ತಾಪ.

ಮಾಧ್ಯಮಗಳಲ್ಲಿ ಎಷ್ಟೇ ಸುದ್ದಿ ಮಾಡಿದರೂ ದೇವೇಗೌಡರ ಕುಟುಂಬವನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ- ಎಚ್.ಡಿ. ರೇವಣ್ಣ, ಮಾಜಿ ಸಚಿವ
ಒಡೆಯುವವರು ಕುಟುಂಬದೊಳಗೆ ಇದ್ದಾರಲ್ಲ.

ದೇಶದ ಸ್ವಾತಂತ್ರ ಹೋರಾಟದಲ್ಲಿ ಸಾವರ್ಕರ್‌ರ ತ್ಯಾಗವನ್ನು ತಳ್ಳಿ ಹಾಕಲಾಗದು- ಶರದ್ ಪವಾರ್, ಎನ್‌ಸಿಪಿ ಮುಖ್ಯಸ್ಥ
ಪದೇ ಪದೇ ಕ್ಷಮಾಪಣೆ ಕೇಳುವುದು ಸಣ್ಣ ತ್ಯಾಗವೇನೂ ಅಲ್ಲ.

ಮೀಸಲಾತಿ ವಿಚಾರದಲ್ಲಿ ನಮ್ಮ ಸರಕಾರ ಧ್ವನಿ ಇಲ್ಲದವರಿಗೆ ಜೇನನ್ನು ಹಂಚಿದೆ- ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಬೆಲ್ಲದ ನೀರು ಎನ್ನುವುದು ಜನರಿಗೆ ಗೊತ್ತಾಗಿ ಬಿಟ್ಟಿದೆ

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಪಿ.ಎ. ರೈ
ಪಿ.ಎ. ರೈ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X